ಬೆಂಗಳೂರು:ಮಳೆಗಾಲದಲ್ಲಿ ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳು ಸಾಮಾನ್ಯವಾಗಿದೆ. ಅನೇಕ ಜನರು ವಿಶೇಷವಾಗಿ ಚಳಿಗಾಲದಲ್ಲಿ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪರಿಹಾರಕ್ಕಾಗಿ ಔಷಧಗಳು ಮತ್ತು ಟಾನಿಕ್ಗಳನ್ನು ಬಳಸಲಾಗುತ್ತದೆ. ಆದರೆ ಸಮಸ್ಯೆಯ ತೀವ್ರತೆ ಕಡಿಮೆಯಾಗುವುದಿಲ್ಲ. ತಾತ್ಕಾಲಿಕವಾಗಿ ಕಡಿಮೆಯಾಗುವಂತೆ ಕಾಣುತ್ತದೆ.
ಅನೇಕ ಜನರು ಹಗಲಿನ ಬದಲು ರಾತ್ರಿಯಲ್ಲಿ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಕೆಲವರಿಗೆ ಎಷ್ಟೇ ಔಷಧಿ ತಿಂದರೂ ಕೆಮ್ಮು ಕಡಿಮೆಯಾಗುವುದಿಲ್ಲ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದೀರಾ.. ಆದರೆ ಒಮ್ಮೆ ಈ ಟಿಪ್ಸ್ ಟ್ರೈ ಮಾಡಿ…

ನಿರಂತರ ಕೆಮ್ಮಿನಿಂದ ಬಳಲುತ್ತಿರುವವರಿಗೆ ಈ ಸಲಹೆ ಚೆನ್ನಾಗಿ ಕೆಲಸ ಮಾಡುತ್ತದೆ. ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ನಂತರ ಕುದಿಸಿದ ತುಳಸಿ ನೀರನ್ನು ಸ್ವಲ್ಪ ತಣ್ಣಗಾಗಿಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.
ಒಣ ಕೆಮ್ಮಿನಿಂದ ಬಳಲುತ್ತಿರುವವರಿಗೆ ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿಯಬೇಕು ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಅರ್ಧ ಟೀ ಚಮಚ ಸೋಂಪು ಕಾಳಿನ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಒಂದು ಚಮಚ ಜೇನುತುಪ್ಪದಲ್ಲಿ 1 ಚಮಚ ಶುಂಠಿ ರಸ ಮತ್ತು 1 ಚಮಚ ದಾಳಿಂಬೆ ರಸವನ್ನು ಮಿಶ್ರಣ ಮಾಡಿ ಸೇವಿಸಿ. ಇದನ್ನು ದಿನಕ್ಕೆ 2 ಅಥವಾ 3 ಬಾರಿ ಮಾಡಿದರೆ ತುಂಬಾ ಒಳ್ಳೆಯ ಫಲಿತಾಂಶವನ್ನು ಕಾಣಬಹುದು ಎಂದು ಹೇಳಲಾಗುತ್ತದೆ.

ಎರಡು ಮೆಣಸಿನ ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ರಸವನ್ನು ನುಂಗಬೇಕು. ಎರಡು ಮೂರು ದಿನ ಹೀಗೆ ಮಾಡಿದರೆ ಕೆಮ್ಮು ನಿವಾರಣೆಯಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
