ಬೆಂಗಳೂರು: ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವುದಕ್ಕೆ ಅನುಮತಿ ನೀಡಿದ ಬೆನ್ನಿಗೆ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಉಂಟಾಗಿದೆ. ಮಹಾರಾಷ್ಟ್ರ ಮುಂಬೈನಿಂದ ಆಗಮಿಸಿದವರ ಸಂಖ್ಯೆ ಇದರಲ್ಲಿ ಹೆಚ್ಚಾಗಿದ್ದು, ಈ ಕುರಿತ ಸುದ್ದಿಗಳು ಎಲ್ಲೆಡೆ ಹೈಲೈಟ್ ಆಗುತ್ತಿದ್ದಂತೆಯೇ ಬುಧವಾರ ಮಧ್ಯಾಹ್ನ 12 ಗಂಟೆಯ ಕೋವಿಡ್​ 19 ಬುಲೆಟಿನ್​ನಲ್ಲಿ ಪ್ರಯಾಣದ ಹಿನ್ನೆಲೆ, ಸೋಂಕಿತರ ಸಂಪರ್ಕ ಇತ್ಯಾದಿ ವಿವರಗಳು ನಾಪತ್ತೆಯಾಗಿದ್ದವು!
ಮಾಹಿತಿ ನೀಡುವಿಕೆಯಲ್ಲಿ ಆಟ ಆಡಿದ ರಾಜ್ಯ ಸರ್ಕಾರದ ಕ್ರಮಕ್ಕೆ ಆ ಕ್ಷಣವೇ ಸಾಮಾಜಿಕ ತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾದವು. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಅಧಿಕಾರಿ ವಲಯದಲ್ಲಿ ಚರ್ಚೆಗಳು ಆರಂಭವಾದವು. ಸರ್ಕಾರದ ಕ್ರಮ ಟೀಕೆಗೆ ಒಳಗಾಗುತ್ತಿದ್ದಂತೆ ನಿರ್ಧಾರ ತೆಗೆದುಕೊಂಡವರೂ ತಲ್ಲಣಕ್ಕೆ ಒಳಗಾದರು.
ಇದನ್ನೂ ಓದಿ:ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಪರಿಣಾಮ, ಕೋವಿಡ್​ 19 ಬುಲೆಟಿನ್ ವಿಚಾರದಲ್ಲಿ ಕಣ್ಣಾ ಮುಚ್ಚಾಲೆ ಆಡಿದ ರಾಜ್ಯ ಸರ್ಕಾರ, ಸಂಜೆ 5 ಗಂಟೆ ವೇಳೆಗೆ ಯೂ ಟರ್ನ್ ಹೊಡೆದಿದೆ. ಸಂಜೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಮತ್ತೆ ಹಳೆಯ ಮಾದರಿಯಲ್ಲೇ ಇದ್ದು, ಸೋಂಕಿತರ ಪ್ರಯಾಣ, ಸಂಪರ್ಕ ಹಿನ್ನೆಲೆಯ ವಿವರ ಪ್ರಕಟವಾಗಿವೆ.
ಇದರಂತೆ, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯ ಅವಧಿಯಲ್ಲಿ ಒಟ್ಟು 67 ಪ್ರಕರಣಗಳು ದೃಢಪಟ್ಟಿವೆ. ಇಂದು ಆಸ್ಪತ್ರೆಯಿಂದ ಒಟ್ಟು 13 ಮಂದಿ ಬಿಡುಗಡೆಯಾಗಿದ್ದು ಇದುವರೆಗೆ ಒಟ್ಟು ಬಿಡುಗಡೆಯಾದವರ ಸಂಖ್ಯೆ 556 ಆಗಿದೆ. ಸದ್ಯ ಕೋವಿಡ್​ 19 ಸಕ್ರಿಯವಾಗಿರುವ ರೋಗಿಗಳ ಸಂಖ್ಯೆ 864. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 15. ಸೋಂಕಿಗೆ ಒಳಗಾಗಿ ಮೃತಪಟ್ಟವರ ಒಟ್ಟು ಸಂಖ್ಯೆ 41. ಇದರಲ್ಲಿ ಒಂದು ಪ್ರಕರಣ ಇಂದು ಆಗಿದ್ದು, ಇನ್ನೊಂದು ಕೋವಿಡ್​ ಸೋಂಕಿತರಾದರೂ ಮೃತರಾದುದಕ್ಕೆ ಕಾರಣ ಬೇರೆಯಾಗಿದೆ. ಇದುವರೆಗೆ ರಾಜ್ಯದಲ್ಲಿ ದೃಢಪಟ್ಟಿರುವ ಕೋವಿಡ್ 19 ಪ್ರಕರಣ 1462. ಹೊಸದಾಗಿ ದೃಢಪಟ್ಟಿರುವ 67 ಪ್ರಕರಣಗಳ ಪೈಕಿ ಹಾಸನ-21, ಬೀದರ್​- 10, ಮಂಡ್ಯ-8, ಕಲಬುರಗಿ- 7, ಉಡುಪಿ-6, ಬೆಂಗಳೂರು ಮತ್ತು ತುಮಕೂರು, ರಾಯಚೂರು ತಲಾ 4, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಯಾದಗಿರಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಕರೊನಾ ಸೋಂಕಿತರ ಪ್ರಯಾಣದ ಹಿನ್ನೆಲೆ, ಸಂಪರ್ಕ ವಿವರ ನೀಡುವುದನ್ನು ನಿಲ್ಲಿಸಿತೇ ಸರ್ಕಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
