ಬೆಂಗಳೂರು:ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯ ನಡುವೆ ಹೊಸದಾಗಿ 2062 ಕೋವಿಡ್ 19 ಕೇಸ್​ಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ ಒಟ್ಟು 54 ಮರಣ ಸಂಭವಿಸಿದೆ. ಆಸ್ಪತ್ರೆಯಿಂದ 778 ಜನ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಹೊಸ 2062 ಕೋವಿಡ್ 19 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಇದುವರೆಗೆ ಒಟ್ಟು 28,877 ಕೇಸ್​ಗಳು ದೃಢಪಟ್ಟಂತಾಗಿವೆ. ಮರಣ ಪ್ರಮಾಣ ಒಟ್ಟು 470ಕ್ಕೆ ತಲುಪಿದೆ. ಈ ಪೈಕಿ ನಾಲ್ಕು ಮರಣ ಅನ್ಯ ಕಾರಣದಿಂದ ಸಂಭವಿಸಿದೆ. ಆಸ್ಪತ್ರೆಯಿಂದ ಸೋಂಕು ಮುಕ್ತರಾಗಿ ಬಿಡುಗಡೆಯಾದವರ ಸಂಖ್ಯೆ 11,876 ಆಗಿದೆ. ಸದ್ಯ ಐಸಿಯುನಲ್ಲಿ 452 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ
ಜಿಲ್ಲಾ ಮಟ್ಟದ ಡೇಟಾ ಗಮನಿಸಿದರೆ ಬೆಂಗಳೂರು ನಗರ ಮುಂಚೂಣಿಯಲ್ಲೇ ಇದ್ದು, ಇಂದು 1148 ಕೇಸ್​ಗಳು ಖಚಿತವಾಗಿವೆ. ಟಾಪ್ ಐದರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದು 183 ಹೊಸ ಕೇಸ್​ಗಳು ಕಂಡುಬಂದಿವೆ. ಧಾರವಾಡ 89, ಕಲಬುರಗಿ 66, ಬಳ್ಳಾರಿ 59, ಮೈಸೂರು 59 ಕೇಸ್​ಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಒಟ್ಟು ಕೇಸ್​ಗಳ ಸಂಖ್ಯೆ ಗಮನಿಸಿದರೆ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಒಟ್ಟು ಕೇಸ್​ಗಳ ಸಂಖ್ಯೆ 12,509ಕ್ಕೆ ತಲುಪಿದೆ. ಕಲಬರುಗಿ 1816, ದಕ್ಷಿಣ ಕನ್ನಡ 1534, ಬಳ್ಳಾರಿ 1447, ಉಡುಪಿ 1420 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ.
ವೀರಪ್ಪನ್ ದಾಳಿಯಲ್ಲಿ ಕೈ ಕಳೆದುಕೊಂಡವನೀಗ ಪರಿಹಾರದ ನಿರೀಕ್ಷೆಯಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eighteen =
Remember me
