ರಾಯಚೂರು:ಗೌರಿ ಹಬ್ಬದಂದು ಕಾರು ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದ ದಂಪತಿಯ ಪುತ್ರ ಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇಂದು ಶವವಾಗಿ ಪತ್ತೆಯಾಗಿದ್ದಾನೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಆ. 30ರಂದು ಈ ಅಪಘಾತ ಸಂಭವಿಸಿತ್ತು.
ರಾಯಚೂರಿನ ಮಸ್ಕಿ ತಾಲೂಕಿನ ಗುಡದೂರು ಬಳಿ ನಡೆದಿದ್ದ ಅಪಘಾತದಲ್ಲಿ ಕಾರು ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದಿತ್ತು. ಈ ಅಪಘಾತದಲ್ಲಿ ಸೂರ್ಯರಾವ್ (62), ಸುಬ್ಬಲಕ್ಷ್ಮೀ (58) ದಂಪತಿ ಅಂದು ಕಾರಿನಲ್ಲೇ ಮೃತಪಟ್ಟಿದ್ದರು. ಆದರೆ ಕಾರು ಚಲಾಯಿಸುತ್ತಿದ್ದ ಪುತ್ರ ಶ್ರೀನಿವಾಸ (38) ಅಂದು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಇದನ್ನೂ ಓದಿ:ಗೌರಿ ಹಬ್ಬದ ದಿನವೇ ದುರಂತ: ಕಾಲುವೆಗೆ ಕಾರು ಬಿದ್ದು ದಂಪತಿ ಸಾವು, ನೀರಲ್ಲಿ ಕೊಚ್ಚಿಹೋದ ಮಗ
ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಚ್ಚಿಹೋದ ಶ್ರೀನಿವಾಸ್​ಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆ ಆಗಿರಲಿಲ್ಲ. ಆದರೆ ಇಂದು ಸಿರವಾರ ತಾಲೂಕಿನ ನವಲಕಲ್ ಬಳಿ ಶ್ರೀನಿವಾಸ್ ಶವ ಪತ್ತೆಯಾಗಿದೆ.
ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್​

ಸಂಭಾವನೆ ಪಡೆಯದೆ ಪುಣ್ಯಕೋಟಿ ರಾಯಭಾರಿ ಆದ ಸುದೀಪ್​; ಕಿಚ್ಚನಿಗೆ ಸರ್ಕಾರದಿಂದಲೇ ಬರ್ತ್​ಡೇ ಗಿಫ್ಟ್​

ವಿವಾದಕ್ಕೀಡಾಯ್ತು ಅಂಬೇಡ್ಕರ್ ಹೋಲಿಕೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ!; ದಲಿತರ 2 ಗುಂಪುಗಳ ಮಧ್ಯೆ ವಾಗ್ವಾದ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
