ಬೆಂಗಳೂರು:ಕರೊನಾ ಕೋವಿಡ್ 19 ವೈರಸ್ ಸೋಂಕಿನ ಪ್ರಕರಣ ದಿನೇದಿನೆ ಆತಂಕ ಹೆಚ್ಚಿಸುತ್ತಿದ್ದು ರಾಜ್ಯದಲ್ಲಿ ಇಂದು (ನಿನ್ನೆ ಸಂಜೆ 5ರಿಂದ ಇಂದು ಸಂಜೆ 5 ಗಂಟೆ ತನಕ) 322 ಹೊಸ ಪ್ರಕರಣಗಳು ಖಚಿತವಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9,721ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 274 ಆಗಿದ್ದು, ಇದುವರೆಗೆ ಒಟ್ಟು 6,004 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಒಟ್ಟು 8 ರೋಗಿಗಳು ಮೃತಪಟ್ಟಿದ್ದು, ಈ ಪೈಕಿ ಆರು ಪ್ರಕರಣ ಬೆಂಗಳೂರು, ಒಂದು ದಕ್ಷಿಣ ಕನ್ನಡ ಮತ್ತೊಂದು ಬಳ್ಳಾರಿಯದ್ದು. ಮೃತರು 32 ವರ್ಷದಿಂದ 85 ವರ್ಷ ವಯೋಮಾನದವರು. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 150 ತಲುಪಿದೆ. ಈ ಪೈಕಿ ನಾಲ್ವರು ಅನ್ಯಕಾರಣದಿಂದ ಮೃತಪಟ್ಟಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 120. ಇಂದಿನ ಹೊಸ ಕೇಸ್​ಗಳ ಪೈಕಿ 5ರಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯವರಿದ್ದರೆ, 64 ಪ್ರಕರಣಗಳಲ್ಲಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯವರಿದ್ದಾರೆ.
ಇದನ್ನೂ ಓದಿ:ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?
ಜಿಲ್ಲಾವಾರು ಡೇಟಾ ಗಮನಿಸಿದರೆ ಇಂದು ಬೆಂಗಳೂರಿನಲ್ಲೇ ಗರಿಷ್ಠ 107 ಪ್ರಕರಣ ದೃಢಪಟ್ಟಿದೆ. ಬಳ್ಳಾರಿ 53, ಬೀದರ್ 22, ಮೈಸೂರು 21, ವಿಜಯಪುರ 16 ಕೇಸ್​ಗಳಿದ್ದು ಟಾಪ್ 5 ರ ಪಟ್ಟಿಯಲ್ಲಿವೆ. ಒಟ್ಟು ಪ್ರಕರಣಗಳ ಡೇಟಾದಲ್ಲಿ ಬೆಂಗಳೂರು ನಂಬರ್ 1 ಸ್ಥಾನದಲ್ಲಿದ್ದು ಒಟ್ಟು 1505 ಪ್ರಕರಣಗಳಿವೆ. ಕಲಬುರಗಿ 1232, ಉಡುಪಿ 1088, ಯಾದಗಿರಿ 894 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಉಳಿದ ವಿವರಗಳಿಗೆ ಕೆಳಗಿನ ಗ್ಯಾಲರಿ ಗಮನಿಸಿ.
ಪೊಲೀಸರಿಗೆ ಪ್ರತ್ಯೇಕ ಕೋವಿಡ್ ಪರೀಕ್ಷಾ ಕೇಂದ್ರ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 7 =
Remember me
