ಬೆಂಗಳೂರು:ಕರೊನಾ ಮಹಾಮಾರಿಗೆ 2021ರ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಸಿಕ್ಕೇ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸದಲ್ಲಿರುವ ರಾಜ್ಯ ಸರ್ಕಾರ, ಲಸಿಕೆ ಉತ್ಪಾದನೆ ಹಾಗೂ ವಿತರಣೆ ವ್ಯವಸ್ಥೆ ಕುರಿತಂತೆ ನೀಲಿನಕ್ಷೆ ಸಿದ್ಧಪಡಿಸಿಕೊಳ್ಳಲಾರಂಭಿಸಿದೆ.
ಮುಂದಿನ 3-4 ತಿಂಗಳಲ್ಲಿ ಲಸಿಕೆ ಸಿಗಬಹುದೆಂಬ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಬಗ್ಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದೇವೆ. ಗೊಂದಲ ಇಲ್ಲದೆ ವಿತರಣೆಗೆ ನೆಟ್​ವರ್ಕಿಂಗ್ ಮಾಡಲಾಗುತ್ತಿದೆ.ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೂಡ ಮುಂದಿನ ವರ್ಷಾರಂಭದಲ್ಲಿ ಲಸಿಕೆ ಸಿಗುವುದು ನಿಶ್ಚಿತ ಎಂದು ಪುನರುಚ್ಚರಿಸಿದ್ದು, ರಾಜ್ಯ ಸರ್ಕಾರ ಕೂಡ ಇದೇ ವಿಶ್ವಾಸದಲ್ಲಿದೆ. ಒಂದೊಮ್ಮೆ ನಿರೀಕ್ಷೆಯಂತೆ 2021ರ ಜನವರಿ ಅಥವಾ ಫೆಬ್ರವರಿಯಲ್ಲಿ ಲಸಿಕೆ ಬಳಕೆಗೆ ಲಭ್ಯವಾದಲ್ಲಿ ಅದನ್ನು ಯಾವ ಪ್ರಮಾಣದಲ್ಲಿ ಉತ್ಪಾದಿಸಬೇಕು ಮತ್ತು ವಿತರಣಾ ವ್ಯವಸ್ಥೆ ಹೇಗಿರಬೇಕೆಂಬುದರ ಕುರಿತಂತೆ ಸಮಾಲೋಚನೆ ನಡೆಸಿದೆ. ಜತೆಗೆ ಕೇಂದ್ರದ ನಿರ್ದೇಶನದಂತೆ ವಿಚಾರ ವಿನಿಮಯ ನಡೆಸಿರುವ ರಾಜ್ಯ ಸರ್ಕಾರ ಮಾಹಿತಿ ವಿತರಣಾ ಕೇಂದ್ರಗಳನ್ನು ಗುರುತಿಸಿ ಮ್ಯಾಪಿಂಗ್ ಮಾಡಿಕೊಳ್ಳಲು ಬಯಸಿದೆ. ಈ ಸಂಬಂಧ ಹತ್ತು ದಿನದೊಳಗೆ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ತಾಲೀಮು ಆರಂಭಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಿರ್ಧರಿಸಿದ್ದಾರೆ.
ಪೂರ್ವತಯಾರಿ
1ಲಸಿಕೆ ವಿತರಣಾ ಕೇಂದ್ರ ಗುರುತಿಸುವುದು, ಅಗತ್ಯವಿರುವೆಡೆ ಮೊಬೈಲ್ ಘಟಕ ಕಳಿಸುವುದು
2ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಕೆಗೆ ನೆಟ್​ವರ್ಕಿಂಗ್
3ಯಾರಿಗೆ ಮೊದಲು ಲಸಿಕೆ ಕೊಡಬೇಕೆಂಬ ಆದ್ಯತಾ ಪಟ್ಟಿ ತಯಾರಿ
ವಿಜಯವಾಣಿಯೊಂದಿಗೆ ಮಾತನಾಡಿದ ಅವರು ‘ಭಾರತವೂ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕೂಡ ಆಗಿರುವ ಒಬ್ಬರ ಸಂಪರ್ಕದಲ್ಲಿದ್ದುಕೊಂಡು ವ್ಯಾಕ್ಸಿನ್ ವಿಚಾರವಾಗಿ ಮಾಹಿತಿ ಪಡೆದುಕೊಂಡಿದ್ದೇನೆ. 2021ರ ಜನವರಿ, ಫೆಬ್ರವರಿಯಲ್ಲಿ ವ್ಯಾಕ್ಸಿನ್ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ, ಅವರೂ ಆತ್ಮವಿಶ್ವಾಸದಲ್ಲಿದ್ದಾರೆ’ ಎಂದು ವಿವರಿಸಿದರು.
ವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಮುಗಿದು ಬಳಕೆಗೆ ಯೋಗ್ಯ ಎನಿಸಿದ ಕೂಡಲೇ ಉತ್ಪಾದನೆಗೆ ಗಮನ ಹರಿಸಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ದೇಶದ ವಿವಿಧ ಕಡೆ ಉತ್ಪಾದನೆ ಮತ್ತು ರವಾನೆಗೆ ಈಗಾಗಲೇ ಸ್ಪಷ್ಟ ರೂಪುರೇಷೆ ಮಾಡಿಕೊಂಡಿದೆ ಎಂದು ಹೇಳಿದರು.
ಮೊಬೈಲ್ ಘಟಕಗಳಲ್ಲಿ ರವಾನೆರಾಜ್ಯದ ವಿಚಾರಕ್ಕೆ ಬಂದರೆ, ಉತ್ಪಾದನೆ ಮತ್ತು ವಿತರಣೆ ಸಂಬಂಧ ಸರ್ಕಾರ ಕೆಲವು ಆಲೋಚನೆ ಮಾಡಿದೆ. ಅದನ್ನು ಗೊಂದಲರಹಿತವಾಗಿ ಕಾರ್ಯರೂಪಕ್ಕೆ ತರಲು ತೀರ್ವನಿಸಲಾಗಿದೆ. ರಾಜ್ಯದಲ್ಲೂ ವ್ಯಾಕ್ಸಿನ್ ಉತ್ಪಾದನೆ ಮಾಡುವ ಸಾಮರ್ಥ್ಯ ಇರುವ ಘಟಕಗಳು ಇವೆ. ಅಲ್ಲಿ ಆದ್ಯತೆ ಮೇಲೆ ಉತ್ಪಾದನೆಗೆ ಸಹಕಾರ ಕೊಡಲು ಸರ್ಕಾರ ಸಿದ್ಧವಿದೆ. ಎರಡನೇ ಭಾಗವಾಗಿ ಉತ್ಪಾದನೆಯಾದ ವ್ಯಾಕ್ಸಿನ್ ಅನ್ನು ರಾಜ್ಯಾದ್ಯಂತ ಹಂಚಿಕೆ ಮಾಡಲು ಯೋಜನೆ ರೂಪಿಸುತ್ತಿದೆ. ತಡಮಾಡದೆ ವ್ಯಾಕ್ಸಿನ್ ತಲುಪಿಸುವ ಬಗೆ ಮತ್ತು ಲಸಿಕಾ ಕೇಂದ್ರಗಳನ್ನು ಗುರುತಿಸುವ ಕೆಲಸ ಆರಂಭವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಲಸಿಕಾ ಕೇಂದ್ರಗಳಾಗಿ ಗುರುತಿಸಲು ಸರ್ಕಾರ ಬಯಸಿದೆ. ಜತೆಗೆ ಮೊಬೈಲ್ ಘಟಕಗಳನ್ನು ಸಿದ್ಧಮಾಡಿ, ನಾಡಿನ ಮೂಲೆಮೂಲೆಗೂ ಏಕಕಾಲದಲ್ಲಿ ಲಸಿಕೆ ಕಳಿಸಲು ಉದ್ದೇಶಿಸಿದೆ. ಈ ಸಂಬಂಧ ನೀಲಿನಕ್ಷೆ ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳ ಸಭೆ ಸದ್ಯದಲ್ಲೇ ನಡೆಯಲಿದೆ. ಮುಂದಿನ ಹಂತದಲ್ಲಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ, ಚುನಾವಣೆ ಪೂರ್ವತಯಾರಿ ರೀತಿ ಸ್ಪಷ್ಟತೆ ತಂದುಕೊಳ್ಳಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಮುಂದೆ ಐಇಸಿ4ಟಿ (ಟ್ರೇಸ್, ಟೆಸ್ಟ್, ಟ್ರಾಕ್, ಟ್ರೀಟ್​ವೆುಂಟ್) ಬಗ್ಗೆ ಗಮನ ಕೊಟ್ಟಿದ್ದ ಸರ್ಕಾರದ ನಡೆ ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು, ಆದರೆ ಅದರ ನಿರ್ವಹಣೆಯಲ್ಲಿ ವಿಫಲವಾಗಿದ್ದರ ಬಗ್ಗೆಯೂ ಸಚಿವ ಡಾ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರನ್ನೊಳಗೊಂಡ ಬೂತ್ ಸಮಿತಿ ರಚನೆ ಮಾಡಲಾಯಿತು, ಇದರಿಂದ ನಿರೀಕ್ಷಿತ ಕೆಲಸಗಳಾಗಲಿಲ್ಲ. ಮುಂದಿನ ದಿನಗಳಲ್ಲಿ ಮಾಹಿತಿ, ತಿಳಿವಳಿಕೆ ಮತ್ತು ಸಂವಹನದ (ಐಇಸಿ) ಬಗ್ಗೆ ಗಮನ ನೀಡುತ್ತೇವೆ. ಎಲ್ಲರ ಸಹಕಾರ ಇದ್ದರೆ ಖಂಡಿತವಾಗಿ ನಿಯಂತ್ರಿಸಬಹುದು ಎಂದರು.
2021ರ ಜುಲೈಗೆ 25 ಕೋಟಿ ಜನರಿಗೆ ಔಷಧದೇಶದ 25 ಕೋಟಿ ಜನರಿಗೆ 2021ರ ಜುಲೈ ತಿಂಗಳೊಳಗೆ ಕರೊನಾ ಔಷಧವನ್ನು ವಿತರಿಸುವ ಗುರಿ ಹೊಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಈ ಕಾರ್ಯಕ್ಕಾಗಿಯೇ 40-50 ಕೋಟಿ ಡೋಸೇಜ್ ಔಷಧವನ್ನು ಕೇಂದ್ರ ಸರ್ಕಾರ ಸಂಗ್ರಹಿಸಲಿದೆ. ಎಲ್ಲ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಯಾರಿಗೆ ಮೊದಲು ಔಷಧ ತಲುಪುಬೇಕು (ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು, ಮುಖ್ಯಭೂಮಿ ಕೆಲಸಗಾರರು) ಎನ್ನುವುದನ್ನು ಪಟ್ಟಿ ಮಾಡಿ ಕಳುಹಿಸಬೇಕು. ಒಮ್ಮೆ ಔಷಧ ಸಾರ್ವಜನಿಕ ಬಳಕೆಗೆ ಸಿದ್ಧವಾದರೆ ಅದನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಹೊಣೆಗಾರಿಕೆ ನಮ್ಮದು ಎಂದು ಅವರು ಹೇಳಿದ್ದಾರೆ.
ಬಿಹಾರ ಚುನಾವಣೆ | ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 14 =
Remember me
