ಬೆಂಗಳೂರು:ಸಾಮಾನ್ಯ ರೀತಿಯಲ್ಲೇ ಕಾಣುವ ಈ ಮುಖಗವಸು ಧರಿಸಿದರೆ, ಒಳಬರಲು ಪ್ರಯತ್ನಿಸುವ ವೈರಸ್​ಗಳು ‘ಸ್ಥಿರ ವಿದ್ಯುತ್’ ಆಘಾತಕ್ಕೆ ಒಳಗಾಗಿ ಸಾಯುತ್ತವೆ! ಹೌದು, ಶಾಲೆಯಲ್ಲಿ ಮಕ್ಕಳಿಗೆ ಬಾಚಣಿಗೆ ಹಾಗೂ ಕಾಗದದ ಚೂರುಗಳನ್ನು ಬಳಸಿ ನಡೆಸಲಾಗುವ ಅತ್ಯಂತ ಸಾಮಾನ್ಯ ಪ್ರಯೋಗವನ್ನು ಬಳಸಿ ವಿಶ್ವವನ್ನು ಕಾಡುತ್ತಿರುವ ಮಹಾಮಾರಿಯನ್ನು ತಡೆಯುವ ಒಂದು ಕ್ರಮವಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ, ಬೆಂಗಳೂರಿನ ನ್ಯಾನೋ ಮತ್ತು ಮೃದು ಪದಾರ್ಥ ವಿಜ್ಞಾನ ಕೇಂದ್ರದ (ಸೆನ್ಸ್) ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ಇದನ್ನೂ ಓದಿ:ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ?
ಕಿರಿಕಿರಿಯಿಲ್ಲದ ವಿಶೇಷ ಮುಖಗವಸುಮುಖಗವಸು ಬಳಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಹೆಚ್ಚು ಹೊತ್ತು ಧರಿಸುವುದು ಕಿರಿಕಿರಿ ಉಂಟುಮಾಡುತ್ತವೆ. ಬಾಯಿಗೆ ಗಟ್ಟಿಯಾಗಿ ಅಂಟಿಕೊಳ್ಳುವುದರಿಂದ ಸಹಜವಾಗಿ ಮಾತನಾಡಲು ಸಾಧ್ಯವಿಲ್ಲ. ಉಸಿರಾಡಿದಾಗ ಹೊರಬರುವ ಹಬೆಯು ಕನ್ನಡಕದ ಗಾಜನ್ನು ಮಸುಕಾಗಿಸುತ್ತದೆ. ಇಂತಹ ಸಮಸ್ಯೆ ನಿವಾರಿಸುವ ವಿಶೇಷ ವಿನ್ಯಾಸವನ್ನು ಈ ಮುಖಗವಸು ಹೊಂದಿದೆ. ಬಾಯಿಯಿಂದ ಮುಂದೆ ಸಾಕಷ್ಟು ಸ್ಥಳಾವಕಾಶವಿದ್ದು, ಸರಾಗವಾಗಿ ಮಾತನಾಡಬಹುದು. ಈ ವಿನ್ಯಾಸದ ಪೇಟೆಂಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಸಾಮಾನ್ಯ ಬಳಕೆಗಷ್ಟೆ ವಿನ್ಯಾಸ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿ ಈಗಿನಂತೆಯೇ ಎನ್-95 ಸೇರಿ ಇನ್ನಿತರೆ ಮುಖಗವಸು ಧರಿಸಬೇಕು ಎಂದು ಸೆನ್ಸ್ ಹೇಳಿದೆ. ಸಾಮಾನ್ಯ ವಸ್ತು ಬಳಸಿರುವುದರಿಂದ ಕಡಿಮೆ ದರಕ್ಕೆ ಲಭ್ಯವಾಗುತ್ತದೆ ಎಂದು ಸೆನ್ಸ್ ವಿಜ್ಞಾನಿಗಳ ತಂಡದ ಪ್ರೊ. ಗಿರಿಧರ್ ಯು. ಕುಲಕರ್ಣಿ ತಿಳಿಸಿದ್ದಾರೆ.
ಸ್ಥಿರ ವಿದ್ಯುತ್​ನಿಂದ ವೈರಸ್ ತಡೆಯುವುದರ ಜತೆಗೆ, ಹೆಚ್ಚು ಹೊತ್ತು ಧರಿಸಿದರೂ ಸಾಮಾನ್ಯ ಜೀವನಕ್ಕೆ ಕಿರಿಕಿರಿಯಾಗದಂತಹ ವಿಶಿಷ್ಟ ವಿನ್ಯಾಸವನ್ನು ಈ ಮುಖಗವಸು ಹೊಂದಿದ್ದು, ಪೇಟೆಂಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಆರ್.ಟಿ. ನಗರದಲ್ಲಿರುವ ಗಾರ್ವೆಂಟ್ ಸಂಸ್ಥೆಯೊಂದು ನಿತ್ಯ 1 ಲಕ್ಷ ಮುಖಗವಸು ತಯಾರಿಸಲಿದೆ.
ಸ್ಥಿರವಿದ್ಯುತ್:ಬಾಚಣಿಕೆಯಿಂದ ಒಣಕೂದಲನ್ನು ಉಜ್ಜಿ, ಕಾಗದದ ಚೂರುಗಳ ಸನಿಹ ಹಿಡಿದಾಗ, ಅಯಸ್ಕಾಂತದಂತೆ ಕಾಗದದ ಚೂರುಗಳು ಬಾಚಣಿಕೆಗೆ ಅಂಟಿಕೊಳ್ಳುತ್ತವೆ. ಇದಕ್ಕೆ ಸ್ಥಿರವಿದ್ಯುತ್ ಕಾರಣ. ಎರಡೂ ವಸ್ತುಗಳನ್ನು ಉಜ್ಜಿದಾಗ ಒಂದರಲ್ಲಿದ್ದ ಎಲೆಕ್ಟ್ರಾನ್ ಕಣಗಳು ಪರಸ್ಪರ ಇನ್ನೊಂದಕ್ಕೆ ಜಿಗಿಯುತ್ತವೆ. ಈ ಸಮಯದಲ್ಲಿ ಸ್ಥಿರವಿದ್ಯುತ್ ಉತ್ಪಾದನೆಯಾಗಿ ಆಯಸ್ಕಾಂತದ ಗುಣ ಲಭಿಸುತ್ತದೆ.
ಇದನ್ನೂ ಓದಿ:ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?
ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಮುಖಗವಸು ತಯಾರಿಸ ಲಾಗಿದೆ. ಇದಕ್ಕೆ ಯಾವುದೇ ಬಾಹ್ಯವಿದ್ಯುತ್ ಸಂಪರ್ಕದ ಅಗತ್ಯವಿಲ್ಲ. ಇದೀಗ ಎಲ್ಲೆಡೆ ಬ್ಯಾಗ್​ಗಳಲ್ಲಿ ಬಳಕೆಯಲ್ಲಿರುವ ನಾನ್ ಓವನ್ ಪಾಲಿ ಪ್ರೊಪಿಲೀನ್ ಹಾಳೆಗಳ ನಡುವೆ ನೈಲಾನ್ ಬಟ್ಟೆಯನ್ನು ಅಳವಡಿಸಲಾಗುತ್ತದೆ. ಈ ಪದರಗಳ ನಡುವೆ ಉಂಟಾಗುವ ಸಣ್ಣ ಘರ್ಷಣೆಯಿಂದ ಸ್ಥಿರವಿದ್ಯುತ್ ಉತ್ಪಾದನೆಯಾಗು ತ್ತದೆ. ಹೊರಗಿನಿಂದ ಯಾವುದೇ ರೀತಿಯ ಧೂಳಿನ ಕಣಗಳು ಒಳಬರದಂತೆ ಈ ವಿದ್ಯುತ್ ತಡೆಯುತ್ತದೆ. ಇದರ ಪರಿಣಾಮಗಳ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ ಎಂದು ಸೆನ್ಸ್ ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ವಿರೋಧ
ಪ್ರತಿನಿತ್ಯ 1 ಲಕ್ಷ ಮಾಸ್ಕ್ ತಯಾರಿಕೆ:ಮುಖಹೊದಿಕೆ ವಿನ್ಯಾಸಕ್ಕೆ ಕೇಂದ್ರ ಸರ್ಕಾರ ಹಸಿರುನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ಆರ್.ಟಿ. ನಗರದಲ್ಲಿರುವ ಕ್ಯಾಮೆಲಿಯಾ ಎಂಬ ಗಾರ್ಮೆಂಟ್​ಗೆ ತಂತ್ರಜ್ಞಾನವನ್ನು ಹಸ್ತಾಂತರಿಸಲಾಗಿದೆ. ಪ್ರತಿನಿತ್ಯ 1 ಲಕ್ಷ ಮಾಸ್ಕ್ ಗಳನ್ನು ಈ ಸಂಸ್ಥೆ ತಯಾರಿಸಿ ದೇಶಾದ್ಯಂತ ವಿತರಣೆ ಮಾಡಲಿದೆ ಎಂದು ‘ಸೆನ್ಸ್’ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + seventeen =
Remember me
