ಶಿವಮೊಗ್ಗ:ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ ವಕೀಲರನ್ನು ಸಾಕ್ಷಿದಾರನೊಬ್ಬ ನೀವು ಪಾಕಿಸ್ತಾನದವರು ಎಂದು ಅವಹೇಳನ ಮಾಡಿರುವ ಘಟನೆ ನಡೆದಿದೆ.
ನಗರದ 3ನೇ ಜೆಎಂಎಫ್​ಸಿ ಕೋರ್ಟ್​ ಹಾಲ್​ನಲ್ಲಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್​ ಅವರು ಕೇಸು ವಿಚಾರಣೆ ನಡೆಸುತ್ತಿದ್ದರು.
ಹೊಡೆದಾಟ ಕೇಸಿಗೆ ಸಂಬಂಧಿಸಿದಂತೆ ಸಾಕ್ಷಿ ನುಡಿಯಲು ಬಂದಿದ್ದ ಭದ್ರಾವತಿ ತಾಲೂಕಿನ ಸಿದ್ಲಿಪುರದ ಶಂಕರ್​ ಎಂಬುವವರು ವಕೀಲ ನಯಾಜ್​ ಅಹಮ್ಮದ್​ ಅವರನ್ನು ನೀವು ಪಾಕಿಸ್ತಾನದವರು ಎಂದು ಮೂದಲಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು. ಸಿಡಿಮಿಡಿಗೊಂಡ ನ್ಯಾಯಾಧೀಶರು ಕೋರ್ಟ್​ ಕಲಾಪಕ್ಕೆ ಅಡ್ಡಿ ಹಾಗೂ ಅನುಚಿತ ವರ್ತನೆ ತೋರಿದ್ದಕ್ಕೆ ಶಂಕರ್​ಗೆ ಒಂದು ದಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಕೂಡಲೇ ಪೊಲೀಸರು ಶಂಕರ್​ ಅವರನ್ನು ಕರೆದೊಯ್ದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
