
ಬೆಂಗಳೂರು:ಆಗಿಂದಾಗ್ಗೆ ಕುರ್ಚಿ ಬಿಟ್ಟು ಬೇರೆ ಕಡೆ ಕೂರುತ್ತಿದ್ದವರಿಗೆ ಮೇಲ್ಮನೆಯಲ್ಲಿ ನಡೆದ ಕುರ್ಚಿ ಪ್ರಸಂಗ ಇರುಸು ಮುರುಸು ಉಂಟುಮಾಡಿತು.ತಮ್ಮ ಖುರ್ಚಿ ಬಿಟ್ಟು ಬೇರೆ ಬೇರೆ ಕಡೆ ಕುಳಿತಿದ್ದ ಯತೀಂದ್ರ ಸಿದ್ದರಾಮಯ್ಯ ಹಾಗೂ ಉಳಿದ ಸದಸ್ಯರನ್ನು ಗಮನಿಸಿದ ಬಿಜೆಪಿ ಡಿ.ಎಸ್.ಅರುಣ್, ಈ ರೀತಿ ಕುರ್ಚಿಯಲ್ಲಿ ಕುಳಿತು ಮಾತನಾಡುವುದು ನಿಯಮ ಬಾಹಿರ ಎಂದು ಆಕ್ಷೇಪಿಸಿದರು.ಈ ಬಗ್ಗೆ ಕೂಡಲೆ ಗಮನ ಹರಿಸಿದ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಪ್ರಾಣೇಶ್, ಹೊಸಬರು ಅವರವರ ಆಸನದಲ್ಲೇ ಕುಳಿತುಕೊಳ್ಳಬೇಕು ಎಂದು ತಾಕೀತು ಮಾಡಿದರು.ಉಪ ಸಭಾಪತಿ ಮಾತಿಗೆ ನನ್ನ ಖುರ್ಚಿ ಖಾಲಿ ಇಲ್ಲ ಅದಕ್ಕೆ ಇಲ್ಲಿದ್ದೇನೆ ಎಂದ ಯತೀಂದ್ರ ಸಿದ್ದರಾಮಯ್ಯ ವಿವರಣೆ ನೀಡಲು ಮುಂದಾದರು. ಆಗ ಯತೀಂದ್ರ ಕುರ್ಚಿಯಲ್ಲಿ ಡಿಸಿಎಂ ಡಿಕೆ.ಶಿವಕುಮಾರ್ ಕುಳಿತಿದ್ದರು. ಅವರ ಕಡೆಗೆ ತಿರುಗಿ ತಿರುಗಿ ನೋಡಿ ಸದಸ್ಯರು ಮುಗುಳ್ನಕ್ಕರು. ಕೂಡಲೆ, ಯತೀಂದ್ರ ಮೀಸಲಾಗಿದ್ದ ಆಸನದಿಂದ ಎದ್ದು ಡಿಕೆ.ಶಿವಕುಮಾರ್ ಮುಗುಳ್ನಗುತ್ತ ಯತೀಂದ್ರಗೆ ಖುರ್ಚಿಯತ್ತ ಕರೆದು ತಾವು ಹೊರ ನಡೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
