ಬೆಂಗಳೂರು: ನಗರದಲ್ಲಿ ಕರೊನಾ ಸೋಂಕು ನಿಯಂತ್ರಣ ಹಾಗೂ ಸಾವಿನ ಪ್ರಮಾಣ ತಗ್ಗಿಸಲು ಕೈಗೊಳ್ಳಲಾದ ಎಲ್ಲ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮಾಡಲು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 198 ವಾರ್ಡ್​ಗಳಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳನ್ನು ಕಾರ್ಯ ಪಡೆ ಪರಿಶೀಲಿಸಲಿದೆ. ಸೋಂಕಿತರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವುದು, ಆಂಬುಲೆನ್ಸ್ ಒದಗಿಸುವುದು, ವ್ಯಕ್ತಿಗತ ಅಂತರ ಪಾಲನೆ, ಮಾಸ್ಕ್ ಧರಿಸುವ ಕುರಿತು ಕೈಗೊಂಡ ಕೆಲಸಗಳ ಬಗ್ಗೆ ಪರಿಶೀಲನೆ ಮಾಡಲಿದೆ.
ಕರೊನಾ ಪರೀಕ್ಷೆ ಮಾಡಿಸಿದವರಿಗೆ ಶೀಘ್ರ ವರದಿ ನೀಡುವುದು, ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಸ್ಥಳಾಂತರ, ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ತಪಾಸಣೆ ಮಾಡಿಸಿದಲ್ಲಿ ಅದರ ವರದಿಯನ್ನು ಆಯಾ ದಿನವೇ ಐಸಿಎಂಆರ್ ಪೋರ್ಟಲ್​ಗೆ ದಾಖಲಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಿದೆ. ಕರೊನಾ ನಿಗ್ರಹಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚೆ ಮಾಡಲು ಕಾರ್ಯಪಡೆ ಪ್ರತಿ 2 ದಿನಕ್ಕೊಮ್ಮೆ ಸಭೆ ನಡೆಸಲಿದೆ.
ಇದನ್ನೂ ಓದಿ:ಅಮ್ಮಾ…. ಒಮ್ಮೆ ನಿನ್ನ ಕಣ್ತುಂಬಿಕೊಂಡು ಬಿಡುವೆ: ಐಸಿಯು ಕಿಟಕಿ ಬಳಿ ಕುಳಿತ ಪ್ಯಾಲೆಸ್ತೈನ್ ಯುವಕನ ಕಣ್ಣೀರ ಕಥೆ
ಕಾರ್ಯಪಡೆಯಲ್ಲಿ ಯಾರಿದ್ದಾರೆ?:ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಕಾರ್ಯಪಡೆ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರಾಗಿ ವಿಶೇಷ ಆಯುಕ್ತ ಡಿ. ರಂದೀಪ್, ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಆರ್. ಗಿರಿಧರ ಬಾಬು, ಸದಸ್ಯ ಕಾರ್ಯದರ್ಶಿಗಳಾಗಿ ಬಿಬಿಎಂಪಿ ಆರೋಗ್ಯಾಧಿಕಾರಿಗಳಾದ ಡಾ. ವಿಜಯೇಂದ್ರ, ಡಾ.ನಿರ್ಮಲಾ ಬುಗ್ಗಿ, ಸದಸ್ಯರಾಗಿ ಡಾ. ರವಿ ಮೆಹ್ರಾ, ಡಾ. ಕೃಷ್ಣಮೂರ್ತಿ, ಡಾ. ವೆಂಕಟೇಶ್, ಡಾ. ಆಶಿಷ್ ಸತ್ಪತಿ, ಡಾ. ನಾಗರಾಜ, ರಮೇಶ್ ಅರವಿಂದ್, ಡಾ. ರಂಗನಾಥ್, ಡಾ.ರಮೇಶ್ ಮಿಸ್ತಿ, ಡಾ. ಸುರೇಶ್ ಜಿ.ಕೆ., ಡಾ. ಕಲಾವತಿ, ಡಾ. ಪ್ರದೀಪ್ ರಂಗಪ್ಪ ಇರಲಿದ್ದಾರೆ. ಡಾ.ಎಂ.ಕೆ. ಸುದರ್ಶನ್, ಪ್ರೊ. ರವಿ, ಪ್ರೊ. ಗುರುರಾಜ್, ಡಾ. ಲೋಕೇಶ್ ಮತ್ತಿತರರು ವಿಶೇಷ ಆಹ್ವಾನಿತರಾಗಿದ್ದಾರೆ.
‘ಟೆರೆಸ್ ಮೇಲೆ ಹೋದ್ರೂ ನೆಟ್​ ಸಿಗ್ತಿಲ್ಲ ಸರ್..’ :ಆನ್​ಲೈನ್ ಕ್ಲಾಸ್​ಗೆ ನೆಟ್​ವರ್ಕ್​ ಕಿರಿಕಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + four =
Remember me
