ವಿಜಯಪುರ:ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲಿಗೆ ಒಟ್ಟು ಸಾವಿನ ಸಂಖ್ಯೆ 59ಕ್ಕೆ ಏರಿದೆ.
ವಿಜಯಪುರದಲ್ಲಿ 82 ವರ್ಷದ ವೃದ್ಧೆ ಕೊವಿಡ್​​ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ವಿಜಯಪುರದಲ್ಲಿ ಸಾವಿನ ಸಂಖ್ಯೆ ಆರಕ್ಕೇರಿದೆ.
ವೃದ್ಧೆ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 27ರಂದೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಕರೊನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಇಂದು ವರದಿ ಬಂದಿದ್ದು, ಅದರಲ್ಲಿ ಕೊವಿಡ್​-19 ಪಾಸಿಟಿವ್​ ಎಂದಿದೆ.
ಇದನ್ನೂ ಓದಿ:ಪ್ರತಿದಿನವೂ ಊಟಕ್ಕೆ ಅನ್ನ ಮತ್ತು ದಾಲ್​ ಕೊಡ್ತಿದ್ರು ಅಂತ ಕೊಲೆ…!
ನಿನ್ನೆ ಬೀದರ್​ನಲ್ಲಿ 55 ವರ್ಷದ ವೃದ್ಧೆಯೋರ್ವರು ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕಂಟೇನ್​ಮೆಂಟ್​ ಝೋನ್​ನ ನಿವಾಸಿಯಾಗಿದ್ದ ಅವರು ಮಧುಮೇಹ, ಉಸಿರಾಟದ ಸಮಸ್ಯೆ, ನಿಶ್ಯಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದರು. ಮೇ 16ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಮೃತಪಟ್ಟಿದ್ದು, ಕೊವಿಡ್​ ವರದಿಯ ಬಗ್ಗೆ ಉಲ್ಲೇಖವಿಲ್ಲ.
ಇದನ್ನೂ ಓದಿ:ಮಕ್ಕಳ ನಿರ್ಲಕ್ಷ್ಯಕ್ಕೆ ಮನನೊಂದ ವೃದ್ಧ ತಂದೆ-ತಾಯಿ ಜತೆಯಾಗಿ ಆತ್ಮಹತ್ಯೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
