ಬೆಂಗಳೂರು:ಸತತ ಮೂರನೇ ದಿನವೂ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಒಟ್ಟು 5,072 ಹೊಸ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 90,942ಕ್ಕೆ ಏರಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 55,388 ಆಗಿದೆ. ಕೊಂಚ ಸಮಾಧಾನದ ಸಂಗತಿ ಎಂದರೆ, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ.ನಿನ್ನೆ 2,037 ಜನರು ಡಿಸ್ಚಾರ್ಜ್​ ಆಗಿದ್ದರೆ, ಇಂದು ಇವರ ಪ್ರಮಾಣ 2,403 ಆಗಿದೆ.
ಇದನ್ನೂ ಓದಿ:ಕೋವಿಡ್ ನಿರ್ವಹಣೆಗೆ ಸಿಬ್ಬಂದಿ ಕೊರತೆ; ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಕೆಲಸ; ತಜ್ಞರಿಗೆ ವೇತನ ಹೆಚ್ಚಳ
ಸಾವಿನ ಸಂಖ್ಯೆಗೂ ಕಡಿವಾಣ ಬಿದ್ದಿದೆ. ನಿನ್ನೆ 110 ಜನರು ಮೃತಪಟ್ಟಿದ್ದರೆ, ಇಂದು ಆ ಸಂಖ್ಯೆ 72ಕ್ಕೆ ಇಳಿದಿದೆ. ಒಟ್ಟು ಸಾವಿನ ಪ್ರಮಾಣ 1,796ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ.1.97 ಆಗಿದ್ದು, ರಾಷ್ಟ್ರಿಯ ಸರಾಸರಿಗಿಂತ ಕಡಿಮೆ ಇದೆ.
ರಾಜಧಾನಿಯಲ್ಲಿ ಇಂದಿನ ಒಟ್ಟು ಕೇಸ್​ಗಳು 2,063 ನಿನ್ನೆ ಇದು 2,267 ಆಗಿತ್ತು. ಒಟ್ಟು ಪ್ರಕರಣಗಳ ಸಂಖ್ಯೆ 43,503ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 31,881 ಆಗಿದೆ. ನಿನ್ನೆಗೆ ಹೋಲಿಸಿದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ ಕಡಿಮೆಯಾಗಿದ್ದು ಇಂದು 686 ಜನರು ಚೇತರಿಕೆ ಕಂಡಿದ್ದಾರೆ. ನಿನ್ನೆ ಇವರ ಪ್ರಮಾಣ 746 ಇತ್ತು.
ಇದನ್ನೂ ಓದಿ:ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..!
ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಿನ್ನೆ 50 ಜನರು ಮೃತಪಟ್ಟಿದ್ದರೆ, ಇಂದು 30 ಜನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ರಾಜಧಾನಿಯಲ್ಲಿ ಕೋವಿಡ್​ನಿಂದಾದ ಒಟ್ಟು ಸಾವಿನ ಪ್ರಮಾಣ 863ಕ್ಕೆ ತಲುಪಿದೆ.
ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 20 =
Remember me
