ಬೆಂಗಳೂರು:ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ ಹೊಸತಾಗಿ 337 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8281ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ ಇಂದು 10 ಆಗಿದ್ದು ಒಟ್ಟು ಸಾವಿನ ಸಂಖ್ಯೆ 124 ಆಗಿದೆ. ನಾಲ್ಕು ಪ್ರಕರಣಗಳಲ್ಲಿ ಸಾವು ಅನ್ಯಕಾರಣಗಳಿಗೆ ಸಂಭವಿಸಿವೆ.
ಇಂದು ಆಸ್ಪತ್ರೆಯಿಂದ ಸೋಂಕು ಮುಕ್ತರಾಗಿ ಬಿಡುಗಡೆಯಾದವರು 230. ಇದುವರೆಗೆ ಸೋಂಕು ಮುಕ್ತರಾದವರ ಸಂಖ್ಯೆ 5210. ಐಸಿಯುನಲ್ಲಿ ಚಿಕಿತ್ಸೆಪಡೆಯುತ್ತಿರುವವರ ಸಂಖ್ಯೆ 78. ಸಕ್ರಿಯವಾಗಿರುವ ಸೋಂಕಿತರ ಸಂಖ್ಯೆ 2943. ಇಂದಿನ ಒಟ್ಟು ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರು 11, ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರು 93.
ಇದನ್ನೂ ಓದಿ:ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!
ಜಿಲ್ಲಾವಾರು ಲೆಕ್ಕಾಚಾರ ಗಮನಿಸಿದರೆ ಬೆಂಗಳೂರಿನಲ್ಲೇ ಗರಿಷ್ಠ 132 ಹೊಸ ಪ್ರಕರಣಗಳು ಖಚಿತವಾಗಿವೆ. ಕಲುಬರಗಿ 52, ಬಳ್ಳಾರಿ 37, ಹಾಸನ 18, ದಕ್ಷಿಣ ಕನ್ನಡ 13 ಹೊಸ ಪ್ರಕರಣಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಇದುವರೆಗಿನ ಒಟ್ಟು ಪ್ರಕರಣಗಳ ಲೆಕ್ಕ ನೋಡಿದರೆ ಟಾಪ್ 5ರ ಪಟ್ಟಿಯಲ್ಲಿ ಕಲಬುರಗಿ ಒಂದನೇ ಸ್ಥಾನದಲ್ಲಿದ್ದು 1126 ಪ್ರಕರಣವಿದೆ. ಉಡುಪಿ 1050, ಬೆಂಗಳೂರು ನಗರ 982, ಯಾದಗಿರಿ 877, ದಕ್ಷಿಣ ಕನ್ನಡ 414 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಪೂರ್ಣ ವಿವರಗಳಿಗೆ ಕೆಳಗಿನ ಗ್ಯಾಲರಿಯನ್ನು ಗಮನಿಸಬಹುದು.
ಚೆಕ್‌ಪೋಸ್ಟ್‌ನಲ್ಲಿ ಹಣ ಪಡೆದು ಆಂಧ್ರದವರನ್ನು ಕರ್ನಾಟಕದೊಳಕ್ಕೆ ಬಿಡುತ್ತಿದ್ದ ಪೇದೆಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 7 =
Remember me
