ಬೆಂಗಳೂರು:ಕರೊನಾ ಹಾವಳಿ ತಗ್ಗುವುದರೊಂದಿಗೆ ಹಂತ-ಹಂತವಾಗಿ ನಡೆದ ಅನ್​​ಲಾಕ್ ಬೆನ್ನಿಗೇ ಇದೀಗ ಮತ್ತೊಂದು ಸಮಾಧಾನದ ಸಂಗತಿ ಕಂಡುಬಂದಿದೆ. ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣ ಒಂದು ವಾರದೊಳಗೇ ಅರ್ಧಕ್ಕರ್ಧದಷ್ಟು ಕಡಿಮೆಯಾಗಿದೆ.
ಇಂದಿನ ಕರೊನಾ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2,984 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಮತ್ತೊಂದೆಡೆ ಇದೇ ಅವಧಿಯಲ್ಲಿ 14,337 ಮಂದಿ ಕರೊನಾ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆ ಹಾಗೂ ಕೋವಿಡ್​ ಆರೈಕೆ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಅದಾಗ್ಯೂ 53,871 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, ಕಳೆದ 24 ಗಂಟೆಗಳಲ್ಲಿ 88 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ 35,222 ಮಂದಿ ಕರೊನಾದಿಂದಾಗಿ ಮೃತಪಟ್ಟಂತಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಕರೊನಾ ಸಕ್ರಿಯ ಪ್ರಕರಣಗಳೆಷ್ಟು ಗೊತ್ತೇ? ಈ ಅಂಕಿ-ಅಂಶ ನೋಡಿದರೆ ನೀವಾಗಬಹುದು ನಿರಾಳ..
ರಾಜ್ಯದಲ್ಲಿ ಇದುವರೆಗೆ 28,49,997 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಆ ಪೈಕಿ 27,60,881 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನು ಐದು ದಿನಗಳ ಹಿಂದೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 28,34,630 ಆಗಿದ್ದು, ಗುಣಮುಖರ ಒಟ್ಟು ಸಂಖ್ಯೆ 26,98,822 ಇದ್ದು, ಸಕ್ರಿಯ ಪ್ರಕರಣಗಳ 1,01,042 ಇತ್ತು. ಆದರೆ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 53,871 ಆಗಿದ್ದು, ಒಂದು ವಾರದೊಳಗೇ ಸುಮಾರು ಅರ್ಧಕ್ಕರ್ಧದಷ್ಟು ಕಡಿಮೆ ಆದಂತಾಗಿದೆ.
ಕನ್ನಡಿಗರ ಕ್ಷಮೆ ಕೋರಿದ್ರು ನಿರ್ಮಲಾ ಸೀತಾರಾಮನ್!; ಎಲ್ಲದಕ್ಕೂ ನಾನೊಬ್ಳೇ ಹೊಣೆ ಅಲ್ಲ ಎಂದಿದ್ದೇಕೆ?

ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

ಅಂಬೆಗಾಲಿಡುವ ಮಗನ ಬಯೋಡೇಟಾ ಹಿಡಿದುಕೊಂಡು ಸಂದರ್ಶನಕ್ಕೆ ಹೋದ ಅಮ್ಮ; ಅಂಥದ್ದೇನಿತ್ತು ಅದರಲ್ಲಿ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
