ಬೆಂಗಳೂರು: ಬ್ರಿಟನ್ ರಾಜ್ಯಕ್ಕೆ ಬಂದಿರುವ ಎಲ್ಲರ ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚಲಾಗಿದೆ. ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮೊಬೈಲ್ ಮೂಲಕ ಸಂಪರ್ಕಿಸಿ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನ ಸೌಧ ಮಹಾದ್ವಾರದ ಬಳಿ ಬಿಎಸ್ ಎಫ್ ಸೈಕಲ್ ಯಾತ್ರೆಗೆ ಸಿಎಂ ಬಿಎಸ್ ವೈ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯು.ಕೆ.ಯಿಂದ ಮೊದಲ ಹಂತದಲ್ಲಿ ರಾಜ್ಯಕ್ಕೆ ಬಂದವರಿಗೆ ಹೊಸ ರೂಪದ ಕರೊನಾ ವೈರಾಣು ಬಗ್ಗೆ ಮಾಹಿತಿಯಿಲ್ಲದೆ ಎಲ್ಲೆಡೆ ಓಡಾಡಿದ್ದಾರೆ. ಈಗ ಎಲ್ಲರ ವಿವರ ಕಲೆಹಾಕಿ ಸೂಕ್ತ‌ ಸೂಚನೆ ನೀಡಲಾಗಿದೆ. ರೂಪಾಂತರಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ‌ ಹೊಸ ಮಾರ್ಗಸೂಚಿ ತಯಾರಿಸಲಾಗುತ್ತಿದ್ದು, ಸೋಮವಾರ ಬಿಡುಗಡೆಯಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ:ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?
ಪೂರ್ಣ ನಿರ್ಬಂಧ:ಹೊಸ ರೂಪದ ಕರೊನಾ ವೈರಾಣು ಯು.ಕೆ.ಯಲ್ಲಿ ಕಾಣಿಸಿಕೊಂಡಿರುವ ಕಾರಣ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದ್ದು, ಹೊರ ವಲಯದ ಮೋಜಿನ ಕೂಟಗಳಿಗೂ ಅನ್ವಯವಾಗುತ್ತದೆ. ಪಾರ್ಟಿ ಎಂದಾಕ್ಷಣ ಜನರು ಗುಂಪುಗೂಡಿ ವೈರಾಣು ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನಿಷೇಧ ಜಾರಿಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ:PHOTO GALLERY| ‘ಪೆಟ್ರೋಮ್ಯಾಕ್ಸ್’ ಸೆಟ್​ನಲ್ಲಿ ಹರಿಪ್ರಿಯಾಗೆ ಸಿಕ್ತು ಅಭಿಮಾನಿಗಳ ವಿಶೇಷ ಪ್ರೀತಿ
ಬುದ್ಧಿವಾದ:ನಿರ್ಭಯಾ ಸೇಫ್ ಟೆಂಡರ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ‌ ಕಾರ್ಯದರ್ಶಿ ಹಾಗೂ ಡಿಜಿಪಿ ಜತೆಗೆ ಮಾತನಾಡಿರುವೆ. ಐಪಿಎಸ್ ಅಧಿಕಾರಿಗಳಿಬ್ಬರಿಗೆ ಆದೇಶ, ಉಪದೇಶ ನೀಡಲಿದ್ದಾರೆ ಎಂದು ಬೊಮ್ಮಾಯಿ‌ ಹೇಳಿದರು.
ಹುಷಾರು.. ಹಾಲು ಹಾಲಾಹಲವಾಗಿದೆ ನೋಡಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 8 =
Remember me
