ಬೆಂಗಳೂರು:ರಾಜ್ಯದಲ್ಲಿ ಇಂದು ಹೊಸದಾಗಿ ದೃಢಪಟ್ಟಿರುವ ಕೋವಿಡ್​ -19 ಕೇಸ್​ಗಳ ಸಂಖ್ಯೆ 378 ಆಗಿದ್ದು ಒಟ್ಟು ಪ್ರಕರಣಗಳು 5 ಸಾವಿರದ ಗಡಿ ದಾಟಿದೆ. ಉಡುಪಿಯಲ್ಲೇ ಗರಿಷ್ಠ 121 ಪ್ರಕರಣಗಳು ದೃಢಪಟ್ಟಿದ್ದು ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಯಾದಗಿರಿ ಜಿಲ್ಲೆ ಬೆಂಗಳೂರು ನಗರವನ್ನು ಹಿಂದಿಕ್ಕಿ ಮೂರನೇ ಸ್ಥಾನ ತಲುಪಿದೆ. ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇಂದು ಆಸ್ಪತ್ರೆಯಿಂದ 280 ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.
ಇದನ್ನೂ ಓದಿ:ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,213 ಆಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,184 ಆಗಿದೆ. ಸಾವಿನ ಸಂಖ್ಯೆ 59 ತಲುಪಿದ್ದು, ಇದರಲ್ಲಿ ಎರಡು ಪ್ರಕರಣದಲ್ಲಿ ಅನ್ಯಕಾರಣಗಳಿಂದಾಗಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಇದು ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗಿನ ಡೇಟಾ ಆಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ ಇದುವರೆಗೆ 1968 ಆಗಿದೆ. ಐಸಿಯುನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 11.
ಇದನ್ನೂ ಓದಿ:ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!
ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ, ಕಲಬುರಗಿ, ಯಾದಗಿರಿ, ಬೆಂಗಳೂರುನಗರ, ರಾಯಚೂರು ಮೊದಲ ಐದು ಸ್ಥಾನಗಳಲ್ಲಿವೆ. ಇಂದು ಉಡುಪಿಯಲ್ಲಿ 121, ಕಲಬುರಗಿ 69, ಯಾದಗಿರಿ 103, ಬೆಂಗಳೂರು ನಗರ 18, ರಾಯಚೂರು 2 ಪ್ರಕರಣ ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಉಡುಪಿಯಲ್ಲಿ 889, ಕಲಬುರಗಿ 621, ಯಾದಗಿರಿ 476, ಬೆಂಗಳೂರು ನಗರ 452, ರಾಯಚೂರು 358 ಆಗಿದೆ. ದಕ್ಷಿಣ ಕನ್ನಡದಲ್ಲಿ ಇಂದು 24 ಕೇಸ್​ಗಳು ದೃಢವಾಗಿದ್ದು, ಒಟ್ಟು ಕೇಸ್​ಗಳ ಸಂಖ್ಯೆ 167. ಪೂರ್ಣ ವಿವರಗಳಿಗೆ ಕೆಳಗಿನ ಗ್ಯಾಲರಿ ಗಮನಿಸಿ..
ಟಿಕ್​ಟಾಕ್ ಕ್ರೇಜ್ ಇದೆಯಾ?: ಗುಜರಾತ್​ನ ಸಲ್ಮಾನ್ ಮತ್ತು ಆರೀಫ್​ ಮಾಡಿಕೊಂಡ ಅವಾಂತರ ಇದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 9 =
Remember me
