ಬೆಂಗಳೂರು:ದೇಶದ ಸೆಮಿಕಂಡಕ್ಟರ್ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮೂರು ದಿನಗಳ ಸೆಮಿಕಾನ್ ಇಂಡಿಯಾ 2022 ಸಮ್ಮೇಳನಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು. ಸೆಮಿಕಂಡಕ್ಟರ್ ಕ್ಷೇತ್ರದ ದಿಗ್ಗಜ ಕಂಪನಿಗಳು, ತಂತ್ರಜ್ಞರ ಸಮಾಗಮವಾಗಿರುವ ಈ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭದಲ್ಲಿಯೇ ವಿಸ್ತೃವಾಗಿ ಬಿಡಿಸಿಟ್ಟರು.
ಇನ್ನು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ದೇಶೀಯ ಸೆಮಿಕಂಡಕ್ಟರ್ ತಯಾರಕರನ್ನು ಪ್ರೋತ್ಸಾಹಿಸುವ ಸಲುವಾಗಿ ಮುಂದಿನ ಆರೆಂಟು ತಿಂಗಳಲ್ಲಿ ಎಲೆಕ್ಟ್ರಾನಿಕ್ ಚಿಪ್​ಗಳ ತಯಾರಕರಿಗೆ ಅನುಮೋದನೆ ನೀಡಲಾಗುವುದು. ಎಲೆಕ್ಟ್ರಾನಿಕ್ ಚಿಪ್ ತಯಾರಿಸಲು 1.53 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು 5 ಕಂಪನಿಗಳು ಮುಂದೆ ಬಂದಿದ್ದು, ಪ್ರಸ್ತಾವನೆ ಸ್ವೀಕರಿಸಲಾಗಿದೆ ಎಂಬ ಮಹತ್ವ ಸಂಗತಿಯನ್ನು ತಿಳಿಸಿದರು.
ಇಡೀ ಸಮ್ಮೇಳನದ ನೊಗ ಹೊತ್ತ ಕೇಂದ್ರ ಕೌಶಲ್ಯ ಅಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಭಾರತವು ಬಳಸಿಕೊಳ್ಳುವ ಅಗತ್ಯತೆ ಮತ್ತು ಹೂಡಿಕೆಗಿರುವ ಅವಕಾಶದ ಬಗ್ಗೆ ತಿಳಿಸಿಕೊಟ್ಟರು.
ವರ್ಚುಯಲ್ ಮೂಲಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಸ್ತುತ ಜಗತ್ತಿನಲ್ಲಿ ಸೆಮಿಕಂಡಕ್ಟರ್ ನಿರ್ಣಾಯಕವೆನಿಸಿದೆ. ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಚೈನ್​ನಲ್ಲಿ ಭಾರತವನ್ನು ಪ್ರಮುಖ ಪಾಲುದಾರನನ್ನಾಗಿ ಮಾಡುವುದು ನಮ್ಮ ಸಾಮೂಹಿಕ ಗುರಿಯಾಗಿದೆ ಎಂದು ಹೇಳಿದರು.
ನಮ್ಮ ಉತ್ಪಾದನೆ ಆಧರಿತ ಪೋ›ತ್ಸಾಹಧನ ಯೋಜನೆಗಳು 14 ಪ್ರಮುಖ ವಲಯಗಳಲ್ಲಿ 26 ಶತಕೋಟಿ ಡಾಲರ್​ಗಳಿಗೂ ಹೆಚ್ಚು ಪೋ›ತ್ಸಾಹಕಗಳನ್ನು ನೀಡುತ್ತವೆ ಎಂದ ಅವರು ಮುಂದಿನ 5 ವರ್ಷಗಳಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ದಾಖಲೆಯ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಮೋದಿ ಕೊಟ್ಟ ಆರು ಕಾರಣ
ಚಿಪ್​ಗೆ ಆಗುಂಬೆ ಹೆಸರು!:ಸಮ್ಮೇಳನದ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳು ತಮ್ಮ ಉತ್ಪನ್ನ ಪ್ರದರ್ಶಿಸಿವೆ. ಚಿಪ್ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದ ವಿಭಿನ್ನ ಆಯಾಮದ ಬೆಳವಣಿಗೆಯ ಅನಾವರಣ ನಡೆದಿದೆ. ಸಿಗ್ನಾಚಿಪ್ ಎಂಬ ಕಂಪನಿಯು ತಾನು ಅಭಿವೃದ್ಧಿಪಡಿಸಿದ ಮೊಬೈಲ್ ಟವರ್​ನಲ್ಲಿ ಬಳಸುವ ಒಂದು ಚಿಪ್​ಗೆ ‘ಆಗುಂಬೆ’ ಎಂದು ಹೆಸರಿಟ್ಟಿದೆ. ಅಮೆರಿಕಾ ಸೇರಿ ಮುಂದುವರಿದ ದೇಶಗಳ ಕಂಪನಿಗಳು ತಮ್ಮ ಭಾಗದ ಗಿರಿ ಶಿಖರ ಅಥವಾ ಭೌಗೋಳಿಕ ಪ್ರದೇಶದ ಹೆಸರಿಡುವ ಸಂಪ್ರದಾಯವಿದೆ. ನಾವೂ ಸಹ ನಮ್ಮ ಹೆಮ್ಮೆಯ ‘ಆಗುಂಬೆ’ ಹೆಸರನ್ನು ಚಿಪ್​ಗೆ ಇಟ್ಟಿ್ಟ್ದೇವೆಂದು ಕಂಪನಿಯ ಪ್ರತಿನಿಧಿ ವಿಜಯವಾಣಿಗೆ ತಿಳಿಸಿದರು.
ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆಗೆ ಯಥೇಚ್ಛ ಅವಕಾಶವಿದ್ದು, ಉದ್ಯೋಗ ಸೃಷ್ಟಿಯ ಶಕ್ತಿ ಇದೆ. ಇದನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು.ಕೇಂದ್ರ ಸರ್ಕಾರ ಈ ಸಮಾವೇಶವನ್ನು ಬೆಂಗಳೂರಿನಲ್ಲಿ ಏರ್ಪಡಿಸುವ ಮೂಲಕ ಸಕಾರಾತ್ಮಕ ಸಂದೇಶ ರವಾನಿಸಿದೆ. ರಾಜ್ಯವು ಸೆಮಿಕಂಡಕ್ಟರ್ ಉದ್ದಿಮೆಗಳಿಗೆ ಹೆಚ್ಚಿನ ಭೂಮಿ ಒದಗಿಸಲು ಸಿದ್ಧ.
|ಡಾ. ಅಶ್ವತ್ಥ ನಾರಾಯಣಐಟಿ ಮತ್ತು ಬಿಟಿ ಸಚಿವ
ಜಗತ್ತೇ ತಿರುಗಿ ನೋಡುವ ರಹದಾರಿ:ಶುಕ್ರವಾರ ಬೆಂಗಳೂರಿನಲ್ಲಿ ಸೆಮಿಕಾನ್ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರಾಜೀವ್ ಚಂದ್ರಶೇಖರ್, ಸೆಮಿಕಾನ್ ಇಂಡಿಯಾ-2022 ರ ಪರಿಣಾಮಗಳ ಬಗ್ಗೆ ವಿವರಣೆ ನೀಡಿದರು.
ಭಾರತದ ಸೆಮಿಕಂಡಕ್ಟರ್ ಎಕೋ ಸಿಸ್ಟಂ ಬಗ್ಗೆ ಜಗತ್ತೇ ತಿರುಗಿ ನೋಡುವಂತೆ ಗುರಿ ಹಾಕಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಸೆಮಿಕಾನ್ ಇಂಡಿಯಾವು ಇದರ ಮೊದಲ ಹೆಜ್ಜೆಯಾಗಿದೆ ಎಂದರು. ಮುಂದಿನ 25 ವರ್ಷಗಳಿಗಾಗುವಂತಹ ರಹದಾರಿ ಈ ಮೂಲಕ ಸಿದ್ಧವಾಗುತ್ತಿದೆ. ಸೆಮಿಕಂಡಕ್ಟರ್ ಹಾಗೂ ಸ್ಟಾರ್ಟ್​ಅಪ್ ನೀತಿಗಳು ಇದಕ್ಕೆ ಪೂರಕವಾಗಿರಲಿದೆ. ಮುಂದಿನ ದಿನಗಳಲ್ಲಿ ಇದರ ಫಲ ಸಿಗಲಿದ್ದು, ಪರಿಣಾಮ ಮುಂದಿನ ಪೀಳಿಗೆಯ ಅರಿವಿಗೆ ಬರಲಿದೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಚಿಪ್ ತಯಾರಿಕೆಗೆ ಪ್ರೋತ್ಸಾಹ:ಎಲೆಕ್ಟ್ರಾನಿಕ್ ಚಿಪ್ ತಯಾರಕರು ಹೂಡಿಕೆ ಮಾಡಲು ಉತ್ಸಾಹ ತೋರಿದ್ದು ಸಮ್ಮೇಳನದಲ್ಲಿ ಪ್ರತಿಫಲನವಾಯಿತು. ವೇದಾಂತ್ ಫಾಕ್ಸ್​ಕಾನ್ ಜೆವಿ, ಐಜಿಎಸ್​ಎಸ್ ವೆಂಚರ್ಸ್, ಐಎಸ್​ಎಂಸಿ ಸಂಸ್ಥೆಗಳು 13.6 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ಮೂಲಕ ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿವೆ.
ಕೇಂದ್ರ ಸರ್ಕಾರದಿಂದ 5.6 ಬಿಲಿಯನ್ ಯುಎಸ್ ಡಾಲರ್ ನೆರವು ಕೋರಿದ್ದು, ಮೊಬೈಲ್ ಫೋನ್, ಲ್ಯಾಪ್​ಟಾಪ್ ಡಿಸ್ಪೆ್ಲೕ ತಯಾರಿಕಾ ಘಟಕವನ್ನು 6.7 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯೊಂದಿಗೆ ಮಾಡುವುದಾಗಿ ವೇದಾಂತ ಮತ್ತು ಎಲೆಸ್ಟ್ ಕಂಪನಿಗಳು ಪ್ರಸ್ತಾಪಿಸಿವೆ. ಮುಂದಿನ 3 ವರ್ಷಗಳಲ್ಲಿ ಒಟ್ಟಾರೆ 1.7 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ 1.35 ಲಕ್ಷ ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
