¸
ಬೆಂಗಳೂರು:ಬುಕ್ ಬ್ರಹ್ಮ ಸಂಸ್ಥೆ ಆಗಸ್ಟ್ ತಿಂಗಳಲ್ಲಿ 3ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024’ ಎಂಬ ಅತಿ ದೊಡ್ಡ ಭಾಷಾ ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದ್ದು, ಈ ಉತ್ಸವದಲ್ಲಿ ಕನ್ನಡ – ಮಲಯಾಳಂ – ತೆಲುಗು – ತಮಿಳು ಮತ್ತು ಇಂಗ್ಲಿಷ್ ಭಾಷೆಯ ಸುಮಾರು 300 ಸಾಹಿತಿಗಳು 80ಕ್ಕಿಂತಲೂ ಹೆಚ್ಚು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ತಿಳಿಸಿದ್ದಾರೆ.
ನಗರದ ಬೆಂಗಳೂರು ಪ್ರೆಸ್‌ಕ್ಲಬ್ ಆವರಣದಲ್ಲಿ ’ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024’ ರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಸಭಾಂಗಣ ಮತ್ತು ಆವರಣದಲ್ಲಿ ಆಗಸ್ಟ್ 9-10-11 ರಂದು ಸಾಹಿತ್ಯ ಉತ್ಸವ ನಡೆಯಲಿದೆ. ಸಮಾನಾಂತರವಾಗಿ ನಡೆಯಲಿರುವ ನಾಲ್ಕು ಗೋಷ್ಠಿಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿದ ದಕ್ಷಿಣ ಭಾರತದ ಶ್ರೇಷ್ಠ ಸಾಹಿತಿಗಳಾದ ಕೆ.ಸಚ್ಚಿದಾನಂದನ್, ಪೌಲ್ ಝಕಾರಿಯ, ಬಿ.ಜಯಮೋಹನ್, ಪೆರುಮಾಳ್ ಮುರುಗನ್, ಬೆನ್ಯಮಿನ್, ವೋಲ್ಲ, ಎಚ್.ಎಸ್. ಶಿವಪ್ರಸಾದ್, ವಿವೇಕ ಶಾನಭಾಗ, ಗಿರೀಶ್ ಕಾಸರವಳ್ಳಿ, ಮಮತಾ ಸಾಗರ್, ಎಸ್.ಜಿ.ವಾಸುದೇವ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಾ.ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ ಪ್ರಸ್ತುತ ಕಾಲಘಟ್ಟ ಮತ್ತು ಸಾಂಸ್ಕೃತಿಕ ಸ್ಥಿತಿ- ಗತಿಯನ್ನು ಅವಲೋಕಿಸಿದರೆ ಇಂದು ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ಅಗತ್ಯವಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡ ತಮಿಳು ಮಲಯಾಳಂ – ತೆಲುಗು ಭಾಷೆಗಳ ಕೊಡುಗೆ ಅಪಾರವಾಗಿದ್ದು. ಐತಿಹಾಸಿಕವಾಗಿ ಕೂಡ ಮಹತ್ವತ್ತಾದ ನಾಲ್ಕೂ ಭಾಷೆಗಳನ್ನು ಒಂದೇ ವೇದಿಕೆಗೆ ಕರೆ ತಂದು ಪರಸ್ಪರ ಸಂವಾದಕ್ಕೆ ಅನುಕೂಲ ಮಾಡಿಕೊಡುವುದು ಈ ಉತ್ಸವದ ಉದ್ದೇಶ ಎಂದರು.
ಭಾರತದಲ್ಲಿ ಇದೇ ಮೊದಲ ಬಾರಿಗೆ ನಾಲ್ಕೂ ಭಾಷೆಯನ್ನು ಒಗ್ಗೂಡಿಸುವ ದೊಡ್ಡ ಪ್ರಯತ್ನ ನಡೆದಿದ್ದು, ಹಲವು ಮೊದಲುಗಳಿಗೆ ಸಾಕ್ಷಿಯಾಗಲಿರುವ ಬುಕ್ ಬ್ರಹ್ಮ ಸಾಹಿತ್ಯ ಕನ್ನಡದ ನೆಲೆದ ಹೆಮ್ಮೆಯಾಗಿ ರೂಪುಗೊಳ್ಳಲಿದೆ.ಸಾಹಿತಿಗಳ ಜತೆಯಲ್ಲಿ ದಕ್ಷಿಣ ಭಾರತದ ಪ್ರಕಾಶಕರ ಒಗ್ಗೂಡುವಿಕೆ ಕೂಡ ಇಲ್ಲಿ ಆಗಲಿದೆ.ಈ ವೇಳೆ ಅಮೆರಿಕದ ಚಿಕಾಗೊ ವಿಶ್ವವಿದ್ಯಾಲಯದ ಪ್ರತಿನಿಧಿಗಳು ದಕ್ಷಿಣ ಭಾರತದ ಪ್ರಕಾಶಕರ ಜೊತೆ ದುಂಡುಮೇಜಿನ ಸಭೆ ನಡೆಸಲಿದ್ದಾರೆ. ಭಾರತೀಯ ಭಾಷೆಗಳಲ್ಲಿನ ಮಹತ್ವದ ಸಾಹಿತ್ಯ ಕೃತಿಗಳನ್ನು ಗುರುತಿಸಿ, ಅವನ್ನು ಇಂಗ್ಲಿಷ್ ಭಾಷೆಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಕೈ ಹಾಕಿರುವ ಚಿಕಾಗೊ ವಿಶ್ವವಿದ್ಯಾಲಯ ಅದಕ್ಕಾಗಿಯೇ ಎಸ್ ಎ ಎಲ್ ಟಿ (ಖಅಔ) ಎಂಬ ವಿಶೇಷ ಅಂಗವನ್ನೇ ರಚಿಸಿದೆ ಎಂದು ವಿವರಿಸಿದರು.
ಸಾಹಿತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ ಇದು ಕೇವಲ ಸಾಹಿತ್ಯ ಉತ್ಸವ ಮಾತ್ರವಲ್ಲ. ದಕ್ಷಿಣ ಭಾರತದ ಕಲೆ – ಸಂಸ್ಕೃತಿ – ಸಾಹಿತ್ಯ ಮಹಾಸಂಗಮ. ಉತ್ಸವದ ಮೂರು ದಿನಗಳ ಅವಧಿಯಲ್ಲಿ ಒಟ್ಟು 9 ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿದ್ದು, ಪದ್ಮಶ್ರೀ ವೆಂಟಕೇಶ ಕುಮಾರ್, ಆರ್. ಕೆ. ಪದ್ಮನಾಭ, ಪ್ರಕಾಶ್ ರೈ, ಬಿಂದುಮಾಲಿನಿ, ಮಾನಸಿ ಸುಧೀರ್ ಮತ್ತು ಮೇಘನಾ ಚಂದ್ರಮೌಳಿ ಅವರಿಂದ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಮೈಸೂರಿನ ನಟನ, ಶ್ರೀರಂಗಪಟ್ಟಣದ ನಿರ್ದಿಗಂತ ರಂಗ ಪ್ರದರ್ಶನ ಮತ್ತು ಕೆರೆಮನೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ಕೂಡ ನಡೆಯಲಿದೆ ಎಂದರು.
3 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಐದು ಭಾಷೆಗಳ 60ಕ್ಕಿಂತ ಹೆಚ್ಚು ಪುಸ್ತಕ ಮಳಿಗೆಗಳು ಇರಲಿವೆ.ಜತೆಗೆ ಉತ್ಸವಕ್ಕೆ ಪೋಷಕರ ಜತೆ ಬರುವ ಚಿಕ್ಕ ಮಕ್ಕಳಿಗಾಗಿ ಪ್ರತ್ಯೇಕ ಚಿಣ್ಣರ ಅಂಗಳ ಕೂಡ ಇರಲಿದೆ. ಉತ್ಸವದಲ್ಲಿ ಸುಮಾರು ಇಪ್ಪತ್ತು ಚಿತ್ರ ಕಲಾವಿದರ ಕೃತಿಗಳ ಪ್ರದರ್ಶನ-ಮಾರಾಟ ಕೂಡ ಏರ್ಪಡಿಸಲಾಗಿದೆ. ಒಟ್ಟಾರೆ ದಕ್ಷಿಣ ಭಾರತದ ಮನಸ್ಸುಗಳೆಲ್ಲ ಒಂದಾಗಿ ಸಾಹಿತ್ಯ- ಕಲೆ – ಸಂಸ್ಕೃತಿಯ ಕುರಿತು ಪರಸ್ಪರ ತಮ್ಮ- ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಮಹತ್ವದ ವೇದಿಕೆಯಾಗಿ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ವನ್ನು ರೂಪಿಸುವ ಉದ್ದೇಶ ನಮ್ಮದು ಎಂದು ಹೇಳಿದರು.
ನೋಂದಣಿ ಆರಂಭ, ಉಚಿತ
ಬೆಂಗಳೂರು, ಜುಲೈ 13- ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024ಕ್ಕೆ ಎಲ್ಲ ಸಾಹಿತ್ಯಾಸಕ್ತರಿಗೂ ಉಚಿತ ಪ್ರವೇಶವಿದೆ. ಆದರೆ, ನೋಂದಣಿ ಕಡ್ಡಾಯವಾಗಿದ್ದು,ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲರೂ ಡಿಡಿಡಿಡಿ.ಚಿಟಟಚ್ಟಿಞಚ್ಞ್ಞಠಿಛಿಠಿ ್ಚಟ್ಞಜಿ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಭಾಗವಹಿಸುವಿಕೆಯನ್ನು ನೋಂದಣಿ ಮಾಡಿಕೊಳ್ಳಿ. ನೋಂದಾವಣಿ ಮಾಡಿಕೊಂಡ ಪ್ರತಿಯೊಬ್ಬರಿಗೂ ಇಮೇಲ್ ಮೂಲಕ ನೋಂದಾವಣಿ ಸಂಖ್ಯೆ ಬಂದು ತಲುಪುತ್ತದೆ ಎಂದು ತಿಳಿಸಿದರು. ಉತ್ಸವದ ನಿರ್ದೇಶಕ ಪತ್ರಕರ್ತ ಸತೀಶ್ ಚಪ್ಪರಿಕೆ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
