ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ತಮಿಳುನಾಡಿನ ಊಟಿಯಲ್ಲಿ ಆ.14ರಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಭಿಮಾನಿ ಬಳಗ, ಲಿಂಗಾಯಿತ ಸಂಘದ ವತಿಯಿಂದ ಊಟಿಯ ಹಿಟ್ಟಕಲ್ ಕೋತಗೇರಿ ಎಚ್‌ಆರ್‌ಎಂ ಮೆಮೋರಿಯಲ್ ಮೆಟ್ರಿಕ್ಯೂಲೇಶನ್ ಶಾಲೆಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ.ಹುಣಸೂರು ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಊಟಿ ಗುರುಬಸವ ಶಾಂತಿನಿಕೇತನ ಮಠದ ಶ್ರೀ ಬಸವಯೋಗಿ ಪ್ರಭುಸ್ವಾಮಿಗಳು, ಭಾಗವಹಿಸಲಿದ್ದು, ಹಿರಿಯ ವಕೀಲ ಭೋಜರಾಜ ಅಧ್ಯಕ್ಷತೆ ವಹಿಸುವರು.ತೆಲಂಗಾಣದ ಸಂಸದ ಬಿ.ಬಿ.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಡಿಜಿಪಿ ಶಂಕರ ಮಹದೇವ ಬಿದರಿ, ಮೈಸೂರು ಮುಕ್ತ ವಿವಿ ಕುಲಪತಿ ಶರಣಪ್ಪ ವೈಜಿನಾಥ ಹಲಸೆ, ಮುಂಬೈ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಮಹೇಶ್ ಮುದ್ದ, ಕೇಂದ್ರ ಕಲ್ಲಿದ್ದಲು ಮಂಡಳಿ ಸದಸ್ಯ ರಾಜೇಶ್ ಚಂದ್ರ ಭೋಜರಾಜ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + sixteen =
Remember me
