ಬೆಂಗಳೂರು :ದೇಶದಲ್ಲಿ ಒಂದು ಕೋಟಿಗೂ ಅಧಿಕ ಕೋವಿಡ್ ಪರೀಕ್ಷೆ ನಡೆಸಿದ 6 ರಾಜ್ಯಗಳ ಪೈಕಿ, ಸಾವಿನ ಪ್ರಮಾಣದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ದೇಶದ 28 ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ 17ನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಕರೊನಾ ಸಾವಿನ ಪ್ರಮಾಣ ಇಳಿಮುಖವಾಗಿದ್ದು, ಶೇ.1.32 ಪ್ರಮಾಣದಲ್ಲಿ ಮುಂದುವರೆಯುತ್ತಿದೆ. ಆದರೆ, ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕಂಡುಬರುತ್ತಿರುವ ಖಚಿತ ಪ್ರಕರಣಕ್ಕೆ ಹೋಲಿಕೆ ಮಾಡಿದಲ್ಲಿ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದೆ.
ಬೆಂಗಳೂರಿನಲ್ಲಿ ಕಳೆದೆರಡು ತಿಂಗಳಿಂದ ಸೋಂಕಿತ ಪತ್ತೆಯಾದಲ್ಲಿ ಆತನ ಸಂಪರ್ಕದ ಸುಮಾರು 10 ರಿಂದ 50 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜತೆಗೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಮೊಬೈಲ್ ಘಟಕಗಳ ಮೂಲಕ ಮಾರುಕಟ್ಟೆ, ಹೋಟೆಲ್, ಶಾಪಿಂಗ್ ಮಾಲ್‌ಗಳು, ಕಾಲೇಜುಗಳು ಹಾಗೂ ಎಲ್ಲ ಜನಸಂದಣಿ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ರಾಜಧಾನಿಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದೆ. ಆದರೆ, ಧಾರವಾಡ, ಬೀದರ್, ದಕ್ಷಿಣ ಕನ್ನಡ, ಕೊಪ್ಪಳ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇ.2ಕ್ಕಿಂತ ಅಧಿಕವಾಗಿದೆ.
ದೇಶದಲ್ಲಿ ಹೆಚ್ಚು ಕೋವಿಡ್ ಸಾವಿನ ಪ್ರಮಾಣ ಹೊಂದಿದ ರಾಜ್ಯಗಳುರಾಜ್ಯಗಳು               ಸ್ಥಾನ       ಸಾವು (ಶೇ.ಪ್ರಮಾಣ)ಪಂಜಾಬ್                1ನೇ       3.2ಮಹಾರಾಷ್ಟ್ರ              2ನೇ       2.6ಸಿಕ್ಕಿಂ                    3ನೇ       2. 1ಗುಜರಾತ್                4ನೇ       1.9ಕರ್ನಾಟಕ                17ನೇ      1.3ಅರುಣಾಚಲ ಪ್ರದೇಶ      27ನೇ      0.3ಮಿಜೋರಾಂ             28ನೇ       0.2

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
