ಬೆಂಗಳೂರು:ಇಡೀ ಜಗತ್ತನ್ನು ಆವರಿಸಿರುವ ಕರೊನಾವೈರಸ್ ದಿನೇದಿನೆ ಅಟ್ಟಹಾಸ ಮೆರೆಯುತ್ತಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಕೂಡಾ ಕೋವಿಡ್-19 ನಿಯಂತ್ರಿಸಲಾಗದೆ ಕಂಗಾಲಾಗಿವೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಭಾವ ಕಡಿಮೆ ಎಂದೇ ಹೇಳಬಹುದು. ಇದಕ್ಕೆ ಕಾರಣ ಭಾರತದ ಆಹಾರ ಪದ್ಧತಿ, ಜೀವನ ಶೈಲಿ ಹಾಗೂ ಇಲ್ಲಿರುವ ಆಧ್ಯಾತ್ಮ ಶಕ್ತಿ. ಯಾವುದೇ ವ್ಯಕ್ತಿಯ ದೈಹಿಕ ಆರೋಗ್ಯಕ್ಕೆ ಆತನ ಮಾನಸಿಕ ಸ್ಥಿತಿಯೂ ಕಾರಣವಾಗಿರುತ್ತದೆ. ಆತನಲ್ಲಿರುವ ಸಕಾರಾತ್ಮಕ ಚಿಂತನೆಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸದ್ಯ ಕರೊನಾದಿಂದ ಪಾರಾಗಲು ಇರುವ ಬಹುದೊಡ್ಡ ಮಾರ್ಗ ರೋಗ ನಿರೋಧಕ ಶಕ್ತಿ. ಕರೊನಾದಿಂದ ಎಲ್ಲರೂ ಪಾರಾಗಬೇಕೆಂಬ ಸದುದ್ದೇಶದಿಂದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮಿಗಳು ಜನತೆಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
5 ದಶಕಗಳ ಹಿಂದೆ ಮೈಸೂರಿನಲ್ಲಿ ಸ್ಥಾಪನೆಗೊಂಡಿರುವ ಶ್ರೀ ಅವಧೂತ ದತ್ತಪೀಠದ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ದತ್ತಾತ್ರೇಯ, ಗಣಪತಿ, ರಾಜರಾಜೇಶ್ವರಿ, ಮಹಾಶಿವಲಿಂಗ ಹಾಗೂ ಆಂಜನೇಯನ ಬೃಹತ್ ಮೂರ್ತಿಗಳನ್ನು ಸ್ಥಾಪಿಸಿ ಆಸ್ತಿಕ ಬಂಧುಗಳ ಆರಾಧನೆಗೆ ಅವಕಾಶ ಕಲ್ಪಿಸಿಕೊಟ್ಟಿರುವ ಶ್ರೀಗಳು, ಹಲವಾರು ವಿಶ್ವ ದಾಖಲೆಗಳನ್ನು ಮಾಡಿದ್ದಾರೆ. ಪೂಜ್ಯರ ನೇತೃತ್ವದಲ್ಲಿ ನಡೆದ ಹನುಮಾನ್ ಚಾಲೀಸಾ ಪಾರಾಯಣವು ‘ನ ಭೂತೋ ನ ಭವಿಷ್ಯತಿ’ ಎನ್ನುವಂತಹ ಗಿನ್ನಿಸ್ ದಾಖಲೆಯಾಗಿದೆ.
ಸರ್ವರಿಗೂ ಜ್ಞಾನದ ಬೆಳಕನ್ನು ನೀಡಲು ಸ್ಥಾಪಿಸಲಾಗಿರುವ ‘ಸರ್ವಧರ್ಮ ಮಂದಿರ’ದಲ್ಲಿ ಶ್ರೀಗಳು ನಿತ್ಯ ಮಾಡುವ ಪ್ರವಚನ ವ್ಯಕ್ತಿತ್ವ ವಿಕಸನದ ಅಣಿಮುತ್ತುಗಳು. ಕರೊನಾ ಲಾಕ್​ಡೌನ್​ನಿಂದಾಗಿ ದತ್ತಪೀಠದಲ್ಲಿ ಯಾವುದೇ ಪ್ರಾರ್ಥನೆ-ಪ್ರವಚನಗಳಿಗೆ ಅವಕಾಶವಿಲ್ಲದೇ ಇರುವುದರಿಂದ ಭಕ್ತಾದಿಗಳು ಗಲಿಬಿಲಿಗೊಂಡಿದ್ದಾರೆ. ಸದ್ಯ ಕರೊನಾದಿಂದ ಕಂಗೆಟ್ಟಿರುವ ಭಕ್ತ ಸಮುದಾಯಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಮಾನಸಿಕ ಧೈರ್ಯ ತುಂಬುವುದಕ್ಕೆ ಮುಂದಾಗಿದ್ದಾರೆ.
ಬೆಳಗ್ಗೆ 7.45ಕ್ಕೆ ಗುರುವಾಣಿ
ಶ್ರೀಗಳು ನೀಡುವ ಪ್ರವಚನದ ಸಾರಾಮೃತವು ದಿಗ್ವಿಜಯ ನ್ಯೂಸ್ 24×7ನಲ್ಲಿ ಭಾನುವಾರ ಪ್ರಾರಂಭವಾಗಲಿದ್ದು ಮೇ 3ರ ವರೆಗೆ ಪ್ರತಿದಿನ ಬೆಳಗ್ಗೆ 7.45ಕ್ಕೆ ಶ್ರೀಗುರುವಾಣಿ ಹೆಸರಿನಲ್ಲಿ ಪ್ರಸಾರವಾಗಲಿದೆ. ಲೋಕಕಲ್ಯಾಣಕ್ಕಾಗಿ ಸದಾ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುವ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಈ ನೂತನ ಕಾರ್ಯಕ್ರಮ ಕರೊನಾದಿಂದ ಆತಂಕಕ್ಕೆ ಒಳಗಾದವರಿಗೆ ಸಮಾಧಾನ ನೀಡುವುದರಲ್ಲಿ ಸಂದೇಹವಿಲ್ಲ.
ಮಾನವೀಯತೆಯು ಮಹಾಮಾರಿ ಕರೊನಾ ವೈರಸ್ ಮಣಿಸಲಿದೆ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 11 =
Remember me
