ಬೆಂಗಳೂರು:ಕರೊನಾ ನಿಯಂತ್ರಣಕ್ಕೆ ಈವರೆಗೂ ಆರೋಗ್ಯ ಮತ್ತು ಪೊಲೀಸ್ ಇಲಾಖೆ, ಪಾಲಿಕೆ ಸಿಬ್ಬಂದಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸೋಂಕು ಹೆಚ್ಚಳ ಹಾಗೂ ನಿರ್ವಹಣೆ, ಉಸ್ತುವಾರಿ ಹೊಣೆ ಹೆಚ್ಚಾಗಿದ್ದರಿಂದ ಬೇರೆ ಬೇರೆ ಇಲಾಖೆಯವನ್ನೂ ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.
ಪ್ರಮುಖವಾಗಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಂಟೇನ್ಮೆಂಟ್ ನಿರ್ವಹಣೆಗಾಗಿ ತಂಡ ರಚನೆ ಹಾಗೂ ರಚಿಸಲ್ಪಟ್ಟ ತಂಡಕ್ಕೆ ಕಾರ್ಯನಿರ್ವಹಣೆಗೆ ಸಹಕರಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸಂಪರ್ಕ ಪತ್ತೆ ತಂಡದ ಜವಾಬ್ದರಿಯನ್ನು ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಜತೆ ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕಿ ವಿ.ಮಂಜುಲಾ ಅವರಿಗೂ ಜವಾಬ್ದಾರಿ ನೀಡಲಾಗಿದೆ. ಅವರೊಂದಿಗೆ ತಂಡದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಅನ್ಬುಕುಮಾರ್, ರಾಜೀವ್​ಗಾಂಧಿ ಗ್ರಾಮೀಣ ವಸತಿ ನಿಗಮದ ಎಂಡಿ ರಾಮಪ್ರಸಾದ್, ಪೊಲೀಸ್ ಅಧೀಕ್ಷಕ ಶಂತನು ಸಿಂಹ, ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ಕುಮಾರ್ ಸಾಲಿಮಠ್, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಗೀತಾ ಅವರಿಗೆ ಹೊಣೆ ನೀಡಲಾಗಿದೆ.
ಇದನ್ನೂ ಓದಿ:ಅನಿಸಿಕೆ| ಮುಕ್ತಿಧಾಮಕ್ಕೊಂದು ಯುಕ್ತ ಸ್ಥಾನ ಅಗತ್ಯ
ಈ ತಂಡವು ಟೆಸ್ಟ್​ಗೆ ಬರುವ ವ್ಯಕ್ತಿಯ ಮೊಬೈಲ್ ಸಂಖ್ಯೆ ದೃಢೀಕರಣ, ಫಲಿತಾಂಶದ ನಂತರ 3ರಿಂದ 6 ಗಂಟೆಯೊಳಗೆ ಎಸ್3 ಪೋರ್ಟಲ್​ನಲ್ಲಿ ನವೀಕರಿಸುವುದು, ತೀವ್ರವಾದ ಪತ್ತೆ ಹಚ್ಚುವಿಕೆಯಲ್ಲಿ ತೊಡಗುವುದು, ಹೆಚ್ಚಿನ ಅಪಾಯದ ಸಂಪರ್ಕಗಳನ್ನು 24 ಗಂಟೆಯೊಳಗೆ ಗುರುತಿಸಿ ಮನೆಯಲ್ಲಿ ಸಂಪರ್ಕ ತಂಡಕ್ಕೆ ಕಳಿಸುವುದು, ಪತ್ತೆ ಹಚ್ಚಲು ಪರಿಣಾಮಕಾರಿ ತಂತ್ರಜ್ಞಾನ ಬಳಕೆ ಸಂಬಂಧ ಕೆಲಸ ಮಾಡಲಿದೆ. ಇವರೊಂದಿಗೆ ಕಂಟೇನ್ಮೆಂಟ್ ವಲಯಗಳ ನಿರ್ವಹಣೆಗಾಗಿ ಸರ್ವೆ ಸಮೀಕ್ಷೆ ಮತ್ತು ಭೂದಾಖಲೆ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಅಧಿಕಾರಿ, ಭೂಮಾಪಕರು, ಬೆರಳಚ್ಚುಗಾರರನ್ನು ಸಹ ಬಳಸಿಕೊಳ್ಳುವ ಸಂಬಂದ ಮುಖ್ಯಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
4ರಿಂದ ಕರ್ನಾಟಕ-ಕೇರಳ ಗಡಿ ಬಂದ್: ಕೇರಳ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twelve =
Remember me
