ವಿಜಯಪುರ:ಮದುವೆಯಾಗಿ ಗಂಡ, ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಮಹಿಳೆಯೊಬ್ಬಳು ಮೈದುನನೊಂದಿಗೂ ಸಂಬಂಧ ಬೆಳೆಸಿ ದಾರುಣ ಅಂತ್ಯ ಕಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಗಂಡನೇ ಹೆಂಡತಿ ಮತ್ತು ತಮ್ಮನ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ಯುವರಾಜ್​ ನನಗೆ ಕೋಟಿ ಕೊಟ್ಟಿಲ್ಲ, 75 ಲಕ್ಷ ಕೊಟ್ಟಿದ್ದಾರೆ; ಯುವರಾಜ್​ ಜತೆಗಿನ ಸಂಬಂಧದ ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಹೊರವಲಯದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಈರಮ್ಮ ಆಲಮೇಲ(35) ಮತ್ತು ಲಕ್ಷ್ಮಣ ಈರಪ್ಪ ಆಲಮೇಲ ಮದುವೆಯಾಗಿ 10 ವರ್ಷಕ್ಕೂ ಹೆಚ್ಚಾಗಿದೆ. ಮೂವರು ಮುದ್ದಾದ ಮಕ್ಕಳೂ ಕುಟುಂಬದಲ್ಲಿದ್ದಾರೆ. ಲಕ್ಷ್ಮಣ ಅವರ ಮನೆಯ ಪಕ್ಕದಲ್ಲೇ ಅವರ ತಮ್ಮ ರುದ್ರಪ್ಪನ ಕುಟುಂಬವೂ ವಾಸವಿತ್ತು. ರುದ್ರಪ್ಪನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ರುದ್ರಪ್ಪ ಮತ್ತು ಈರಮ್ಮ ಪ್ರೀತಿ ಬೆಳೆಸಿಕೊಂಡಿದ್ದು, ಅದನ್ನು ಅಕ್ರಮ ಸಂಬಂಧವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.
ತನ್ನ ಪತ್ನಿ ತನ್ನ ಸಹೋದರನ ಜತೆಯೇ ಚಕ್ಕಂದವಾಡುತ್ತಿರುವ ವಿಚಾರ ಲಕ್ಷ್ಮಣನಿಗೆ ಕೆಲವು ವರ್ಷಗಳ ಹಿಂದೆಯೇ ಗೊತ್ತಾಗಿದೆ. ಆದರೂ ಅದನ್ನು ಸಹಿಸಿಕೊಂಡೇ ಬಂದಿದ್ದಾನೆ. ಅವರಿಗೆ ಬುದ್ಧಿ ಕಲಿಸಲು ಸರಿಯಾದ ಸಮಯಕ್ಕಾಗಿ ಆತ ಕಾಯುತ್ತಿದ್ದ. ಮಂಗಳವಾರ ರಾತ್ರಿ ಆ ಸಮಯ ಬಂದಿದ್ದು, ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?
ಕಬ್ಬು ಸಾಗಿಸುವ ಟ್ರಾಕ್ಟರ್ ಓಡಿಸುತ್ತಿದ್ದ ರುದ್ರಪ್ಪ ಆಲಮೇಲ, ಮಂಗಳವಾರ ರಾತ್ರಿ ಊಟ ಮಾಡಿ ಕ‌ಬ್ಬಿನ ಲೋಡ್ ಮಾಡಬೇಕು ಎಂದು ಹೋಗಿದ್ದ.‌ ಕಾರಣಾಂತಗಳಿಂದ ಕಬ್ಬಿನ ಟ್ರ್ಯಾಕ್ಟರ್ ಲೋಡ್ ಇರಲಿಲ್ಲ. ಹೀಗಾಗಿ ಮರಳಿ ಮನೆಗೆ ಬಂದಿದ್ದಾನೆ. ಇದೇ ಟೈಂಗೆ ಪಕ್ಕದ ಮನೆಯಲ್ಲಿದ್ದ ತನ್ನ ಅತ್ತಿಗೆಗೆ ಸರಸಕ್ಕೆ ಕರೆದಿದ್ದಾನೆ. ಈರಮ್ಮ ಮಲಗಿದ್ದ ಪತಿಗೆ ಬಹಿರ್ದೆಸೆ ಹೋಗುವ ನಾಟಕವಾಡಿ ಪತಿಯನ್ನು ಯಾಮಾರಿಸಿ ಈತನೊಂದಿಗೆ ಸರಸವಾಡಲು ಬಂದಿದ್ದಾಳೆ. ಈ ವೇಳೆ ಎಚ್ಚರಗೊಂಡ ಪತಿ ಲಕ್ಷ್ಮಣ, ಪತ್ನಿ ಹೊರಗೆ ಹೋಗಿರುವುದನ್ನು ಗಮನಿಸಿದ್ದಾನೆ. ಹೊರ ಬಂದು ನೋಡಿದಾಗ, ಪಕ್ಕದ ಹೊಲದಲ್ಲಿ ಪತ್ನಿ ಹಾಗೂ ಆತನ ಸಹೋದರ ಸರಸವಾಡುತ್ತಿರುವುದನ್ನು ಕಣ್ಣಾರೆ ನೋಡಿದ್ದಾನೆ. ಇಬ್ಬರನ್ನು ಅಲ್ಲೇ ಕಬ್ಬು ಕಟಾವು ಮಾಡುವ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಊರಿನ ಹಿರಿಯರಿಗೆ ಕರೆ ಮಾಡಿ ವಿಷಯ ತಿಳಿಸಿ, ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಸದ್ಯ ಘಟನೆ ಬಗ್ಗೆ ಇಂಡಿ‌ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)
ಪಕ್ಕದ ಮನೆಯವನೊಂದಿಗೇ ಮಹಿಳೆಯ ಲವ್ವಿ ಡವ್ವಿ! ಪ್ರಿಯಕರನ ಕಾಟ ಹೆಚ್ಚಾದ ತಕ್ಷಣ ದರೋಡೆಯ ನಾಟಕ

ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × two =
Remember me
