ಬೆಂಗಳೂರು :ಕೋವಿಡ್​ ಡ್ಯೂಟಿಯಲ್ಲಿ‌ ನಿರತರಾಗಿದ್ದು, ಕರೊನಾ ಸೋಂಕು ಅಥವಾ ಇತರೆ ಸಮಸ್ಯೆಯಿಂದ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ ಸವಲತ್ತು ಕಲ್ಪಿಸುವ ಸಂಬಂಧ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಂದು ಮಹತ್ವದ ಆದೇಶ ಹೊರಡಿಸಿದೆ. ಮೃತ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದಕ್ಕೆ ಮತ್ತು ಇತರ ಸವಲತ್ತಿಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.
ಕರೊನಾ ಕರ್ತವ್ಯನಿರತ ಶಿಕ್ಷಕರ ಸಾವಿನ ಕುರಿತು ಮೇ 17 ರಂದು ‘ವಿಜಯವಾಣಿ’ ಜಿಲ್ಲಾವಾರು ವಿವರ ನೀಡಿ ವರದಿ ಪ್ರಕಟಿಸಿತ್ತು. ತತ್ಪರಿಣಾಮವಾಗಿ, ಕೂಡಲೇ ಮಾಹಿತಿ ಸಲ್ಲಿಸಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್​​ಸುರೇಶ್ ಕುಮಾರ್‌ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮೃತರ ಕುಟುಂಬಕ್ಕೆ ಪರಿಹಾರ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಆಕ್ಸಿಜನ್ ಸಿಲಿಂಡರ್​ ಹೆಸರಲ್ಲಿ ವಂಚನೆ : ಇಬ್ಬರು ವಿದೇಶೀಯರ ಬಂಧನ
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವಾಗ ಸೋಂಕಿಗೆ ಒಳಗಾಗಿ ನಿಧನ ಹೊಂದಿರುವ ಅಧಿಕಾರಿ/ನೌಕರ/ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಮಂಜೂರು ಮಾಡುವ ಸಂಬಂಧ ಸಕ್ಷಮ‌ ಪ್ರಾಧಿಕಾರಗಳ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ. ಕೋವಿಡ್​​ನಿಂದಾಗಿ ಅಥವಾ ಇತರ ಅನಾರೋಗ್ಯ ಸಮಸ್ಯೆಗಳಿಂದ ಮರಣ ಹೊಂದಿರುವವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸೂಕ್ತ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಮತ್ತು ಇತರ ಸವಲತ್ತುಗಳನ್ನು ಮಂಜೂರು ಮಾಡುವ ಕುರಿತು ತುರ್ತು ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಆದೇಶಿಸಿದ್ದಾರೆ.
ಕರೊನಾ ಕೇಸ್​ ಇಳಿಕೆ : 24 ಗಂಟೆಗಳಲ್ಲಿ 2.81 ಲಕ್ಷ ಜನ ಪಾಸಿಟೀವ್

ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ್ದಕ್ಕೆ ಪಂಚಾಯಿತಿ ಸದಸ್ಯರ ಕಾಲಿಗೆ ಬಿದ್ದು ಕ್ಷಮೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
