ಚಿಕ್ಕಬಳ್ಳಾಪುರ:ಜಿಲ್ಲಾ ನ್ಯಾಯಾಲಯದ ಅಟೆಂಡರ್ ಆಗಿದ್ದ ಮೈಸೂರು ಮೂಲದ ನವೀನ್ ಕೊಲೆ ಪ್ರಕರಣ ಸಂಬಂಧ ಮೃತನ ಪ್ರಿಯತಮೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಈ ಕೊಲೆಯ ರೂವಾರಿಯೇ ವಕೀಲ. ಈತ ಮೃತನ ಪ್ರಿಯತಮೆಯ ಹಾಲಿ ಪ್ರಿಯಕರ!
ಆ.18ರಂದು ಪ್ರಶಾಂತನಗರದಲ್ಲಿ ನವೀನ್​ ವಾಸವಿದ್ದ ಬಾಡಿಗೆ ಮನೆಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯದ ಅಟೆಂಡರ್ ದೀಪಾ (35), ಈಕೆಯ ಹಾಲಿ ಪ್ರಿಯಕರ ನಲ್ಲಕದಿರೇನಹಳ್ಳಿಯ ವಕೀಲ ನವೀನ್ (42), ಅನಿಲ್ (39) ಮತ್ತು ಕೃಷ್ಣಮೂರ್ತಿ (41) ಎಂಬುವವರನ್ನು ಬಂಧಿಸಿದ್ದಾರೆ. ಮೊದಮೊದಲು ಅಟೆಂಟರ್​ ನವೀನ್ ಜತೆ ಸಲುಗೆಯಿಂದಲೇ ಇದ್ದ ದೀಪ, ಆತನೊಂದಿಗೆ ಅನೈತಿಕ ಸಂಬಂಧದ ಜತೆಗೆ ಹಣಕಾಸಿನ ವ್ಯವಹಾರನ್ನೂ ಇಟ್ಟಿಕೊಂಡಿದ್ದಳು ಎನ್ನಲಾಗಿದೆ. ಈ ರಹಸ್ಯ ಹೊರ ಬರುವ ಭಯದಲ್ಲಿ ಮತ್ತೊಬ್ಬ ಪ್ರಿಯಕರ ವಕೀಲ ​ನವೀನ್​ನ ಸಹಾಯ ಕೋರಿದ್ದಳು. ಮುಂದೆ ಆಗಿದ್ದೆಲ್ಲವೂ ದುರಂತ.
ಇದನ್ನೂ ಓದಿರಿ‘ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ’
ನ್ಯಾಯಾಲಯದ ಅಟೆಂಡರ್ಸ್​ ನವೀನ್ ಮತ್ತು ದೀಪಾಳ ನಡುವೆ ವ್ಯವಹಾರಿಕ ಹಾಗೂ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ನಡುವೆ ವಕೀಲ ನವೀನ್​ ಜತೆಗೂ ದೀಪಾ ಸಲುಗೆಯಿಂದ ಇರುತ್ತಿದ್ದಳು. ಎರಡು ದೋಣಿ ಮೇಲೆ ಕಾಲಿಟ್ಟಿದ್ದ ದೀಪಾಳ ವರ್ತನೆಗೆ ಬೇಸತ್ತ ಅಟೆಂಡರ್​ ನವೀನ್, ತನ್ನ ದೀಪಾಳ ಜತೆ ಜಗಳವಾಡುತ್ತಿದ್ದ. ಅಲ್ಲದೆ ತನ್ನ ಬಳಿ ಪಡೆದ ಹಣ ವಾಪಸ್​ ಕೊಡು ಎಂದೂ ಪೀಡಿಸುತ್ತಿದ್ದ.
ಮಾಜಿ ಪ್ರಿಯಕರ ನವೀನ್​ ಹಣಕ್ಕಾಗಿ ಪೀಡಿಸುವ ಬಗ್ಗೆ ಹಾಲಿ ಪ್ರಿಯಕರ ನವೀನ್​ ಬಳಿ ದೀಪಾ ಅಳಲು ತೋಡಿಕೊಂಡಿದ್ದಳು. ದೀಪಾಳ ತಂಟೆಗೆ ಬಾರದಂತೆ ವಕೀಲ ಹಲವು ಬಾರಿ ಎಚ್ಚರಿಕೆಯನ್ನೂ ಕೊಟ್ಟಿದ್ದ. ಆದರೂ ಅಟೆಂಡರ್​ ಹಣಕ್ಕಾಗಿ ಪೀಡಿಸುತ್ತಿದ್ದ. ಕೊನೆಗೆ ಮಾತುಕತೆಯ ನೆಪದಲ್ಲಿ ಸುಫಾರಿ ಕೊಟ್ಟು ಅನಿಲ್ ಮತ್ತು ಕೃಷ್ಣಮೂರ್ತಿ ಎಂಬುವವರನ್ನು ಅಟೆಂಡರ್​ ಮನೆಗೆ ವಕೀಲ ಕಳುಹಿಸಿದ್ದ. ಈ ವೇಳೆ ಅವರಿಬ್ಬರೂ ದೀಪಾಳ ಮಾಜಿ ಪ್ರಿಯಕರನ್ನು ಥಳಿಸಿ, ಕತ್ತು ಹಿಸುಕಿ ಕೊಂದಿದ್ದರು.
ಕೆಲ ದಿಗಳಾದರೂ ಅಟೆಂಡರ್​ ನವೀನ್​ ಕೋರ್ಟ್​ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ವಿಚಾರಿಸಲೆಂದು ಆ.18ರಂದು ಪ್ರಶಾಂತನಗರದಲ್ಲಿ ಆತನಿದ್ದ ಬಾಡಿಗೆ ಮನೆಗೆ ಹೋದಾಗ ಶವ ಪತ್ತೆಯಾಗಿತ್ತು. ಕತ್ತಿಗೆ ಜೀನ್ಸ್ ಪ್ಯಾಂಟ್ ಮತ್ತು ಅಂಗಿ ಬಿಗಿದ ಸ್ಥಿತಿಯಲ್ಲಿ ಅಟೆಂಟರ್​ ನವೀನ್​ರ​ ಮೃತದೇಹ ಪತ್ತೆಯಾಗಿದ್ದರಿಂದ ಕೊಲೆ ಶಂಕೆ ವ್ಯಕ್ತವಾಗಿತ್ತು. ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಇದು ಮೃತನ ಮಾಜಿ ಪ್ರೇಯಸಿ ಮತ್ತು ವಕೀಲನ ಕೃತ್ಯ ಎಂಬುದು ಬಯಲಾಗಿದೆ.
ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

ಗಂಡ-ಹೆಂಡ್ತಿ ನಡುವೆ ಈ ನಾಯಿಯ ಕೂದಲು ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
