ರಾಣೆಬೆನ್ನೂರ:ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಇದೀಗ ಏಕಾಏಕಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ನಗರದಲ್ಲಿ ನಡೆದಿದ್ದು, ಮಗಳು ಹಾಗೂ ಅಳಿಯನನ್ನು ಹುಡುಕಿಕೊಡಿ ಎಂದು ಯುವತಿಯ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಆನಂದ ದೀಪಕ ಪೂಜಾರ (31) ಹಾಗೂ ಪತ್ನಿ ಅಪೂರ್ವ ಆನಂದ ಪೂಜಾರ (23) ನಾಪತ್ತೆಯಾದವರು.
ಇದನ್ನೂ ಓದಿ:ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್
ನಗರದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಆನಂದ ಕಾರ್ಯ ನಿರ್ವಹಿಸುತ್ತಿದ್ದರು. ಪುತ್ರಿ ಮನೆ ಕೆಲಸ ಮಾಡಿಕೊಂಡಿದ್ದಳು. ಆದರೆ, ಡಿ. 12ರ ಮಧ್ಯರಾತ್ರಿಯಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಶಹರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರ ತಾಲೂಕಿನ ಅಪೂರ್ವ ಐದು ವರ್ಷದ ಹಿಂದೆ ಅಕ್ಕನ ಮದುವೆಗಾಗಿ ಬಟ್ಟೆ ಖರೀದಿಸಲು ದಾವಣಗೆರೆಗೆ ಬಂದಿದ್ದಳು. ಈ ಸಮಯದಲ್ಲಿ ಆನಂದನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬದವರು ಒಪ್ಪಿ ಮದುವೆ ಮಾಡಿದ್ದರು. ಇದಾದ ನಂತರ ಇಬ್ಬರೂ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದರು. ಆದರೀಗ ಏಕಾಏಕಿ ನಾಪತ್ತೆಯಾಗಿದ್ದು, ಆತಂಕ ಮೂಡಿಸಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಮೊದಲ ಎದುರಾಳಿ ಯಾರು ಗೊತ್ತಾ?
ದಂಪತಿ ನಾಪತ್ತೆಯಾಗುವ ಮುನ್ನಾ ದಿನ ಬ್ಯಾಂಕ್‌ನಿಂದ 3 ಲಕ್ಷ ರೂ. ಡ್ರಾ ಮಾಡಿಕೊಳ್ಳಲಾಗಿದೆ. ಅಲ್ಲದೆ ಡಿ. 16ರವರೆಗೆ ಬ್ಯಾಂಕ್‌ಗೆ ಆನಂದ ರಜೆ ಹಾಕಿದ್ದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಯುವತಿ ತಂದೆ ಹೇಳಿದ್ದು, ಪ್ರಕರಣ ಕುತೂಹಲ ಮೂಡಿಸಿದೆ.
ಆತಂಕ ಮೂಡಿಸಿದ ಚೀಟಿ:ಮದುವೆಯಾದ ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ, ಅವರು ನಾಪತ್ತೆಯಾದ ಬಳಿಕ ಅವರ ಮನೆಯಲ್ಲಿ ಅಪೂರ್ವ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್ ದೊರೆತಿದೆ. ‘ಅದರಲ್ಲಿ ಹುಬ್ಬಳ್ಳಿಯ ಸಾಯಿಗಣೇಶ ಎಂಬ ಹುಡುಗನೊಬ್ಬ ಫೋನ್ ಮಾಡಿ ನನಗೆ ಕಿರುಕುಳ ಕೊಡುತ್ತಿದ್ದ. ಅವನಿಂದ ಬೇಸತ್ತು ಹೋಗಿದ್ದೇನೆ. ಆದ್ದರಿಂದ ನಾನು ಹಾಗೂ ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದಿರುವುದಾಗಿ ಅಪೂರ್ವಳ ತಂದೆ ನಾಗರಾಜ ‘ವಿಜಯವಾಣಿ’ಗೆ ವಿವರಿಸಿದರು.
ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
