|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕೋಟ್ಯಂತರ ರೂ.ಗಳ ಅಕ್ರಮ ನಡೆದಿರುವ ಶಂಕೆಯ ಶುದ್ಧ ಕುಡಿಯುವ ನೀರು ಘಟಕಗಳ (ಆರ್​ಓ ವಾಟರ್ ಪ್ಲಾಂಟ್) ಕುರಿತು ಜಂಟಿ ಸದನ ಸಮಿತಿ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ತನಿಖೆ ಪೂರ್ಣಗೊಂಡು ಅಕ್ರಮಕ್ಕೆ ಕಾರಣರಾಗಿರುವವರ ವಿರುದ್ಧ ಕಾನೂನು ಕ್ರಮ ಆಗಬೇಕೆಂಬ ಒತ್ತಾಯ ಕೇಳಿ ಬಂದಿದೆ. ಕುಡಿಯುವ ನೀರಿನಲ್ಲಿ ರಾಸಾಯನಿಕಗಳು ಮಿಶ್ರಣವಾಗಿ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದನ್ನು ತಪ್ಪಿಸಲು ಶುದ್ಧೀಕರಿಸಿದ ನೀರಿನ ಸರಬರಾಜು ಘಟಕಗಳನ್ನು ಸ್ಥಾಪಿಸಲಾಗಿದೆ. 2013ರಿಂದ ಈ ಘಟಕಗಳ ನಿರ್ಮಾಣ ಕಾರ್ಯ ನಡೆದಿದೆ. ಇವನ್ನು ಸ್ಥಾಪನೆ ಮಾಡಲು ನಿಯಮಗಳನ್ನು ರೂಪಿಸ ಲಾಗಿತ್ತು. ಆದರೆ, ಬಹುತೇಕ ಕಡೆಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಒಂದೆಡೆ, ವಿಧಾನಮಂಡಲದ ಸದನ ಸಮಿತಿ ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕ ಮೌಲ್ಯಾಂಕನ ಪ್ರಾಧಿಕಾರ ಆರ್​ಓಗಳ ಕುರಿತು ಮೌಲ್ಯ ಮಾಪನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಎರಡು ಇಲಾಖೆಯಿಂದ ಸ್ಥಾಪನೆ:ರಾಜ್ಯದಲ್ಲಿ ಆರ್​ಓ ಘಟಕಗಳನ್ನು ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನಗರಾಭಿವೃದ್ಧಿ ಇಲಾಖೆಯ ಮೂಲಕ ಸ್ಥಾಪಿಸಲಾಗಿದೆ.
ನಿಯಮ ಉಲ್ಲಂಘನೆ ಪ್ರಮಾಣ:ರಾಜ್ಯದಲ್ಲಿರುವ ಆರ್​ಓ ಘಟಕಗಳಲ್ಲಿ ಶೇ.30ರಷ್ಟು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಮೌಲ್ಯಾಂಕನ ಪ್ರಾಧಿಕಾರದ ವರದಿ ಗುರುತಿಸಿದೆ. ಇವೆಲ್ಲವೂ ನೀರಿನ ಎಟಿಎಂಗಳಾಗಿದ್ದು ಅದರಿಂದ ಬಂದಿರುವ ಆದಾಯದ ಬಗ್ಗೆ ನಿಖರ ಮಾಹಿತಿಯೇ ಲಭ್ಯವಾಗುವುದಿಲ್ಲ.
ಘಟಕಗಳ ಸ್ಥಾಪನೆಗೆ ಕಾರಣ:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಅಂತರ್ಜಲದಲ್ಲಿ ಸಾಕಷ್ಟು ವಿಷಕಾರಿ ಅಂಶಗಳಿವೆ. ಫ್ಲೋರೈಡ್, ಅರ್ಸೆನಿಕ್, ಸಾಲ್ಟ್, ಮ್ಯಾಂಗನೀಸ್, ಐರನ್, ನೈಟ್ರೇಟ್ ಸೇರಿದಂತೆ ಅನೇಕ ರಾಸಾಯನಿಕಗಳಿವೆ. ಇವುಗಳಿಂದ ದಂತ ಕ್ಷಯ, ಮೂಳೆ ಸವೆತದಂತಹ ಕಾಯಿಲೆಗಳು ಕಾಣಿಸಿಕೊಂಡಿದ್ದವು. ಆದ್ದರಿಂದ ಶುದ್ಧೀಕರಿಸಿದ ನೀರನ್ನು ನೀಡುವ ಉದ್ದೇಶದಿಂದ ಆರ್​ಓಗಳನ್ನು ಸ್ಥಾಪಿಸಲಾಯಿತು.
ಸದನ ಸಮಿತಿ ಏನು ಮಾಡಿದೆ?:ಸದನ ಸಮಿತಿ ಈಗಾಗಲೆ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ಸಾಕಷ್ಟು ಮಾಹಿತಿಯೂ ಲಭ್ಯವಾಗಿದೆ. ದೂರು ಇರುವ ಆರ್​ಓ ಘಟಕಗಳ ಸ್ಥಳ ಪರಿಶೀಲನೆ ಮಾಡಲು ಉದ್ದೇಶಿಸಿದೆ. ಇನ್ನೂ ಕನಿಷ್ಠ ಮೂರು ಸಭೆಗಳನ್ನು ನಡೆಸಿದ ನಂತರವಷ್ಟೇ ವರದಿಯನ್ನು ಅಂತಿಮಗೊಳಿಸಲಿದೆ.
ವರದಿಗಳೆಲ್ಲ ಮೂಲೆಗುಂಪು:ಸದನದಲ್ಲಿ ನಡೆದ ಚರ್ಚೆಯ ಆಧಾರದಲ್ಲಿ ಸದನ ಸಮಿತಿಗಳು ರಚನೆಯಾ ಗುತ್ತವೆ. ಸಮಿತಿಗಳು ವರದಿ ಸಲ್ಲಿಸುತ್ತವೆ. ಆದರೆ, ಕ್ರಮಗಳಾಗುವುದಿಲ್ಲ. ಬಹುತೇಕ ವರದಿಗಳು ವಿಧಾನಸೌಧದದಲ್ಲಿ ಧೂಳು ಹಿಡಿದಿವೆ ಎಂಬ ದೂರು ಸರ್ವೆ ಸಾಮಾನ್ಯವಾಗಿದೆ.
ಅನಾರೋಗ್ಯದ ಆತಂಕ:ಆರ್​ಓ ಘಟಕಗಳ ನಿರ್ವಹಣೆಯಲ್ಲಿ ವಿಫಲವಾದಲ್ಲಿ ಕುಡಿಯುವ ನೀರು ಮೇಲ್ನೋಟಕ್ಕೆ ರುಚಿಯಾಗಿದ್ದರೂ ವಿಟಮಿನ್ ಡಿ ಕೊರತೆಯಾಗಿ ಆ ನೀರು ಬಳಕೆದಾರರು ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಆತಂಕವೂ ಇದೆ. ಸಮರ್ಪಕ ಫಿಲ್ಟರ್ ಬಳಸದಿದ್ದರೆ ಖನಿಜಾಂಶಗಳು ನಾಶವಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಂಪನಿಗಳಿಗೆ ದಂಡ:ಸರ್ಕಾರ 2018 ರಲ್ಲಿಯೇ 11 ಕಂಪನಿಗಳಿಗೆ ದಂಡ ವಿಧಿಸಿದೆ. ದಂಡದ ಮೊತ್ತ 8.19 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿತ್ತು ಎಂದು ಸರ್ಕಾರ ಸದನದಲ್ಲಿ ಚರ್ಚೆಗೆ ಉತ್ತರ ನೀಡಿತ್ತು.
26,569 ಘಟಕಗಳು:ರಾಜ್ಯದಲ್ಲಿ ಒಟ್ಟಾರೆ 26,569 ಆರ್​ಓ ಘಟಕಗಳಿವೆ. ಇವುಗಳ ಸ್ಥಾಪನೆಗಾಗಿ ಬೊಕ್ಕಸಕ್ಕೆ 3,500 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿರಬಹುದೆಂದು ಅಂದಾಜಿದೆ. ಅದರಲ್ಲಿ ಅಕ್ರಮ ಎಷ್ಟಾಗಿರಬಹುದು ಎಂಬುದು ಸದನ ಸಮಿತಿ ವರದಿ ಬಂದಾಗ ಮಾತ್ರವೇ ಬಯಲಿಗೆ ಬರಲಿದೆ. ಪ್ರತಿ ಘಟಕ ನಿರ್ವಣಕ್ಕೆ 6.09 ಲಕ್ಷ ರೂ.ಗಳಿಂದ 21.15 ಲಕ್ಷ ರೂ.ಗಳ ತನಕ ವೆಚ್ಚವಾಗಿದೆ ಎಂಬ ಅಂದಾಜಿದೆ. ಕೆಲವು ಆರ್​ಓಗಳ ನಿರ್ವಣಕ್ಕೆ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ಪಾವತಿ ಮಾಡಲಾಗಿದೆ ಎಂಬ ದೂರುಗಳಿವೆ.
ಸದನ ಸಮಿತಿ ಅಧ್ಯಕ್ಷನಾಗಿ ನೇಮಕವಾದ ನಂತರ ಎರಡು ಸಭೆ ನಡೆಸಿದ್ದೇನೆ. ಇನ್ನೂ ಕೆಲವು ಸಭೆಗಳನ್ನು ನಡೆಸಬೇಕಾಗಿದೆ. ಸಮಿತಿಯ ಮಾಹಿತಿಯನ್ನು ಸಭಾಧ್ಯಕ್ಷರಿಗೆ ನೀಡುತ್ತೇವೆ. ಇದೇ ಅಧಿವೇಶನದ ಸಂದರ್ಭದಲ್ಲಿ ವರದಿ ನೀಡುವ ಉದ್ದೇಶವಿದೆ.
|ಅಭಯ್ ಪಾಟೀಲ್ಶಾಸಕ ಹಾಗೂ ಸದನ ಸಮಿತಿ ಅಧ್ಯಕ್ಷ
ಸದನ ಸಮಿತಿಗೆ ಎರಡು ವರ್ಷ:2021ರಲ್ಲಿ ಸರ್ಕಾರ ಸದನ ಸಮಿತಿ ರಚಿಸಿತು. ಆರಗ ಜ್ಞಾನೇಂದ್ರ ಸಮಿತಿ ಅಧ್ಯಕ್ಷರಾಗಿದ್ದರು. ಅವರು ಗೃಹ ಸಚಿವರಾದ ನಂತರ ಬಿಜೆಪಿ ಶಾಸಕ ಅಭಯ ಪಾಟೀಲ್ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ. ಅಭಯ್ ಪಾಟೀಲ್ ಅಧ್ಯಕ್ಷತೆಯಲ್ಲಿ ಎರಡು ಸಭೆಗಳು ನಡೆದಿವೆ. ಇನ್ನೂ ಸಭೆಗಳನ್ನು ನಡೆಸುವ ಹಾಗೂ ಸ್ಥಳ ಪರಿಶೀಲನೆ ಮಾಡುವ ಉದ್ದೇಶವನ್ನು ಸಮಿತಿ ಹೊಂದಿದೆ. ಆದ್ದರಿಂದ ಈ ಅಧಿವೇಶನದಲ್ಲಿ ವರದಿ ನೀಡಲಾಗುವುದೇ ಎಂಬುದು ಯಕ್ಷಪ್ರಶ್ನೆಯಾಗಿದೆ.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 8 =
Remember me
