ಬೆಂಗಳೂರು:ಐವರು ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮಗಳೊಬ್ಬಳನ್ನು ಹಾಗೇ ಬಿಟ್ಟು ಇಳಿದುಹೋಗಿದ್ದು, ಒಂದಷ್ಟು ಕಾಲ ಆತಂಕದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿತ್ತು. ಬೀದರ್​-ಯಶವಂತಪುರ ಎಕ್ಸ್​ಪ್ರೆಸ್​​ನಲ್ಲಿ ಗುರುವಾರ ರಾತ್ರಿ ಇಂಥದ್ದೊಂದು ಪ್ರಕರಣ ಸಂಭವಿಸಿದೆ.
ಬೀದರ್​-ಯಶವಂತಪುರ ಎಕ್ಸ್​ಪ್ರೆಸ್​ ಟ್ರೇನ್​ ನಂ. 06272ನಲ್ಲಿ ಸಂಗಪ್ಪ ಎಂಬವರು ತಮ್ಮ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ರಾಜಾನುಕುಂಟೆ ಸಿಗ್ನಲ್ ಕ್ಲಿಯರೆನ್ಸ್​ ಬಳಿ ಇಳಿಯುವಾಗ ಅಲ್ಲಿ ನಿದ್ರಿಸುತ್ತಿದ್ದ ತಮ್ಮ ಪುತ್ರಿ ಭೂಮಿಕಾಳನ್ನು ಜತೆ ಕರೆದೊಯ್ಯಲು ಮರೆತೇ ಹೋಗಿದ್ದರು.
ರೈಲಿನಿಂದ ಇಳಿದು ಬಂದ ಸ್ವಲ್ಪ ಹೊತ್ತಿನಲ್ಲಿ ಮಕ್ಕಳಲ್ಲಿ ಪುತ್ರಿಯೊಬ್ಬಳು ಇಲ್ಲದಿರುವುದು ಗೊತ್ತಾಗಿ ತೀವ್ರ ಗಾಬರಿ ಹಾಗೂ ಚಿಂತೆಗೆ ಒಳಗಾಗಿದ್ದರು. ಈ ಬಗ್ಗೆ 7 ಗಂಟೆ ಸುಮಾರಿಗೆ ರೈಲ್ವೆ ಸ್ಟೇಷನ್​ ಮಾಸ್ಟರ್​ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸ್ಟೇಷನ್​ ಮಾಸ್ಟರ್​ ಅವರು ಸೆಕ್ಯುರಿಟಿ ಕಂಟ್ರೋಲ್​ಗೆ ಮಾಹಿತಿ ರವಾನಿಸಿದ್ದು, ಎಲ್ಲೆಡೆ ಹುಡುಕಾಟ ನಡೆಸುವಂತೆ ಆರ್​ಪಿಎಫ್​ಗೆ ಸೂಚಿಸಿದ್ದರು.
ಅಷ್ಟರಲ್ಲಿ ಬೀದರ್-ಯಶವಂತಪುರ ಎಕ್ಸ್​ಪ್ರೆಸ್​ 7.30ರ ಸುಮಾರಿಗೆ ಯಶವಂತಪುರ ಸ್ಟೇಷನ್​ ತಲುಪಿತ್ತು. ಅಲ್ಲಿ ಕೋಚ್​ ನಂಬರ್ ಎಸ್​ಡಬ್ಲ್ಯುಆರ್​ ಎಸ್​ಸಿಎನ್​ 201586/Cನ ಸೀಟ್​ ನಂಬರ್ 3ರಲ್ಲಿ ಭೂಮಿಕಾ ಮಲಗೇ ಇದ್ದಿದ್ದು, ರೈಲ್ವೆ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು. ಬಳಿಕ ದಂಪತಿಯನ್ನು ಯಶವಂತಪುರಕ್ಕೆ ಕರೆಸಿ ಬಾಲಕಿಯನ್ನು ಹಸ್ತಾಂತರಿಸಲಾಗಿದೆ. ರೈಲ್ವೆ ಪ್ರೊಟೆಕ್ಷನ್​ ಫೋರ್ಸ್​ನ ತ್ವರಿತ ಕಾರ್ಯಾಚರಣೆ ಕುರಿತು ಡಿವಿಷನಲ್ ರೈಲ್ವೇ ಮ್ಯಾನೇಜರ್ ಅಶೋಕ್​ ಕುಮಾರ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

ಅಪ್ಪ ಮಟನ್​ ಕರಿಯಲ್ಲಿ ಪೀಸ್​ ಇಲ್ಲ ಎಂದ; ಮಕ್ಕಳು ಚಚ್ಚಿ ಕೊಚ್ಚಿ ಸಾಯಿಸಿದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 15 =
Remember me
