ಬೆಂಗಳೂರು: ರಾಜ್ಯದಲ್ಲಿ ಕರೊನಾ COVID19 ಸೋಂಕುಪೀಡಿತರ ಸಂಖ್ಯೆ 900ರ ಗಡಿ ದಾಟಿದೆ. ಮಂಗಳವಾರ ಹೊಸದಾಗಿ 42 ಪ್ರಕರಣಗಳು ದೃಢವಾಗಿದ್ದು, ಒಟ್ಟು ಸಂಚಿತ ಖಚಿತ ಪ್ರಕರಣಗಳ ಸಂಖ್ಯೆ 904ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ 31 ಪ್ರಕರಣಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ.
ಇದನ್ನೂ ಓದಿ:VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!
ಇದಲ್ಲದೆ, ಒಂದು ಸಾವು ಕೋವಿಡ್​ 19 ರ ಹೊರತಾದ ಕಾರಣಕ್ಕೆ ಸಂಭವಿಸಿದೆ. 426 ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸ ಪ್ರಕರಣಗಳು ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ನಡುವೆ ದೃಢಪಟ್ಟಿರುವುದಾಗಿದೆ.
ಇದನ್ನೂ ಓದಿ:ಪತ್ರಕರ್ತೆಯರಿಬ್ಬರಿಗೆ ಚೀನಾ ತೋರಿಸಿದ ಅಮೆರಿಕ ಅಧ್ಯಕ್ಷ – ಸುದ್ದಿಗೋಷ್ಠಿ ಅರ್ಧಕ್ಕೇ ಖತಂ!
ಇಂದು ದೃಢಪಟ್ಟಿರುವ 42 ಪ್ರಕರಣಗಳ ಪೈಕಿ 14 ಪ್ರಕರಣ ಬಾಗಲಕೋಟೆಯಲ್ಲೂ, ಹುಬ್ಬಳ್ಳಿ 9, ಹಾಸನ 5, ದಕ್ಷಿಣ ಕನ್ನಡ 3, ಬೆಂಗಳೂರು 3, ಬೀದರ್ 2, ಯಾದಗಿರಿ 2, ಬಳ್ಳಾರಿ, ಚಿಕ್ಕಬಳ್ಳಾಪುರ, ಕಲಬುರಗಿ, ಮಂಡ್ಯಗಳಲ್ಲಿ ತಲಾ ಒಂದು ಪ್ರಕರಣಗಳು ಸೇರಿಕೊಂಡಿವೆ. ಹಾಸನ ಹಸಿರು ವಲಯದಲ್ಲಿದ್ದು, ಅಲ್ಲಿ ಒಂದೇ ದಿನ 5 ಪ್ರಕರಣ ದಾಖಲಾಗಿ ಕಳವಳ ಮೂಡಿಸಿದೆ. ಉಳಿದ ವಿವರಗಳಿಗಾಗಿ ಪಟ್ಟಿಯನ್ನು ಗಮನಿಸಿ..


533 ಜನರಿಗೆ COVID19 ಕೊಟ್ಟವ ಒಬ್ಬನೇ- ಘಾನಾದ ಅಧ್ಯಕ್ಷರ ಕಳವಳ !

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + fifteen =
Remember me
