ಬೆಂಗಳೂರು: ಕರೋನಾ ಕೋವಿಡ್ 19 ವೈರಸ್ ಸೋಂಕು ಪೀಡಿತರ ಸಂಖ್ಯೆ ಒಟ್ಟು 7734 ಆಗಿದ್ದು, ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ತನಕದ ಅವಧಿಯಲ್ಲಿ ಒಟ್ಟು 204 ಹೊಸ ಕೇಸ್​ಗಳು ದೃಢಪಟ್ಟಿವೆ. ಬೆಂಗಳೂರು ನಗರದಲ್ಲೇ ಗರಿಷ್ಠ 55 ಪ್ರಕರಣ ಖಚಿತವಾದರೆ, ಯಾದಗಿರಿ 37, ಬಳ್ಳಾರಿ 29, ಕಲಬುರಗಿ 19, ಬೀದರ್ 12 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ.
ಸದರಿ 24 ಗಂಟೆಯ ಅವಧಿಯಲ್ಲಿ 348 ಸೋಂಕು ಪೀಡಿತರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯವಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ 2824 ಆಗಿದ್ದು, ಈ ದಿನ ಮೃತಪಟ್ಟವರ ಸಂಖ್ಯೆ 8. ಇದರೊಂದಿಗೆ ಕೋವಿಡ್ 19 ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 102 ತಲುಪಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ಸೋಂಕು ಪೀಡಿತರು ಅನ್ಯಕಾರಣಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 72.
ಇದನ್ನೂ ಓದಿ:ಪಾಕಿಗಳಿಗಿಂತ ಅನಕ್ಷರಸ್ಥರಿಲ್ಲ- ಪಾಕ್ ಸಚಿವೆಯ ಆಕ್ರೋಶ
ಜಿಲ್ಲೆಗಳಲ್ಲಿನ ಪ್ರಕರಣಗಳನ್ನು ಗಮನಿಸಿದರೆ, ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 1039 ಪ್ರಕರಣಗಳಿದ್ದರೆ, ಕಲುಬರಗಿಯಲ್ಲಿ 1026, ಯಾದಗಿರಿ 865, ಬೆಂಗಳೂರು ನಗರ 827, ರಾಯಚೂರು 410 ಕೇಸ್​ಗಳೊಂದಿಗೆ ಟಾಪ್ 5 ರ ಪಟ್ಟಿಯಲ್ಲಿವೆ. ಪೂರ್ತಿ ವಿವರಗಳಿಗೆ ಕೆಳಗಿರುವ ಗ್ಯಾಲರಿಯಲ್ಲಿ ದಿನದ ವರದಿಯನ್ನು ಗಮನಿಸಬಹುದು.
VIDEO|ಆನ್​ಲೈನ್​ನಲ್ಲಿ ಯೋಗದಿನ: ಸಿಎಂ ಶುಭ ಹಾರೈಕೆ, ಪಾಲ್ಗೊಳ್ಳುವಂತೆ ಜನತೆಗೆ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
