
ಬೆಂಗಳೂರು:ವಿಧಾನ ಪರಿಷತ್‌ನಲ್ಲಿ ತನ್ನ ಸಂಖ್ಯಾ ಬಲ ಹೆಚ್ಚಿಸಿಕೊಂಡು ಬಹುಮತ ಗಳಿಸಕೊಳ್ಳಲು ಕಾಂಗ್ರೆಸ್ ಈಗಿನಿಂದಲೇ ಪ್ರಯತ್ನ ನಡೆಸುತ್ತಿದೆ.ಉಪ ಚುನಾವಣೆ ಬಳಿಕ ಕಾಂಗ್ರೆಸ್ ಸದಸ್ಯತ್ವ ಸ್ಥಾನ 34ಕ್ಕೆ ಏರಿಕೆ ಆಗಿದ್ದರೂ, ಬಹುಮತಕ್ಕೆ ಇನ್ನೂ 4 ಸದಸ್ಯರ ಕೊರತೆ ಇದೆ.ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ರಾಜೀನಾಮೆ ನೀಡಿರುವುರಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ೋಷಣೆ ಆಗಿದ್ದು, ವಿಧಾನಸಭೆಯಲ್ಲಿರುವ ಸಂಖ್ಯಾ ಬಲದ ಆಧಾರದ ಮೇಲೆ ಈ ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ. ಅಲ್ಲಿಗೆ ಕಾಂಗ್ರೆಸ್ ಬಲದ ಸಂಖ್ಯೆ 35ಕ್ಕೆ ಹೆಚ್ಚಳವಾಗುವುದು ನಿಚ್ಚಳವಾಗಿದೆ.ಪಕ್ಷೇತರವಾಗಿ ಆಯ್ಕೆಯಾಗಿರುವ ಲಖನ್ ಜಾರಕಿಹೊಳಿ ಕಳೆದ ಸರ್ಕಾರದ ಅವಧಿಯಲ್ಲಿ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ಈಗ ಅವರನ್ನು ಕಾಂಗ್ರೆಸ್‌ಗೆ ಸೆಳೆದುಕೊಳ್ಳಲು ಚಿಂತನೆ ನಡೆಸಿದೆ. ಒಂದು ವೇಳೆ ಲಖನ್ ಕಾಂಗ್ರೆಸ್ ಬೆಂಬಲಿಸಿದರೂ, ಸಂಖ್ಯಾ ಬಲ 36ಕ್ಕೆ ಏರಲಿದೆ.ಕೋಟಾ ಶ್ರೀನಿವಾಸ ಪೂಜಾರಿ ಅವರ ಕ್ಷೇತ್ರವನ್ನು ಗೆದ್ದರೆ ಕಾಂಗ್ರೆಸ್ ಸಂಖ್ಯಾ ಬಲ 37ಕ್ಕೆ ಏರಲಿದ್ದು, ಬಹುಮತಕ್ಕೆ ಇನ್ನು ಒಬ್ಬರ ಕೊರತೆ ಮಾತ್ರ ಆಗಲಿದೆ. ಆಗ ಪರಿಸ್ಥಿತಿಯನ್ನು ಹೇಗಾದರೂ ನಿಭಾಯಿಸಬಹುದು ಎನ್ನುವುದು ಕಾಂಗ್ರೆಸ್‌ನ ಯೋಚನೆ.ಈ ಹಿನ್ನೆಲೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ರಾಜೀನಾಮೆ ನೀಡಿದ ಕಾರಣಕ್ಕಾಗಿ ತೆರವಾಗಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಸರ್ಕಸ್ ಮಾಡುತ್ತಿದೆ. ಮತ್ತೊಂದೆಡೆ ತನ್ನ ಸಂಖ್ಯಾ ಬಲಕ್ಕೆ ತೀರಾ ಅಗತ್ಯ ಇರುವ ಕಾರಣಕ್ಕಾಗಿ ಈ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಹಾಗಾಗಿ ಎರಡೂ ಪಕ್ಷಗಳಿಗೆ ಕೋಟಾ ಶ್ರೀನಿವಾಸ ಪೂಜಾರಿ ಅವರ ಕ್ಷೇತ್ರ ಮಹತ್ವದ್ದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
