ಬೆಂಗಳೂರು: ರಾಜ್ಯದಲ್ಲಿ ಕರೊನಾ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಇಂದು 267 ಆಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ. ಇದು ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ರ ನಡುವಿನ ಡೇಟಾ ಆಗಿದ್ದು, ಈ ಅವಧಿಯಲ್ಲಿ ಒಬ್ಬ ಸೋಂಕು ಪೀಡಿತ ಮೃತಪಟ್ಟಿದ್ದು ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಇದರಲ್ಲಿ ಎರಡು ಕೇಸ್​ಗಳಲ್ಲಿ ಅನ್ಯಕಾರಣಗಳಿಗೆ ಸಾವು ಸಂಭವಿಸಿದೆ. ನಿನ್ನೆ 410 ಕೇಸ್​ಗಳೊಂದಿಗೆ ಅಗ್ರಸ್ಥಾನ ತಲುಪಿದ್ದ ಉಡುಪಿಯನ್ನು ಇಂದು ಮತ್ತೆ ಕಲಬುರಗಿ ಹಿಂದಿಕ್ಕಿದ್ದು ನಂ.1 ಪಟ್ಟಕ್ಕೇರಿದೆ.
ಇದನ್ನೂ ಓದಿ:17ರಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವಕ್ಕೆ ಚುನಾವಣೆ
ರಾಜ್ಯದಲ್ಲಿ ಸದ್ಯ ಸಕ್ರಿಯವಾಗಿರುವ ಕೋವಿಡ್ 19 ಪ್ರಕರಣಗಳ ಸಂಖ್ಯೆ 2494. ಐಸಿಯುನಲ್ಲಿ 16 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 267 ಪ್ರಕರಣಗಳ ಪೈಕಿ 250 ಅನ್ಯರಾಜ್ಯಗಳಿಂದ ಆಗಮಿಸಿದವರ ಕೇಸ್​ಗಳು. ಇದೇ ಅವಧಿಯಲ್ಲಿ 111 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೂ ಒಟ್ಟು 1,514 ಜನ ಸೋಂಕುಮುಕ್ತರಾಗಿದ್ದಾರೆ.
ಇದನ್ನೂ ಓದಿ:ವಿಜಯ್ ಮಲ್ಯ ಗಡಿಪಾರಿಗೆ ದಿನಗಣನೆ- ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ
ಜಿಲ್ಲಾವಾರು ಅಂಕಿ ಅಂಶ ನೋಡಿದಾಗ ನಿನ್ನೆ ನಂ. 1 ಸ್ಥಾನಕ್ಕೇರಿದ ಉಡುಪಿ ಇಂದು ಎರಡನೇ ಸ್ಥಾನಕ್ಕೆ ಕುಸಿದಿದೆ. ಕಲಬುರಗಿ ಮತ್ತೆ ನಂ.1 ಸ್ಥಾನಕ್ಕೇರಿದೆ. ಇಂದು ಕಲುಬರಗಿಯಲ್ಲಿ 100 ಕೇಸ್​, ಉಡುಪಿಯಲ್ಲಿ 62, ರಾಯಚೂರು 35, ಬೆಂಗಳೂರು ನಗರ 20, ಮಂಡ್ಯ 13 ಕೇಸ್​ಗಳು ದೃಢಪಟ್ಟಿವೆ. ಕಲಬುರಗಿಯಲ್ಲಿ ಒಟ್ಟು 510 ಕೇಸ್​ಗಳಾದರೆ ಉಡುಪಿಯಲ್ಲಿ 472, ಬೆಂಗಳೂರು ನಗರದಲ್ಲಿ 417, ಮಂಡ್ಯ 302, ಯಾದಗಿರಿ 299 ಕೇಸ್​ಗಳೊಂದಿಗೆ ಮೊದಲ ಐದು ಸ್ಥಾನದಲ್ಲಿವೆ. ವಿವರವಾದ ಮಾಹಿತಿಗೆ ಕೆಳಗೆ ಗ್ಯಾಲರಿಯಲ್ಲಿರುವ ಕೋವಿಡ್​ 19 ಸ್ಥಿತಿಗತಿ ವರದಿ ಗಮನಿಸಿ..
ಚಂದನಾಳ ಪ್ರಿಯಕರ ಮತ್ತವನ ಕುಟುಂಬದವರ ಸುಳಿವೇ ಸಿಕ್ಕಿಲ್ವಂತೆ ಪೊಲೀಸರಿಗೆ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − six =
Remember me
