ಆನೇಕಲ್:ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು, ಕೋಟಿಗಟ್ಟಲೆ ರೂ. ವಂಚನೆ ಮಾಡಿರುವ ಆರೋಪ ದಂಪತಿ ವಿರುದ್ಧ ಕೇಳಿ ಬಂದಿದ್ದು, ಪರಾರಿಯಾಗಿರು ಗಂಡ-ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ಈ ವಂಚನೆ ಪ್ರಕರಣ ನಡೆದಿದೆ. ಚೀಟಿ ವ್ಯವಹಾರ ನಡೆಸುತ್ತಿದ್ದ ಬನ್ನೇರುಘಟ್ಟ ನಿವಾಸಿ ಪೌಲಿನಾ ಹಾಗೂ ಮಂಜುನಾಥ್ ಪರಾರಿಯಾಗಿರುವ ದಂಪತಿ. ಇವರಿಬ್ಬರ ವಿರುದ್ಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಹುತೇಕ ಬಡವರಿಂದಲೇ ಚೀಟಿ ಹಾಕಿಸಿಕೊಂಡಿದ್ದ ಈ ದಂಪತಿ ಇದೀಗ ಪರಾರಿಯಾಗಿದ್ದು, ಸಂತ್ರಸ್ತ ಚೀಟಿದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೂ ಮಾರುವವರು, ಅಂಗವಿಕಲರು, ಮನೆಗೆಲಸದವರು ಮುಂತಾದ 50ಕ್ಕೂ ಅಧಿಕ ಮಂದಿ ಇವರ ಬಳಿ ಚೀಟಿ ಹಾಕಿದ್ದು, ಈ ದಂಪತಿ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

ಚೀಟಿ ಹಣ ಕೇಳಿದರೆ ಧಮಕಿ ಹಾಕುತ್ತಿದ್ದ ದಂಪತಿ ಪರಾರಿಯಾಗಿದ್ದು, ಸಂತ್ರಸ್ತರು ಅವರ ಮನೆಗೆ ಬೀಗ ಜಡಿದು, ಮಂಜುನಾಥ್ ತಂದೆ-ತಾಯಿಯ ಮನೆಯ ಮುಂದೆ ಕಾದುಕುಳಿತ ಪ್ರಸಂಗ ನಡೆದಿದೆ. ಆದರೆ ನಮಗೂ ಪುತ್ರನಿಗೂ ಯಾವುದೇ ಸಂಬಂಧವಿಲ್ಲ ಎಂದು ಪಾಲಕರು ಉತ್ತರಿಸಿದ್ದಾರೆ ಎನ್ನಲಾಗಿದೆ. ಮಂಜುನಾಥ್ ವಿರುದ್ಧ ಇನ್ನೂ ಹಲವು ವಂಚನೆ ಪ್ರಕರಣಗಳು ದಾಖಲಾಗಿರುವ ಆರೋಪವೂ ಇದೆ.
ಶಾಸಕರ ಸ್ಟಿಕ್ಕರ್​​ ಇರುವ ಕಾರಿಗೆ ದ್ವಿಚಕ್ರ ವಾಹನ ಸವಾರ ಬಲಿ; ತಲೆ ಮೇಲೇ ಹರಿದು ಹೋದ ಕಾರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 4 =
Remember me
