ಶಿವಮೊಗ್ಗ:ಗದ್ದೆಗೆ ಬಂದು ಗೆದ್ದೆ ಎಂಬ ಖುಷಿಯಲ್ಲಿದ್ದ ಈ ಸೋಂಕಿತ ವ್ಯಕ್ತಿಗೆ ಮತ್ತದೇ ಆಸ್ಪತ್ರೆಗೆ ಬಂದು ಬಿದ್ದೆ ಎಂಬಂಥ ಪರಿಸ್ಥಿತಿ. ಕರೊನಾ ಸೋಂಕಿತರೊಬ್ಬರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತು ಕೂತಿದ್ದು, ಅವರನ್ನು ಪತ್ತೆ ಹಚ್ಚಿ ಮತ್ತದೇ ಆಸ್ಪತ್ರೆಗೆ ಕರೆ ತರಲಾಗಿದೆ.
ಶಿವಮೊಗ್ಗದ ಎನ್​.ಎಚ್. ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಮೂಲಕ ಗಮನ ಸೆಳೆದ ಕರೊನಾ ಸೋಂಕಿತ ವ್ಯಕ್ತಿಯ ಹೆಸರು ಹರೀಶ್ ಲಾಲ್. ಗಾಂಧಿಬಜಾರ್​ನ ನಿವಾಸಿಯಾಗಿರುವ 48 ವರ್ಷದ ಈ ವ್ಯಕ್ತಿ ಕೋವಿಡ್​-19 ಸೋಂಕಿಗೆ ಒಳಗಾದ್ದರಿಂದ ಎನ್.ಎಚ್. ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಕೆಲಬಾರಿ ಯತ್ನಿಸಿದ್ದ ಈ ವ್ಯಕ್ತಿ ಕೊನೆಗೂ ಅದರಲ್ಲಿ ಯಶಸ್ವಿ ಆಗಿದ್ದರು. ಆಸ್ಪತ್ರೆಯಿಂದ ಪರಾರಿಯಾಗಿ ಅದರ ಎದುರಿಗಿದ್ದ ಭತ್ತದ ಗದ್ದೆಯಲ್ಲಿ ಅವಿತುಕೊಂಡಿದ್ದರು. ಸೋಂಕಿತ ವ್ಯಕ್ತಿಯ ನಾಪತ್ತೆ ಪ್ರಕರಣದಿಂದ ಆಸ್ಪತ್ರೆ ಸಿಬ್ಬಂದಿ ಕೆಲಕಾಲ ತಲೆಕೆಡಿಸಿಕೊಳ್ಳುವಂತಾಗಿತ್ತು.
ಇದನ್ನೂ ಓದಿ:ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…
ನಂತರ ಆಸ್ಪತ್ರೆ ಸಿಬ್ಬಂದಿ ಇವರನ್ನು ಪತ್ತೆ ಮಾಡಿ, ಭತ್ತದ ಗದ್ದೆಯಿಂದ ಕರೆದುಕೊಂಡು ಬಂದು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟಕ್ಕೂ ಕರೊನಾ ಸೋಂಕಿತ ಈ ವ್ಯಕ್ತಿ ಕೋವಿಡ್​ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದೇಕೆ ಎಂಬುದು ಇದೀಗ ಸ್ಥಳೀಯರ ಕುತೂಹಲ ಕೆರಳಿಸಿದೆ.
ಸೋಂಕಿತ ತಾಯಿಯ ಶವಸಂಸ್ಕಾರಕ್ಕೆ ಮುಂದಾದ ಮಗನಿಗೆ ಗ್ರಾಮಸ್ಥರಿಂದ ವಿರೋಧ; ಕಾರಣವೇನು, ಆಮೇಲೇನಾಯಿತು?

ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆಕ್ಸಿಜನ್ ಸಿಲಿಂಡರ್ ಕಳ್ಳತನ; ಆಸ್ಪತ್ರೆ ಸಿಬ್ಬಂದಿಯ ಕೈವಾಡ ಶಂಕೆ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + fourteen =
Remember me
