ಮಂಡ್ಯ:ಕೋವಿಡ್ ಸೋಂಕು ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದ್ದ ಬೂಸ್ಟರ್ ಡೋಸ್ ಸೆ. 30ಕ್ಕೆ ಕೊನೆಯಾಗಲಿದೆ. ಮುಂದಿನ ತಿಂಗಳಿಂದ ಲಸಿಕೆ ಬೇಕಾದರೆ ಶುಲ್ಕ ಪಾವತಿಸಿ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬೇಕಾಗುತ್ತದೆ.ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ 75 ದಿನ ಉಚಿತವಾಗಿ ಜನರಿಗೆ ನೀಡುತ್ತಿದ್ದ ಕೋವಿಡ್ ವಿರುದ್ಧದ ಬೂಸ್ಟರ್ ಡೋಸ್ ಕೊಡುವ ಪ್ರಕ್ರಿಯೆ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಜಿಲ್ಲೆಯಲ್ಲಿ 13.42 ಲಕ್ಷ ಜನರಿಗೆ ಬೂಸ್ಟರ್ ಡೋಸ್ ನೀಡುವ ಗುರಿ ಹೊಂದಲಾಗಿತ್ತು. ಆದರೆ 3,89,143 ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಇನ್ನೂ ಶೇ.71ರಷ್ಟು ಜನರು ಲಸಿಕೆ ಪಡೆಯಬೇಕಿದೆ. ಅಂತೆಯೇ ಈವರೆಗೆ 3,55,157 ಜನರು ಕೋವಿಶೀಲ್ಡ್, 33,569 ಜನರು ಕೋವ್ಯಾಕ್ಸಿನ್ ಹಾಗೂ 417 ಮಕ್ಕಳು ಲಸಿಕೆ ಪಡೆದಿದ್ದಾರೆ.ಬೂಸ್ಟರ್ ಡೋಸ್ ನೀಡುವುದು ಶುರುವಾದ ಆರಂಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಲಸಿಕೆ ದೊರೆಯುತ್ತಿರಲಿಲ್ಲ. ಬೆಂಗಳೂರು ಅಥವಾ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕ ಪಾವತಿಸಿ ಪಡೆಯಬೇಕಿತ್ತು. ಅಮೃತ ಮಹೋತ್ಸವದ ಅಂಗವಾಗಿ 75 ದಿನ ಜಿಲ್ಲೆಯ ಎಲ್ಲ ಪಿಎಚ್‌ಸಿ, ಸಿಎಚ್‌ಸಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಮಿಮ್ಸ್‌ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಜುಲೈ 15ರಿಂದ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ಆರಂಭಿಸಲಾಗಿತ್ತು. ಅತಿ ಹೆಚ್ಚು ಲಸಿಕೆ ಪಡೆದಿರುವ ಜನರಿರುವ ತಾಲೂಕುವಾರು ಪಟ್ಟಿಯಲ್ಲಿ ನಾಗಮಂಗಲ(ಶೇ.34) ಮೊದಲ ಸ್ಥಾನದಲ್ಲಿ ಹಾಗೂ ಕೆ.ಆರ್.ಪೇಟೆ ತಾಲೂಕು (ಶೇ.24.7) ಕೊನೇ ಸ್ಥಾನದಲ್ಲಿವೆ. ಶ್ರೀರಂಗಪಟ್ಟಣ (ಶೇ.33.5), ಪಾಂಡವಪುರ (ಶೇ.31.3), ಮಳವಳ್ಳಿ (ಶೇ.30.8), ಮಂಡ್ಯ (ಶೇ.27.3) ಹಾಗೂ ಮದ್ದೂರು (ಶೇ.25.5) ಲಸಿಕೆ ಹಾಕಲಾಗಿದೆ.ಡೋಸ್ ಪಡೆಯಲು ನಿರಾಸಕ್ತಿ: ಕೋವಿಡ್ ಕಾಣಿಸಿಕೊಂಡ ಪ್ರಾರಂಭದಲ್ಲಿ ಜನರು ಮುಗಿಬಿದ್ದು ಲಸಿಕೆ ಪಡೆದುಕೊಂಡಿದ್ದರು. ಶಿಫಾರಸು ಮಾಡಿರುವ ಉದಾಹರಣೆ ಇತ್ತು. ಆದರೆ ಬೂಸ್ಟರ್ ಡೋಸ್ ಲಸಿಕೆ ವಿಚಾರದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಲಸಿಕೆ ಪಡೆದವರಿಗೆ ಅನೇಕ ಸಮಸ್ಯೆಗಳು ಬರುತ್ತವೆಂಬ ಮಾಹಿತಿ ಹರಿದಾಡಿದ ಪರಿಣಾಮ ಈ ರೀತಿಯಾಗಿದೆ ಎನ್ನಲಾಗುತ್ತಿದೆ.ಇನ್ನು ಜಿಲ್ಲೆಯಲ್ಲಿ 5.77 ಲಕ್ಷ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈವರೆಗೆ ಜಿಲ್ಲೆಯಲ್ಲಿ 6,63,014 (ಶೇ. 115) ಜನರಿಗೆ ಮೊದಲ ಹಾಗೂ 6,83,554(ಶೇ.118) ಜನರಿಗೆ ಲಸಿಕೆ ನೀಡಿ ಗುರಿ ಮೀರಿದ (ಶೇ.115) ಸಾಧನೆಯಾಗಿದೆ. ಅದೇ ರೀತಿ 18ರಿಂದ 44 ವರ್ಷದೊಳಗಿನ 7.65 ಲಕ್ಷ ಜನರಲ್ಲಿ 6,91,386 (ಶೇ.90.4) ಜನರು ಮೊದಲ, 7,14,816(ಶೇ.93.4) ಜನರು ಎರಡನೇ ಡೋಸ್ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
