ದಾವಣಗೆರೆ:ಕೋವಿಡ್ ಸೋಂಕಿಗೆ ಒಳಗಾಗಿರುವ ಪತಿ-ಪತ್ನಿ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು, ಕ್ವಾರಂಟೈನ್​ ಕೇಂದ್ರದಲ್ಲೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ದಾವಣಗೆರೆಯ ಬಾಪೂಜಿ ಆಸ್ಪತ್ರೆಯ ಕ್ವಾರಂಟೈನ್ ಕೇಂದ್ರದಲ್ಲಿ ಈ ಅಪರೂಪದ ವಿವಾಹ ವಾರ್ಷಿಕೋತ್ಸವ ನಡೆದಿದೆ. ದಾವಣಗೆರೆ ಸ್ಮಾರ್ಟ್‌ಸಿಟಿ‌ ಯೋಜನೆಯ (ಐಡೆಕ್) ಟೀಮ್ ಲೀಡರ್ ಉಮಾಪತಿ ಹೊಂಬಣ್ಣ ಹಾಗೂ ಅವರ ಪತ್ನಿ ಮಧುಮತಿ ಈ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಇವರಲ್ಲಿ ಕೋವಿಡ್​ ಪಾಸಿಟಿವ್​ ದೃಢಪಟ್ಟಿದ್ದು, ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಕ್ವಾರಂಟೈನ್​ಗೆ ಒಳಗಾಗಿದ್ದ ಇವರು, ತಮ್ಮ 28ನೇ ವಿವಾಹ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಮ್ಯಾರೇಜ್​ ಆ್ಯನಿವರ್ಸರಿ ಪ್ರಯುಕ್ತ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಸಿಹಿ‌ ಹಂಚಿ ಸಂಭ್ರಮವನ್ನೂ ಪಟ್ಟಿದ್ದಾರೆ. ಅಲ್ಲದೆ ಕರೊನಾ ನಿಯಂತ್ರಣಕ್ಕಾಗಿ‌ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ ವಾರಿಯರ್ಸ್​​ಗೆ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…

ಕರೊನಾ ಸೋಂಕಿತ ಉಚ್ಚ ನ್ಯಾಯಾಲಯದ​ ಸಿಬ್ಬಂದಿಗೂ ಹಾಸಿಗೆ ಸಿಗುತ್ತಿಲ್ಲ; ಹೈಕೋರ್ಟ್ ಕಳವಳ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೊನಾ ಸೋಂಕು, ಖಾಸಗಿ ಹೋಟೆಲ್​ನ 40 ಸಿಬ್ಬಂದಿಗೆ ಕೋವಿಡ್​ ಟೆಸ್ಟ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
