ಬೆಂಗಳೂರು: ವಿಶ್ವದ 36 ರಾಷ್ಟ್ರಗಳು, ದೇಶದ ಮೂರು ರಾಜ್ಯಗಳಲ್ಲಿ ವರದಿಯಾಗಿರುವ ಕೋವಿಡ್ ಒಮಿಕ್ರಾನ್ ಹೊಸ ಉಪತಳಿಯಿಂದ ಸೋಂಕು ವೇಗವಾಗಿ ಹರಡುತ್ತದೆ. ಆದರೆ ಒಮಿಕ್ರಾನ್ ವೈರಾಣು ರೀತಿ ಪ್ರಾಣಾಂತಕವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಭಯ ನೀಡಿದರು.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ವರ್ಚುವಲ್ ವೇದಿಕೆಯಲ್ಲಿ ಬುಧವಾರ ಸಂವಾದದಲ್ಲಿ ಭಾಗಿಯಾದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ 18, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಹೊಸ ಉಪತಳಿ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಅಂತಹ ಪ್ರಕರಣಗಳು ಸದ್ಯದವರೆಗೂ ವರದಿಯಾಗಿಲ್ಲ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 64 ವರ್ಷದ ಪುರುಷರೊಬ್ಬರು ಡಿ.15ರಂದು ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ರೋಗ, ಅಸ್ತಮಾ, ಕ್ಷಯ, ಶ್ವಾಸಕೋಶದ ಸಮಸ್ಯೆ ಜತೆಗೆ ಕೋವಿಡ್ ಪಾಸಿಟಿವ್ ದೃಢಪಟ್ಡಿತ್ತು ಎಂದರು.
ಕೇರಳದಲ್ಲಿ ಐದು ಜನರು ಮೃತಪಟ್ಟಿದ್ದಾರೆ ಎಂದು ಆ ರಾಜ್ಯದ ಆರೋಗ್ಯ ಸಚಿವರು ಸಂವಾದದ. ವೇಳೆ ಮಾಹಿತಿ ಹಂಚಿಕೊಂಡಿದ್ದು, ಕೋವಿಡ್ ಪಾಸಿಟಿವ್ ಜತೆಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ವಿವರಿಸಿದ್ದಾರೆ. ಕೇಂದ್ರ ಸರ್ಕಾರದ‌ ಸೂಚನೆ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.
ಪಿಎಂ ಕೇರ್ ಅಡಿ ಪೂರೈಸಿದ ವೆಂಟಿಲೇಟರ್ ಗಳ ನಿರ್ವಹಣಾ ವೆಚ್ಚ ದುಬಾರೊಯಾಗಿದೆ. ಕಡಿಮೆ ಮಾಡುವಂತೆ ಕೋರಲಾಗಿದೆ. ಜತೆಗೆ ಐಸಿಎಂಆರ್ ಪೋರ್ಟಲ್ ನಲ್ಲಿ ಕೋವಿಡ್ ಸೋಂಕಿನ ದತ್ತಾಂಶಗಳು ಅಪ್ ಡೇಟ್ ಆಗುತ್ತಿಲ್ಲವೆಂದು ಹೇಳಿದಾಗ ಕೇಂದ್ರ ಆರೋಗ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.
ಆರ್ ಟಿಪಿಸಿಆರ್, ಪಿಪಿಇ ಮತ್ತಿತರ ಪರಿಕರ, ಔಷಧಿಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳಿಗೆ ಎಷ್ಟು ಬೇಕು,‌ಮೂರು ತಿಂಗಳಿಗೆ ಎಷ್ಟು ಬೇಕಾಗುತ್ತದೆ ಎಂದು ಪ್ರತ್ಯೇಕವಾಗಿ ಪ್ಲ್ಯಾನ್ ತಯಾರಿಸಲಾಗುತ್ತದೆ. ಸದ್ಯಕ್ಕೆ ದಾಸ್ತಾನು ಕೊರತೆ ತಲೆದೋರಿಲ್ಲವೆಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳ ಜತೆಗೆ ಗುರುವಾರ ಸಭೆ ನಡೆಯಲಿದ್ದು, ಖಾಸಗಿ ಆಸ್ಪತ್ರೆಗಳಿಗೆ ಆರ್ ಟಿಪಿಸಿಆರ್ ಟೆಸ್ಟ್ ದರ ನಿಗದಿ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಕಳೆದ 24 ತಾಸುಗಳಲ್ಲಿ 1,020. ಆರ್ ಟಿಸಿಪಿಆರ್ ಟೆಸ್ಟ್‌ಗಳಾಗಿದ್ದು, ದೇಶದಲ್ಲಿಯೇ ಅತ್ಯಧಿಕವಾಗಿದೆ. ಶನಿವಾರದ ವೇಳೆಗೆ ಈ ಪ್ರಮಾಣ ಪ್ರತಿದಿನ ಐದು ಸಾವಿರಕ್ಕೆ ತಲುಪಿಸಬೇಕೆಂಬ ಗುರಿ ನಿಗದಿಪಡಿಸಿದ್ದು, ಕನಿಷ್ಠ 50 ಮಾದರಿಗಳನ್ನು ಸಂಗ್ರಹಿಸಿದರೆ‌ ಜೀನೋಮ್ ಸೀಕ್ವೆನ್ಸ್ ಗೆ ಅನುಕೂಲವಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 + five =
Remember me
