ಬೆಂಗಳೂರು:ರಾಜ್ಯಾದ್ಯಂತ ಡೆಂಘೆ ಕಾಯಿಲೆ ಹರಡುತ್ತಿದೆ. ತಕ್ಷಣ ‘ವೈದ್ಯಕೀಯ ತುರ್ತು ಸ್ಥಿತಿ’ ೋಷಿಸಿ, ಕೋವಿಡ್ ಮಾದರಿಯಲ್ಲಿ ಯುದ್ಧೋಪಾದಿ ಕ್ರಮವಹಿಸಬೇಕು ಎಂದು ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಆಗ್ರಹಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಘೆ ಜ್ವರಕ್ಕೆ ನಿಖರವಾದ ಚಿಕಿತ್ಸೆ, ಔಷಧಿಯಿಲ್ಲ. ನಿಯಂತ್ರಿಸದಿದ್ದರೆ ಮಾರಕ ಕಾಯಿಲೆಗಳಾದ ಝೀಕಾ ವೈರಸ್, ಚಿಕೂನ್ ಗುನ್ಯಾ ಕಾಯಿಲೆಗಳು ಹರಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.
ಸೊಳ್ಳೆಗಳ ನಿಯಂತ್ರಣವೊಂದೇ ಮಾರಕ ಕಾಯಿಲೆಗೆ ಪರಿಹಾರವಾಗಿದೆ. ಮಳೆಗಾಲದಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚುತ್ತಿದ್ದಂತೆ ಈ ಕಾಯಿಲೆಗಳು ಹರಡಲಾರಂಭಿಸುತ್ತವೆ.
ಈ ಹಿನ್ನೆಲೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಅಗತ್ಯವಿದೆ. ಅರ್ಧಕ್ಕೆ ನಿಂತ ಸೇತುವೆಗಳು, ಮೇಲ್ಸೇತುವೆ, ರಸ್ತೆ, ಇನ್ನಿತರ ಕಾಮಗಾರಿ ಸ್ಥಳಗಳಲ್ಲಿ ಮಳೆ ನೀರು ನಿಂತು, ಸೊಳ್ಳೆಗಳ ಹಾವಳಿ ಉಲ್ಬಣಿಸುತ್ತದೆ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ, ನಗರಾಭಿವೃದ್ಧಿ ಇಲಾಖೆಗಳು, ಪಂಚಾಯಿತಿಗಳು, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಒಳಗೊಂಡ ರಚಿಸಬೇಕು ಎಂದು ಸಲಹೆ ನೀಡಿದರು.ಈ ಟಾಸ್ಕ್ ೆರ್ಸ್ ಪರಿಣತರ ಸಲಹೆ ಪಡೆದು ಕಾರ್ಯತತ್ಪರವಾಗಬೇಕು. ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು ಎಂದರು.
ಡೆಂಘೆ ಕಾಯಿಲೆಗೆ ಒಬ್ಬ ವೈದ್ಯ ಸೇರಿ 6-7 ಜನರು ಸತ್ತಿದ್ದಾರೆ. ಸಾವಿರಾರು ಜನರು ಸೋಂಕಿತರಾಗಿದ್ದು, ಮಕ್ಕಳಲ್ಲೂ ಹೆಚ್ಚುತ್ತಿದೆ. ಎಲ್ಲ ಶಾಲೆ-ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿಆಡಳಿತ ಮಂಡಳಿ ಸಭೆ ನಡೆಸಬೇಕು. ಡೆಂಘೆ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆಯೇ ಇಲ್ಲವೆಂಬುದು ಸರ್ಕಾರದ ಆದ್ಯ ಗಮನದಲ್ಲಿರಲಿ ಎಂದು ಒತ್ತಿ ಹೇಳಿದರು.
ಡೆಂಘೆ ಜ್ವರ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿದ ದರ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಹೆಚ್ಚು ದರ ಪಡೆದರೆ ಅಂತಹ ಆಸ್ಪತ್ರೆ, ಚಿಕಿತ್ಸಾ ಘಟಕಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ, ಪ್ರಯೋಗಾಲಯಗಳು ಈ ಲೋಪವೆಸಗಿದ್ದರೆ ಮುಚ್ಚಬೇಕು ಎಂದು ಡಾ.ಸಿ.ಎನ್.ಮಂಜುನಾಥ್ ಒತ್ತಾಯಿಸಿದರು.
ಮುಂಬರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನನ್ನ ಪತ್ನಿ ಅನಸೂಯಾ ಸ್ಪರ್ಧಿಸುವುದಿಲ್ಲ ಎಂದು ಡಾ.ಸಿ.ಎನ್.ಮಂಜುನಾಥ್ ಸ್ಪಷ್ಟಪಡಿಸಿದರು.
ಕೆಲವು ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಬರುತ್ತಿವೆ. ಆದರೆ ಈ ಬಗ್ಗೆ ನಮಗೂ ಅಚ್ಚರಿಯ ಸಂಗತಿಯೇ ಸರಿ. ಎಲ್ಲಿಂದ ಇಂತಹ ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ, ನಮಗಂತೂ ಶಾಕ್ ಆಗಿದೆ ಎಂದು ಡಾ.ಸಿ.ಎನ್.ಮಂಜುನಾಥ್ ಉದ್ಗಾರವೆತ್ತಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವೈದ್ಯಕೀಯ ಪ್ರಕೋಷ್ಠದ ಡಾ.ಕೆ.ನಾರಾಯಣ, ಡಾ.ಯೋಗಾನಂದ, ಪಕ್ಷದ ವಕ್ತಾರ ಅಶೋಕ್ ಕೆ.ಎಂ.ಗೌಡ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twenty =
Remember me
