ಸತೀಶ್ ಕೆ.ಬಳ್ಳಾರಿಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕರೊನಾ ಸೋಂಕಿನ ಹಾಟ್​ಸ್ಪಾಟ್ ಆಗಿ ಪರಿಣಿಮಿಸಿದ್ದು, ಪ್ರಸಕ್ತ ತಿಂಗಳಲ್ಲಿ ಇದುವರೆಗೆ ಕಂಡುಬಂದ 12,307 ಪಾಸಿಟಿವ್ ಪ್ರಕರಣಗಳಲ್ಲಿ ಶೇ.99 ಜನರ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇಷ್ಟೊಂದು ಜನರಿಗೆ ಕೋವಿಡ್ ಮೂಲ ಸಿಗದಿರುವ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವುದು ಖಚಿತವಾಗಿರುವುದು ಗೋಚರವಾಗುತ್ತಿವೆ. ಮುಂದಿನ ದಿನಗಳಲ್ಲಿನ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ವಾರದ ಲಾಕ್ ಡೌನ್ ಘೊಷಣೆ ಮಾಡಲಾಗಿದೆ.
ನಗರದಲ್ಲಿ ಮಾ.8ರಿಂದ ಜೂ.30ರವರೆಗೆ 4,555 ಜನರಲ್ಲಿ ಸೋಂಕು ದೃಢವಾಗಿತ್ತು. ಆದರೆ, ಜು.11ರ ಅಂತ್ಯಕ್ಕೆ 16,862ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕೇವಲ 11 ದಿನದಲ್ಲಿ ಶೇ.73 ಪ್ರಕರಣಗಳ ಹೆಚ್ಚಳವಾಗಿದೆ. ಇದರಲ್ಲಿ ಶೇ.99 ಅಂದರೆ, 12,159 ಜನರಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. 148 ಜನರ ಸೋಂಕಿನ ಮೂಲ ಮಾತ್ರ ಪತ್ತೆಯಾಗಿದ್ದು, ಅದೂ ‘ಸಾರಿ’ ಮತ್ತು ‘ಐಎಲ್​ಐ’ ಪ್ರಕರಣಗಳಾಗಿವೆ. ಇದರಲ್ಲಿ ಪ್ರಯಾಣದ ಇತಿಹಾಸ ಹೊಂದಿರುವವರು ಕೂಡ ಇಲ್ಲದಂತಾಗಿದೆ. ಹೀಗಾಗಿ ಬಿಬಿಎಂಪಿ ಮತ್ತು ಅರೋಗ್ಯ ಇಲಾಖೆ ರ್ಯಾಂಡಂ ಪರೀಕ್ಷೆ ಮಾದರಿಯನ್ನು ಅನುಸರಿಸುತ್ತಿದ್ದು, 30 ನಿಮಿಷದಲ್ಲಿ ವರದಿ ನೀಡುವ ರ್ಯಾಪಿಡ್ ಕಿಟ್​ಗಳನ್ನು ಬಳಸಲು ಮುಂದಾಗಿದೆ. ಆದರೆ, ಸೋಂಕಿನ ಪತ್ತೆ ಮೂಲ ತಿಳಿಯುವುದೇ ಸರ್ಕಾರಕ್ಕೆ ತೀವ್ರ ತಲೆನೋವಾಗಿದೆ.
ಇದನ್ನೂ ಓದಿ:ಹಳ್ಳ ಹಿಡಿದ ಕೆಐಎಡಿಬಿ ಅವ್ಯವಹಾರ ತನಿಖೆ
ನಗರ ಜಿಲ್ಲೆಯ ಎಲ್ಲ ಹೊರ ವಲಯ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ಕರೊನಾಗೆ ತುತ್ತಾದ ಬಹುತೇಕರ ಸೋಂಕಿನ ಮೂಲದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಆದರೆ, ಹೆಲ್ತ್ ಬುಲೆಟಿನ್​ನಲ್ಲಿ ಪ್ರಕಟವಾಗುತ್ತಿಲ್ಲ.| ಡಾ. ಶ್ರೀನಿವಾಸ್ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ
ಇನ್ನಷ್ಟು ಹೆಚ್ಚಳ ಸಾಧ್ಯತೆ:ಜುಲೈನಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗದ ಕಾರಣ ಸಮುದಾಯಕ್ಕೆ ಸೋಂಕು ಹರಡಿರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಸೋಂಕು ಹರಡುವ ಸರಪಳಿ ತಪ್ಪಿಸುವ ಉದ್ದೇಶದಿಂದ ಲಾಕ್​ಡೌನ್ ಪ್ರಮುಖ ಅಸಣಉವಾಗಿದೆ ಎಂದು ವೈದ್ಯಕೀಯ ತಜ್ಞರು ಮುಖ್ಯಮಂತ್ರಿ ಬಿಎಸ್​ವೈಗೆ ಸಲಹೆ ನೀಡಿದ್ದಾರೆ.
ಮುಂಬರುವ ದಿನದಲ್ಲಿ ಸೋಂಕು ಹೆಚ್ಚುವ ಎಲ್ಲ ಸಾಧ್ಯತೆಗಳಿವೆ. ಸರ್ಕಾರದ ಸಿದ್ಧತೆಗಳು ಇನ್ನಷ್ಟು ನಡೆಯಬೇಕಿದ್ದು, ಸ್ವಲ್ಪ ಸಮಯಾವಕಾಶದ ಅವಶ್ಯಕತೆಯಿದೆ. ಲಾಕ್​ಡೌನ್ ಮಾಡಿದರೆ ಅಷ್ಟರ ಮಟ್ಟಿಗೆ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚುವರಿ ಹಾಸಿಗೆ, ಆಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿಯಂತಹ ಸಿದ್ಧತೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಲಾಕ್​ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಡ್ರೋನ್ ಪ್ರತಾಪ ಕ್ವಾರಂಟೈನ್​ನಲ್ಲಿದ್ದಾರಂತೆ..
ವ್ಯಾಪಾರಿಗಳಿಗೆ ಕಾಡುತ್ತಿದೆ ಸೋಂಕು ನಗರದಲ್ಲಿ ತರಕಾರಿ ಹಾಗೂ ದಿನಸಿ ವ್ಯಾಪಾರಿಗಳು, ಆಟೋ ಚಾಲಕರು, ಹೋಟೆಲ್ ಸಿಬ್ಬಂದಿ ಹಾಗೂ ಇತರೆ ಅಗತ್ಯ ಸೇವೆಯಲ್ಲಿ 50 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲು ಅವರನ್ನು ರಕ್ಷಣೆ ಮಾಡಬೇಕಿದೆ. ಈಗಾಗಲೇ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅನೇಕ ಸಂಸ್ಥೆಗಳು 50 ವರ್ಷ ಮೇಲ್ಪಟ್ಟವರಿಗೆ ರಜೆ ನೀಡಿವೆ. ಅದೇ ರೀತಿ, 50 ವರ್ಷ ಮೇಲ್ಪಟ್ಟ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಸರ್ಕಾರ ಮಾರ್ಗಸೂಚಿ ಹೊರಡಿಸುವುದು ಅಗತ್ಯವಾಗಿದೆ.
50 ವರ್ಷ ಆಸುಪಾಸಿನವರಿಗೂ ಆತಂಕ ಮೃತಪಟ್ಟವರಲ್ಲಿ ಈ ಹಿಂದೆ 60 ವರ್ಷದ ಆಸುಪಾಸಿನಲ್ಲಿದ್ದವರು ಹೆಚ್ಚಿರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ 50 ವರ್ಷದ ಆಸುಪಾಸಿನವರೂ ಹೆಚ್ಚುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ಒಟ್ಟು 5,072 ಜನರಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಜುಲೈನ 11 ದಿನದಲ್ಲಿ ಸೋಂಕಿನಿಂದ 134 ಮಂದಿ ಮೃತಪಟ್ಟಿದ್ದು ಇದರಲ್ಲಿ 114 ಮಂದಿ 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇತರ 20 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಮಾನಸಿಕವಾಗಿ ಹೆಚ್ಚು ಸದೃಢವಾಗುವ ಮೂಲಕ ಸೋಂಕನ್ನು ಎದುರಿಸುವ ಕುರಿತು ತಜ್ಞರು ಸಲಹೆ ನೀಡುತ್ತಿದ್ದಾರೆ.
ಹಳ್ಳ ಹಿಡಿದ ಕೆಐಎಡಿಬಿ ಅವ್ಯವಹಾರ ತನಿಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
