ವಿಜಯವಾಣಿ ವಿಶೇಷಶಿವಮೊಗ್ಗ/ತುಮಕೂರು
ಕರೊನಾ ಸಾಂಕ್ರಾಮಿಕ ನಿರ್ವಹಣೆ ಕಾರಣಕ್ಕೆ ರಾಜ್ಯ ಸರ್ಕಾರ ಮತ್ತಷ್ಟು ಅಧಿಕಾರ ನೀಡಿರುವುದರಿಂದ ಗ್ರಾಮ ಪಂಚಾಯಿತಿಗಳೀಗ ಆರ್ಥಿಕವಾಗಿ ತಾಲೂಕು ಪಂಚಾಯಿತಿಗಳಿಗಿಂತಲೂ ಪವರ್​ಫುಲ್ ಆಗಿವೆ. ಕ್ರಿಯಾಯೋಜನೆಯಿಂದ ಆರಂಭವಾಗಿ ಯೋಜನೆ ಅನುಷ್ಠಾನದವರೆಗೆ ಯಾವುದಕ್ಕೂ ಜಿಲ್ಲಾ ಪಂಚಾಯಿತಿ ಸಿಇಒ ಅನುಮೋದನೆ ಬೇಕಿಲ್ಲವಾದ್ದರಿಂದ ಈ ಎಲ್ಲ ಹೊಣೆ ಹೊತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಆಡಿದ್ದೇ ಆಟವಾಗಿದೆ. ಈ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಕೆಲವು ಪಿಡಿಒಗಳು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದಾರೆ.
ಕರೊನಾದಿಂದ ತತ್ತರಿಸಿರುವ ಗ್ರಾಮೀಣ ಜನಜೀವನವನ್ನು ತಹಬಂದಿಗೆ ತರಲು ಸರ್ಕಾರ, 14 ಮತ್ತು 15ನೇ ಹಣಕಾಸು ಹಾಗೂ ಎಸ್​ಡಿಆರ್​ಎಫ್ ಅಡಿ 50 ಸಾವಿರ ರೂ.ಗಳನ್ನು ಆರೋಗ್ಯ ತುರ್ತು ಸಂದರ್ಭದಲ್ಲಿ ಸದ್ಬಳಕೆ ಮಾಡಿಕೊಳ್ಳುವ ಅಧಿಕಾರವನ್ನು ಗ್ರಾಪಂ ಪಿಡಿಒಗಳಿಗೆ ನೀಡಿದೆ. ಲಭ್ಯ ಅನುದಾನದಲ್ಲಿ ಶೇ.25 ಎಸ್​ಸಿ, ಎಸ್​ಟಿ ಹಾಗೂ ಶೇ.6 ಅಂಗವಿಕಲರ ಕಲ್ಯಾಣಕ್ಕೆ ಮೀಸಲಿರಿಸಬೇಕು. ಅನುದಾನ ಬಳಕೆ ಬಗ್ಗೆ ಪ್ರತಿ ವರ್ಷ ಲೆಕ್ಕಪರಿಶೋಧನೆ ನಡೆಯುತ್ತದೆ. ಆ ವೇಳೆ ಲೋಪ ಕಂಡುಬಂದರೆ ಪಿಡಿಒ, ಅಧ್ಯಕ್ಷರು ಉತ್ತರಿಸಕಾಗುತ್ತದೆ. ಅಕ್ರಮ ಎಸಗಿದರೆ ಸಂಬಂಧಪಟ್ಟವರಿಂದ ಹಣ ವಸೂಲಿ ಮಾಡಲು ಅವಕಾಶವಿದೆ. ಪಿಡಿಒ ತಲೆದಂಡವೂ ಆಗಲಿದೆ.
ಸಾಮಾನ್ಯ ಸಭೆಗೆ ಅಡ್ಡಿ:ಕರೊನಾ ತುರ್ತು ಪರಿಸ್ಥಿತಿಯಲ್ಲಿ ಹಳ್ಳಿಗಳಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರ್ಚಚಿಸಿ ತೀರ್ಮಾನ ಕೈಗೊಳ್ಳಲು ಸಾಮಾನ್ಯ ಸಭೆ ಕರೆಯುವಂತೆ ಬಹುತೇಕ ಕಡೆ ಪಿಡಿಒಗಳಿಗೆ ಗ್ರಾಪಂ ಅಧ್ಯಕ್ಷರು ಸೂಚಿಸಿದ್ದರೂ ಆ ಕಾರ್ಯ ಆಗಿಲ್ಲ. ಹಣ ಬಳಕೆಗೆ ಕಡಿವಾಣ ಬೀಳಲಿದೆ ಎಂಬ ಕಾರಣಕ್ಕೆ ಸೋಂಕಿನ ಭೀತಿ ನೆಪವೊಡ್ಡಿ ಪಿಡಿಒಗಳು ಈವರೆಗೆ ಸಾಮಾನ್ಯ ಸಭೆ ಕರೆದಿಲ್ಲ. ಟಾಸ್ಕ್ ಫೋರ್ಸ್ ಸಭೆ ನಡೆಸಲು ಅವಕಾಶ ಇರುವಾಗ 15-20 ಸದಸ್ಯರ ಸಾಮಾನ್ಯಸಭೆ ಕರೆಯಲು ಸಹಕರಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ.
3.217 ಕೋಟಿ ರೂ. ಅನುದಾನ:15ನೇ ಹಣಕಾಸು ಆಯೋಗದ ಅನುದಾನದಲ್ಲಿ 3,217 ಕೋಟಿ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.85 ಅನುದಾನ ಗ್ರಾಪಂಗಳಿಗೆ ಬಿಡುಗಡೆಯಾದರೆ, ಶೇ.10 ತಾಪಂ ಹಾಗೂ ಶೇ.5 ಜಿಪಂಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ 2,734 ಕೋಟಿ ರೂ. ಸಿಗಲಿದೆ. ಜನಸಂಖ್ಯೆ ಆಧಾರದಲ್ಲಿ ಗ್ರಾಪಂಗಳಿಗೆ ಅನುದಾನ ಬಿಡುಗಡೆಯಾಗಲಿದೆ. ಮಾರ್ಗಸೂಚಿ ಪ್ರಕಾರ ಕನಿಷ್ಠ 15ರಿಂದ ಗರಿಷ್ಠ 30 ಲಕ್ಷ ರೂ.ವರೆಗೆ ಗ್ರಾಪಂಗಳಿಗೆ ಸಿಗಲಿದೆ. ತಾಪಂ ಹಾಗೂ ಜಿಪಂ ಅನುದಾನವನ್ನೂ ಬಳಕೆ ಮಾಡಿಕೊಂಡು ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಗ್ರಾಪಂ ಸದಸ್ಯರಿಗೆ ಹೆಚ್ಚು ಬಲ ಬಂದಂತಾಗಿದೆ.
ಯಾವುದಕ್ಕೆ ಎಷ್ಟು ಅನುದಾನ?:ಪ್ರತಿ ಗ್ರಾಪಂ ಅನುದಾನದ ಪೈಕಿ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ತಲಾ ಶೇ.25 ಅನ್ನು ಕ್ರಿಯಾ ಯೋಜನೆ ರೂಪಿಸಬೇಕು. ಉಳಿದ ಶೇ.50 ರಲ್ಲಿ ಕರೊನಾ ನಿರ್ವಹಣೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ಬೇಕಾಬಿಟ್ಟಿ ವ್ಯಯ:ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ಖರೀದಿ, ಹಳ್ಳಿಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಸೋಂಕಿತ ಮೃತರ ಅಂತ್ಯಸಂಸ್ಕಾರಕ್ಕೆ ಜೆಸಿಬಿ ಬಳಕೆ ಸೇರಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಬೇಕಾಬಿಟ್ಟಿ ಹಣ ವ್ಯಯಿಸಲಾಗಿದೆ. ಮಾಸ್ಕ್ , ಪಿಪಿಇ ಕಿಟ್ ಪೂರೈಕೆ, ಸ್ಯಾನಿಟೈಸ್ ಮಾಡಲು ಹಳ್ಳಿಗಳಲ್ಲಿ ಏಜೆಂಟ್​ಗಳು ಹುಟ್ಟಿಕೊಂಡಿದ್ದಾರೆ. ಕರೊನಾ ಹಳ್ಳಿಗಳಿಗೆ ವಕ್ಕರಿಸಿದ ಬಳಿಕ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದಾಗಿ, ಚೆಕ್​ಗಳಿಗೆ ಸಹಿ ಹಾಕುವಂತೆ ಅಧ್ಯಕ್ಷರ ಮೇಲೆ ಪಿಡಿಒಗಳು ಒತ್ತಡ ಹಾಕುತ್ತಿದ್ದಾರೆ.
ಕ್ರಿಯಾಯೋಜನೆ ಹೇಗೆ?:ಸರ್ಕಾರ 15ನೇ ಹಣಕಾಸು ಯೋಜನೆಗೆ ಕ್ರಿಯಾಯೋಜನೆ ರೂಪಿಸಲು ಕೆಲ ಮಾರ್ಗಸೂಚಿ ನಿಗದಿಪಡಿಸಿದೆ. ಈ ಹಿಂದೆ ಗ್ರಾಪಂಗಳು ರೂಪಿಸುವ ಕ್ರಿಯಾಯೋಜನೆಗಳಿಗೆ ಜಿಪಂ ಸಿಇಒ ಅನುಮೋದನೆ ನೀಡಬೇಕಿತ್ತು. ಈಗ ಗ್ರಾಪಂ ಸಾಮಾನ್ಯ ಸಭೆಯಲ್ಲೇ ಇದಕ್ಕೆ ಒಪ್ಪಿಗೆ ಪಡೆದು ಯೋಜನೆ ಅನುಷ್ಠಾನಗೊಳಿಸಬಹುದು. ಆದರೆ ಕೆಲವು ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.
ಕರೊನಾ ನಿರ್ವಹಣೆಗೆ ಅನುಕೂಲ ವಾಗಲಿ ಎಂಬ ಕಾರಣಕ್ಕೆ ಗ್ರಾಪಂ ಮಟ್ಟದಲ್ಲೇ 15ನೇ ಹಣಕಾಸು ಅನುದಾನ ಬಳಕೆಗೆ ಕ್ರಿಯಾಯೋಜನೆ ರೂಪಿಸುವ ಅಧಿಕಾರ ನೀಡಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಕರೊನಾ ತಡೆಗಟ್ಟಲು ಅಗತ್ಯವಿರುವ ಅನುದಾನ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
|ಕೆ.ಎಸ್.ಈಶ್ವರಪ್ಪಗ್ರಾಮೀಣಾಭಿವೃದ್ಧಿ, ಪಂಚಾಯತ್​ರಾಜ್ ಸಚಿವ
ಕರೊನಾ ನೆಪವೊಡ್ಡಿ ಗ್ರಾಪಂ ಸಾಮಾನ್ಯ ಸಭೆ ನಡೆಸಲು ಪಿಡಿಒ ಗಳು ಸಹಕರಿಸುತ್ತಿಲ್ಲ. ಕರೊನಾ ನಿಯಂತ್ರಣ ಕಾರ್ಯಗಳಿಗೆ ವೆಚ್ಚ ಮಾಡಿರುವುದಾಗಿ ಚೆಕ್​ಗಳಿಗೆ ಸಹಿ ಹಾಕುವಂತೆ ಅಧ್ಯಕ್ಷರ ಮೇಲೆ ಒತ್ತಡ ಹಾಕುತ್ತಿರುವ ದೂರು ಕೇಳಿಬರುತ್ತಿದೆ.
|ಕಾಡಶೆಟ್ಟಿಹಳ್ಳಿ ಸತೀಶ್ಪ್ರಧಾನ ಕಾರ್ಯದರ್ಶಿ, ಪಂಚಾಯತ್ ರಾಜ್ಯ ಪರಿಷತ್
ಕರೊನಾ ನಿರ್ವಹಣೆಗೆ ತುರ್ತು ಸಂದರ್ಭದಲ್ಲಿ 14, 15ನೇ ಹಣಕಾಸು ಅನುದಾನ ಬಳಕೆಗೆ ಪಿಡಿಒಗಳಿಗೆ ಅನುಮತಿ ಇದೆ. ಕರೊನಾ ಕಾರಣಕ್ಕೆ ಸಾಮಾನ್ಯಸಭೆ ಕರೆದಿಲ್ಲ. ಟಾಸ್ಕ್​ಫೋರ್ಸ್​ನಲ್ಲಿ ಕೈಗೊಳ್ಳುವ ಠರಾವಿನಂತೆ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಅನುದಾನ ಬಳಸಲಾಗುತ್ತಿದೆ. ಕ್ರಿಯಾಯೋಜನೆ ರೂಪಿಸಲು ಸಮಯ ಇಲ್ಲ.
|ಕೆ.ವಿದ್ಯಾಕುಮಾರಿಜಿಪಂ ಸಿಇಒ, ತುಮಕೂರು
ಅಡುಗೆ ಮನೆವರೆಗೆ ಹಿಂಬಾಲಿಸಿಕೊಂಡು ಬಂದು ವೃದ್ಧೆಯ ಸರ ಎಗರಿಸಿದ ಕಳ್ಳ!

ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸ್ ವಶಕ್ಕೆ!; ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 4 =
Remember me
