ಹಾಸನ:ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ತಾವೇ ಚೆಲ್ಲಾಪಿಲ್ಲಿ ಆಗಿಸಿ, ಬಳಿಕ ಮನೆಯಲ್ಲಿ ಕಳ್ಳತನವಾಗಿದೆ ಎಂದು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯಲ್ಲಿನ ನಿವಾಸಿಗಳಾದ ಕಲ್ಲೇಶ್​ ಆಚಾರ್ ಮತ್ತು ಮಮತಾ ದಂಪತಿ ಪೊಲೀಸರಿಗೆ ಈ ಸುಳ್ಳು ದೂರನ್ನು ನೀಡಿದ್ದರು. ಅಷ್ಟೇ ಅಲ್ಲದೆ ಕಳವಾದ ಬಗ್ಗೆ ಮಮತಾ ರಸವತ್ತಾದ ಕಥೆಯನ್ನೇ ಹೇಳಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ.
ಈ ದಂಪತಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲಾಗದೆ ಹೆದರಿ ಇಂಥದ್ದೊಂದು ಕಥೆ ಕಟ್ಟಿದ್ದಾರೆ. ತನಿಖೆಯಲ್ಲಿ ಅಸಲಿ ವಿಷಯ ಹೊರಬರುತ್ತಿದ್ದಂತೆ ಗಂಡ-ಹೆಂಡತಿ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು, ಪೊಲೀಸರಿಗೇ ಸುಳ್ಳು ಹೇಳಿದ್ದಕ್ಕೆ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಾನು ಆರ್​ಎಸ್​ಎಸ್​ ಸ್ವಯಂಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ: ಸಿ.ಟಿ. ರವಿ

ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 5 =
Remember me
