ಮೊಳಕಾಲ್ಮೂರು:ಸಂತಾನ ಭಾಗ್ಯಕ್ಕೆ ಹಂಬಲಿಸುತ್ತಿದ್ದ ಬಡ ಕುಟುಂಬದ ಮಹಿಳೆಗೆ ಅಗತ್ಯ ವೈದ್ಯಕೀಯ ನೆರವು ಕೊಡಿಸುವ ಮೂಲಕ ಮಗು ಹೊಂದುವ ಆಕೆಯ ಕನಸನ್ನು ನನಸು ಮಾಡಿದ್ದಾರೆ ಚಿತ್ರದುರ್ಗದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ! ಜಿಲ್ಲಾಧಿಕಾರಿ ತೋರಿದ ಕಾಳಜಿಯಿಂದ ಮೊಳಕಾಲ್ಮೂರು ತಾಲೂಕು ಕಣ್‌ಕುಪ್ಪೆ ಗ್ರಾಮದ ಓಬಳೇಶ- ನಾಗವೇಣಿ ದಂಪತಿಗೆ ಹೆಣ್ಣು ಮಗು ಜನಿಸಿದ್ದು ಇಡೀ ಕುಟುಂಬ ಸಂಭ್ರಮದಲ್ಲಿ ತೇಲುತ್ತಿದೆ. ಚಿಕಿತ್ಸೆ ಕೊಡಿಸಿ ಮಾತೃಪ್ರೇಮ ಮೆರೆದ ಡಿಸಿ ಕವಿತಾ ಅವರ ಹೆಸರನ್ನೇ ತಮ್ಮ ಮಗುವಿಗೂ ನಾಮಕರಣ ಮಾಡಲು ಈ ದಂಪತಿ ನಿರ್ಧರಿಸಿದ್ದಾರೆ. ಹೆಸರಿಡುವ ದಿನ ತಪ್ಪದೆ ಬರುವಂತೆ ಆಹ್ವಾನ ಕೂಡ ನೀಡಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಕಣ್‌ಕುಪ್ಪೆಯ ನಾಗವೇಣಿ-ಓಬಳೇಶ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಾಗವೇಣಿ ಎರಡು ಬಾರಿ ಗರ್ಭ ಧರಿಸಿದ್ದರೂ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮಕ್ಕಳು ಬದುಕುಳಿಯುತ್ತಿರಲಿಲ್ಲ. ೨೦೨೧ರ ಫೆ.೨೦ರಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇದೇ ಊರಲ್ಲಿ ಗ್ರಾಮ ವಾಸ್ತ ವ್ಯ ಹೂಡಿದ್ದರು. ಗರ್ಭಿಣಿ ನಾಗವೇಣಿ ಜಿಲ್ಲಾಧಿಕಾರಿ ಬಳಿ ತನ್ನ ಸಮಸ್ಯೆ ಹೇಳಿಕೊಂಡು ಚಿಕಿತ್ಸೆಗೆ ಮೊರೆ ಇಟ್ಟಿದ್ದಳು. ತಕ್ಷಣ ಸ್ಪಂದಿಸಿದ ಅವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕರೆದು ವೈದ್ಯಕೀಯ ಸೇವೆ ಒದಗಿಸಲು ಸೂಚಿಸಿದ್ದರು. ಸತತ ಏಳು ತಿಂಗಳ ಆರೈಕೆಯಿಂದ ನಾಗವೇಣಿ ಅವರು ಆರೋಗ್ಯವೂ ಸುಧಾರಿಸಿತು. ಈಗ್ಗೆ ೧೨ ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದೆ.
ಇದನ್ನೂ ಓದಿ:ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ
ಅನ್ಯ ಕಾರ್ಯಕ್ರಮದ ನಿಮಿತ್ತ ಮಂಗಳವಾರ ಮೊಳಕಾಲ್ಮೂರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ತಾಯಿ ಮಗುವಿನ ಆರೋಗ್ಯ ವಿಚಾರಿಸಲು ನಾಗವೇಣಿ ಮನೆಗೆ ಭೇಟಿ ನೀಡಿದ್ದರು. ಮಗುವಿಗೆ ಹಂಬಲಿಸುತ್ತಿದ್ದ ನನಗೆ ಚಿಕಿತ್ಸೆ ಕೊಡಿಸಿ ತಾಯಿಯಾಗುವ ಕನಸು ನನಸು ಮಾಡಿದ ನಿಮ್ಮ ಹೆಸರನ್ನೇ ಮಗವಿಗೆ ನಾಮಕರಣ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಕವಿತಾ ಅವರ ಬಳಿ ಹೇಳಿದಾಗ ಅವರಿಗೂ ಇಲ್ಲ ಎನ್ನಲಾಗಲಿಲ್ಲ.
ಮಗು ಮಡಿಲು ತುಂಬಿತು:ಐದು ವರ್ಷದ ಹಿಂದೆ ಮದುವೆಯಾಗಿತ್ತು. ಮೊದಲ ಸಲ ಗರ್ಭಧರಿಸಿದಾಗ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಆರು ತಿಂಗಳ ಗಂಡುಮಗು ಕಳೆದುಕೊಂಡೆವು. ನಂತರ ೨ನೇ ಬಾರಿ ಅವಳಿ ಹೆಣ್ಣು ಮಕ್ಕಳು ಸಹ ಬದುಕುಳಿಯಲಿಲ್ಲ. ಇನ್ನೇನು ಮಕ್ಕಳ ಭಾಗ್ಯ ಕನಸಿನ ಮಾತು ಎಂದು ಸುಮ್ಮನಾಗಿದ್ದೆವು. ಜಿಲ್ಲಾಧಿಕಾರಿ ಮೇಡಂ ನಮ್ಮೂರಿಗೆ ಬಂದಾಗ ನೋವು ಹೇಳಿಕೊಂಡೆ. ಒಬ್ಬ ತಾಯಿಯಂತೆ ಸ್ಪಂದಿಸಿದರು. ಐದೂವರೆ ತಿಂಗಳ ಕಾಲ (ದಿನಕ್ಕೆ ೪೫೦ ರೂ.) ಚುಚ್ಚು ಮದ್ದು ಮತ್ತು ಔಷಧ ಕೊಡಿಸಿದರು.ಇದರಿಂದ ನಾನು ತಾಯಿಯಾಗಲು ಸಾಧ್ಯವಾಯಿತು. ನನ್ನ ಆರೋಗ್ಯವೂ ಸುಧಾರಿಸಿದೆ. ಪುನರ್ಜನ್ಮ ಕೊಟ್ಟ ಜಿಲ್ಲಾಧಿಕಾರಿ ಅವರನ್ನು ಜೀವನಪೂರ್ತಿ ಸ್ಮರಿಸುತ್ತೇನೆ. ಹಗಲಿರುಳು ಕಾಳಜಿ ತೋರಿದ ವೈದ್ಯರು, ಆಶಾ ಕಾರ್ಯಕರ್ತೆ, ಆರೋಗ್ಯ ಸಿಬ್ಬಂದಿಯನ್ನು ಎಂದಿಗೂ ಮರೆಯಲಾರೆ ಎಂದು ನಾಗವೇಣಿ ಸಂತಸ ಹಂಚಿಕೊಂಡಿದ್ದಾರೆ.
ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

ಲವ್​ ಮಾಡಲ್ಲ ಅಂದಿದ್ದಕ್ಕೆ ಕಪಾಳಕ್ಕೆ ಬಾರಿಸಿದ ಮ್ಯಾನೇಜರ್​; ಹೊಡೆದ ರಭಸಕ್ಕೆ ದಿಢೀರ್ ಬಿದ್ದ ಯುವತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eleven =
Remember me
