ಬಳ್ಳಾರಿ: ಕೋವಿಡ್​ ವಾರ್ಡ್​ನಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಭರ್ಜರಿಯಾಗಿ ಡಾನ್ಸ್​ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ. ‘ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯಿ ಹಾಯಿ ರೋ…’ ಎಂದು ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.
ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡೋದನ್ನು ಬಿಟ್ಟು ಡಾನ್ಸ್ ಮಾಡೋದಾ? ಎಂದು ಹುಬ್ಬೇರಿಸಬೇಡಿ. ಇದುವರೆಗೂ ಕರೊನಾ ಮಣಿಸುವ ಹೋರಾಟದಲ್ಲಿ ನಿರತವಾಗಿದ್ದ ಕೆಲ ಸಿಬ್ಬಂದಿಯೇ ಈ ಡಾನ್ಸ್ ಮಾಡಿರೋದು. ಸದ್ಯ ಅವರು ಚಿಕಿತ್ಸೆ ನೀಡೋಕೆ ಆಗಲ್ಲ. ಏಕೆಂದರೆ ಅವರಿಗೂ ಸೋಂಕು ತಗುಲಿದ್ದು, ಬಳ್ಳಾರಿ ನಗರದ ವಿಮ್ಸ್ ದಂತ ವೈದ್ಯಕೀಯ ಕಾಲೇಜಿನ ಕೋವಿಡ್​ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿರಿvideo/ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ…’ ಹಾಡಿಗೆ ಕುಣಿದು ಕುಪ್ಪಳಿದ ಕರೊನಾ ಸೋಂಕಿತರು
ಕೋವಿಡ್ ಸೋಂಕಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೃತ್ಯ ಮಾಡುವ ಮೂಲಕ ಮನೋಲ್ಲಾಸ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಚಿತ್ರದ ‘ಮಸ್ತ್ ಮಸ್ತ್ ಹುಡುಗಿ ಬಂದ್ಲು…’ ಹಾಗೂಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಾಪುರಂಲೊ’ ಚಿತ್ರದ ಹಾಡಿಗೆ ಭರ್ಜರಿ ನೃತ್ಯ ಮಾಡಿದ ಸೋಂಕಿತ ಸಿಬ್ಬಂದಿ, ತಮ್ಮಲ್ಲಿನ ಕಲೆ ಪ್ರದರ್ಶಿಸುವ ಜತೆಗೆ ಸೋಂಕಿನ ಬಗ್ಗೆ ಭಯ ಬಿಟ್ಟು ಧೈರ್ಯವಾಗಿ ಇರಬೇಕು ಎಂಬ ಸಂದೇಶ ಸಾರಿದರು.
ಮಂಡ್ಯದ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ…’ ಹಾಡಿಗೆ ಹೆಜ್ಜೆ ಹಾಕುತ್ತ ಕಾಲ ಕಳೆಯುತ್ತಿದ್ದ ವಿಡಿಯೋ ಇತ್ತೀಗೆ ವೈರಲ್​ ಆಗಿತ್ತು.
ಇದೀಗ ಕರೊನಾ ಸಂಕಷ್ಟದ ಸಮಯದಲ್ಲೂ ಬೇಸರ ಕಳೆಯಲು ಸೋಂಕಿತರು ಡಾನ್ಸ್ ಮಾಡುತ್ತ ಕಾಲಕಳೆಯುತ್ತಿದ್ದು, ಅವರ ಆತ್ಮವಿಶ್ವಾಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
https://www.facebook.com/VVani4U/videos/3287084764669259/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
