ಬೆಂಗಳೂರು:ಕರೊನಾ ಸೋಂಕು ಪರೀಕ್ಷೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸುಳ್ಳು ವರದಿಗಳನ್ನು ನೀಡುತ್ತಿದ್ದು, ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಡಿ ಎಂಬ ಆಡಿಯೋ ರೆಕಾರ್ಡ್​ಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಿದ್ದಾರೆ.
ಯಾರಿಗಾದರೂ ಸಣ್ಣದಾಗಿ ತಲೆನೋವು, ಜ್ವರ, ನೆಗಡಿ ಹಾಗೂ ಸೋಂಕಿತರ ಸಂಪರ್ಕದ ವಿಚಾರಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಲ್ಲಿ ಪಾಸಿಟಿವ್ ವರದಿ ಕೊಡುತ್ತಾರೆ. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಾಗ, ಪುನಃ ಖಾಸಗಿ ಲ್ಯಾಬ್​ಗಳಿಗೆ ಹೋಗಿ ಆರ್​ಟಿ- ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡರೆ ನೆಗೆಟಿವ್ ವರದಿ ಬರುತ್ತಿದೆ. ಪಾಸಿಟಿವ್ ಬಂದ ಸೋಂಕಿತರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ, ಎಲ್ಲರಿಗೂ ಒಂದೇ ರೀತಿಯ ಔಷಧ ಕೊಡುತ್ತಾರೆ. ಇದರಿಂದ ಬೇರೆ ಸಮಸ್ಯೆಗಳು ಉಲ್ಬಣಗೊಂಡು ಸೋಂಕಿತರು ಗಂಭೀರ ಹಂತಕ್ಕೆ ತಲುಪಿ ಸಾವನ್ನಪ್ಪುತ್ತಿದ್ದಾರೆ ಎಂದು ದಾಸರಹಳ್ಳಿಯ ವಿಜಯಾನಂದ ಎಂಬುವರು ಆರೋಪಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕಚೇರಿಯಲ್ಲಿ ಬಿಎಸ್​ಎನ್​​ಎಲ್​ ಕಡ್ಡಾಯ
ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ:ನಮ್ಮ ಮನೆಯಲ್ಲಿ ಪತ್ನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂದೆ, ತಾಯಿ ಹಾಗೂ ಮಗಳು ಸೇರಿ 4 ಜನ ಪರೀಕ್ಷೆ ಒಳಗಾದಾಗ ಎಲ್ಲರಿಗೂ ಪಾಸಿಟಿವ್ ವರದಿ ಕೊಟ್ಟರು. ನಾವು ಹೋಂ ಐಸೋಲೇಷನ್​ನಲ್ಲಿದ್ದೆವು. ಮನೆಯ ಎಲ್ಲರಿಗೂ ದಿನಕ್ಕೆ 4 ಬಾರಿ ಕರೆ ಮಾಡುವ ಪಾಲಿಕೆ ಸಿಬ್ಬಂದಿ ಸಿಕ್ಕಸಿಕ್ಕ ಸಲಹೆ ನೀಡುತ್ತಾರೆ. ಕೆಲವು ಸಿಬ್ಬಂದಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನಿಮ್ಮ ತಂದೆ- ತಾಯಿಗೆ ವಯಸ್ಸಾಗಿದೆ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ. 2.5 ಲಕ್ಷ ರೂ. ಪಾವತಿಸಿದರೆ ಸಾಕು ಎಂದೆಲ್ಲ ಸಲಹೆ ನೀಡುತ್ತಿದ್ದಾರೆ ಎಂದು ವಿಜಯಾನಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ದಸರಾ,ದೀಪಾವಳಿಗೆ ವಿಶೇಷ ಸೂಚಿ: ಸರಳ, ಷರತ್ತುಬದ್ಧ ಆಚರಣೆಗೆ ಸಮ್ಮತಿ
ಹೋಂ ಐಸೋಲೇಶನ್ ಕಿಟ್ ಸಿಗುತ್ತಿಲ್ಲ :ಕರೊನಾ ಸೋಂಕು ಬಂದ ಸಕ್ರಿಯ ಸೋಂಕಿತರಲ್ಲಿ ಶೇ.55 ಮಂದಿ ಹೋಂ ಐಸೋಲೇಕ್ಷನ್​ನಲ್ಲಿದ್ದು, ಅವರಿಗೆ ಔಷಧ ಕಿಟ್ ಕೊಡಬೇಕು. ಆದರೆ, ಸೊಂಕಿತರಿಗೆ ಯಾವುದೇ ಔಷಧ ಮತ್ತು ಪರೀಕ್ಷಾ ಕಿಟ್​ಗಳನ್ನು ನೀಡುತ್ತಿಲ್ಲ. ಸೋಂಕಿತರ ಮನೆಗಳಿಗೆ ಭೇಟಿ ನೀಡುವ ಆಶಾ ಕಾರ್ಯಕರ್ತರು ಮತ್ತು ಇತರೆ ಸಿಬ್ಬಂದಿ ಮನೆಯ ಮುಂದೆ ಬಂದು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತ, ಸುತ್ತಲಿನ ನಿವಾಸಿಗಳ ಮುಂದೆ ಅಸಹ್ಯಕರವಾಗಿ ನಡೆಸಿಕೊಳ್ಳುತ್ತಾರೆ. ಸೂಕ್ತ ಚಿಕಿತ್ಸೆಯೂ ಸಿಗುವುದಿಲ್ಲ, ಮಾಹಿತಿಯೂ ಲಭ್ಯವಾಗುವುದಿಲ್ಲ ಎಂದು ಕೆಂಗೇರಿಯ ಸೋಂಕಿತ ವ್ಯಕ್ತಿಯೊಬ್ಬರು ‘ವಿಜಯವಾಣಿ’ಯೊಂದಿಗೆ ನೋವು ಹಂಚಿಕೊಂಡಿದ್ದಾರೆ.
‘ಸಾರ್ವಜನಿಕರ ಆರೋಪಗಳಿಗೆ ಯಾವುದೇ ಆಧಾರಗಳಿರುವುದಿಲ್ಲ, ತನಿಖೆ ಮಾಡಿದರೆ ಸಮಯ ವ್ಯರ್ಥ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
