ಮೈಸೂರು:ಮಾಡಿದ್ದ ಸಾಲ ತೀರಿಸಲಾಗದೆ ಚಿಂತೆಗೆ ಒಳಗಾದ ದಂಪತಿ, ಅದೇ ಭಯದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಪ್ರಕರಣ ನಡೆದಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಸಂಬ್ರವಳ್ಳಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಬೆಟ್ಟಪ್ಪ (50), ರುಕ್ಮಿಣಿ (43) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಗ್ರಾಮದ ಜಮೀರ್ ಸಾಹೇಬ್​ ತೋಟದಲ್ಲಿ‌ ಕಳೆದ 20 ವರ್ಷಗಳಿಂದ ಈ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಕೆಲಸ ಮಾಡಿಕೊಂಡು ತೋಟದ ಮನೆಯಲ್ಲೇ ವಾಸವಿದ್ದ ದಂಪತಿ, ಇತ್ತೀಚೆಗೆ ಮಕ್ಕಳ ಮದುವೆ ಮಾಡಿಸಿದ್ದು, ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆಯನ್ನು ಸಹ ಕಟ್ಟಿಸಿದ್ದರು. ಆದರೆ ಸಾಲ ತೀರಿಸಲು ಪರದಾಡುತ್ತಿದ್ದ ಇವರು ತೋಟದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

ಉದ್ಯೋಗಿಯ ಆಕ್ರೋಶಕ್ಕೆ ಕಂಪನಿ ಮುಖ್ಯಸ್ಥನ ಸಂಸಾರವೇ ನಾಶ: 4 ಕೊಲೆ, 8 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ

ನಿಮ್ಮೂರಿನ ಪೊಲೀಸ್​ ಠಾಣೆ ಮೇಲ್ದರ್ಜೆಗೆ?; ಇಲ್ಲಿದೆ ವಿವರ, ನೋಡಿಕೊಳ್ಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
