ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ‘ಮನೆಯ ಹಿರಿಯರು ಹೃದಯಾಘಾತದಿಂದ ಮೃತಪಟ್ಟರು’ ಎಂಬ ಬಹಳಷ್ಟು ಪ್ರಕರಣಗಳಲ್ಲಿ ಸಾವಿಗೆ ಮೂಲ ಕಾರಣ ಕರೊನಾ ಆಗಿದ್ದರೂ ಕುಟುಂಬದವರು ಸತ್ಯಾಂಶ ಮುಚ್ಚಿಡುತ್ತಿರುವುದು ಬಹುದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ಪ್ರತಿನಿತ್ಯ ರಾಜ್ಯದಲ್ಲಿ 100ಕ್ಕೂ ಅಧಿಕ ಜನ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ಅದರ ಜತೆಗೆ ಅನಾರೋಗ್ಯ, ಹೃದಯಾಘಾತ, ಅಸ್ತಮಾ, ಶ್ವಾಸಕೋಶ ತೊಂದರೆ, ಕ್ಯಾನ್ಸರ್ ಸೇರಿ ಅನೇಕ ಕಾಯಿಲೆಗಳಿಂದ ಬಳಲುತ್ತಿರುವವರು ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಾಗಿವೆ. ಆದರೆ, ಅನಾರೋಗ್ಯದಿಂದ ಸಾವಿಗೀಡಾದವರನ್ನು ಪರೀಕ್ಷೆ ಮಾಡಿದಾಗ ಶೇ.90 ಜನರಲ್ಲಿ ಕರೊನಾ ದೃಢಪಡುತ್ತಿದೆ.
ನಿಧನರಾದವರ ಬಗ್ಗೆ ಗೌರವ ಭಾವನೆ ಹೊಂದುವುದರಲ್ಲಿ ತಪ್ಪಿಲ್ಲ. ಆದರೆ, ಸಾಮಾನ್ಯ ಸಾವು ಎನ್ನಲಾಗುತ್ತಿರುವ ಬಹಳಷ್ಟು ಪ್ರಕರಣಗಳಲ್ಲಿ ಕರೊನಾ ಗುಣಲಕ್ಷಣ ಕಂಡುಬಂದಿದೆ. ದೂರದಲ್ಲೇ ಇದ್ದು ಮೃತರಿಗೆ ಗೌರವಾರ್ಪಣೆ ಮಾಡುವುದು ವೈಯಕ್ತಿಕ ಹಾಗೂ ಸಮಾಜದ ದೃಷ್ಟಿಯಿಂದ ಉತ್ತಮ.| ಅಬ್ದುಲ್ ಅಜೀಂರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಆಸ್ಪತ್ರೆಗೆ ದಾಖಲಾದ ದಿನವೇ ಅಥವಾ ಒಂದು ದಿನದ ಹಿಂದಷ್ಟೇ ದಾಖಲಾಗಿ ಮೃತರಾಗುವವರ ಸಂಖ್ಯೆಯೇ ಬಹಳಷ್ಟಿದೆ. ಸುತ್ತಮುತ್ತಲಿನ ಜನ ಏನೆಂದುಕೊಳ್ಳುತ್ತಾರೋ ಎಂಬ ಅಳುಕಿನಿಂದಾಗಿ ಅಂತಿಮ ಕ್ಷಣದವರೆಗೂ ಗುಣಲಕ್ಷಣ ಮುಚ್ಚಿಡುತ್ತಾರೆ. ತೀವ್ರ ತೊಂದರೆ ಆದಾಗ ಅಥವಾ ಪ್ರಜ್ಞೆ ತಪ್ಪಿದಾಗ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅನೇಕರು ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿರುತ್ತಾರೆ. ಗುಣಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:VIDEO: ಅಪಾಯದಲ್ಲಿದೆ ಮಧ್ಯ ಚೀನಾ!
ಶಿಷ್ಟಾಚಾರದ ಭಯ:ಕರೊನಾದಿಂದ ಸಾವಿಗೀಡಾಗಿದ್ದಾರೆ ಎಂದು ಗೊತ್ತಾದರೆ, ಮನೆಯ ಯಾವೊಬ್ಬ ಸದಸ್ಯನಿಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗುವುದಿಲ್ಲ. ಜತೆಗೆ ಕರೊನಾ ಸೋಂಕಿನಿಂದ ಸಾವಿಗೀಡಾದರೆ ಸಮಾಜದಲ್ಲಿ ಅವರ ಕುಟುಂಬವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಆರೋಗ್ಯ ಇಲಾಖೆ ಶಿಷ್ಟಾಚಾರದ ಪ್ರಕಾರ ಮನೆಯವರು ಕ್ವಾರಂಟೈನ್ ಆಗಬೇಕಾಗುತ್ತದೆ ಎಂಬ ಭೀತಿಯಿಂದ ಸೋಂಕು ಇದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸದೆ, ಮೃತಪಟ್ಟ ನಂತರ ಸಹಜ ಸಾವು ಎಂದು ಬಿಂಬಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:‘ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!’
ಸಂಪ್ರದಾಯಬದ್ಧ ಅಂತ್ಯಕ್ರಿಯೆ ಆಸೆ:ವಿವಿಧ ಜಾತಿ, ಮತ, ಧರ್ಮ, ಪಂಗಡ ಹಾಗೂ ಜನಾಂಗಗಳಿದ್ದು ತಮ್ಮ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದರೆ ಮಾತ್ರ ಮೃತರ ಆತ್ಮಕ್ಕೆ ಶಾಂತಿ ಎಂಬುದು ನಂಬಿಕೆ. ಆದರೆ, ಸೋಂಕಿನಿಂದ ಮೃತಪಟ್ಟವರನ್ನು, ಅರೋಗ್ಯ ಸಿಬ್ಬಂದಿ ಯಾವುದೇ ಸಂಪ್ರದಾಯ ಆಚರಣೆ ಮಾಡದೆ ಶವಸಂಸ್ಕಾರ ಮಾಡುತ್ತಾರೆ. ರಾಜ್ಯದ ವಿವಿಧೆಡೆ ಅಮಾನವೀಯವಾಗಿ ಶವಗಳನ್ನು ಗುಂಡಿಗೆ ಎಸೆದ ವಿಡಿಯೋಗಳೂ ಈ ಆತಂಕಕ್ಕೆ ಪುಷ್ಟಿ ನೀಡಿವೆ. ಸಂಪ್ರದಾಯಬದ್ಧ ಅಂತಿಮ ಸಂಸ್ಕಾರ ದೊರಕಲೆಂಬ ಕಾರಣಕ್ಕೆ ಸೋಂಕು ಲಕ್ಷಣಗಳಿದ್ದು ಮೃತಪಟ್ಟರೂ ಕೆಲವು ಕುಟುಂಬಗಳು ಮುಚ್ಚಿಡುತ್ತಿವೆ. ಮನೆ ಬಳಿ ಪಾರ್ಥಿವಶರೀರ ವೀಕ್ಷಣೆಗೆ ನೂರಾರು ಜನರು ಬರುತ್ತಾರೆ. ಈ ವೇಳೆ ಕರೊನಾ ನಿಯಂತ್ರಣದ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ಸಮುದಾಯಕ್ಕೆ ಸೋಂಕು ಹಬ್ಬುವ ಅಪಾಯ ಹೆಚ್ಚಿದೆ.
ಇದನ್ನೂ ಓದಿ:ಕೆಲಸ ಕೊಡಿಸ್ತೇವೆ ಅಂದ್ರು, ನಾಲ್ಕಾರು ಉದ್ಯೋಗಾಕಾಂಕ್ಷಿಗಳಿಂದ 3 ಲಕ್ಷ ರೂಪಾಯಿ ಎಗರಿಸಿದ್ರು!
3 ತಿಂಗಳಲ್ಲಿ 4,457 ಅಂತ್ಯಸಂಸ್ಕಾರ ನಗರದಲ್ಲಿ ಸಾಂಪ್ರದಾಯಿಕವಾಗಿ ಅಂತಿಮ ಸಂಸ್ಕಾರ ನೆರವೇರಿಸುವ ಹಿಂದು ರುದ್ರಭೂಮಿ, ಮುಸ್ಲಿಂ ಸ್ಮಶಾನ, ಕ್ರೈಸ್ತರ ಸಮಾಧಿ ಸ್ಥಳಗಳಿವೆ. ಅದರ ಹೊರತಾಗಿ ವಿದ್ಯುತ್ ಚಿತಾಗಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತಿಮ ಸಂಸ್ಕಾರ ನಡೆಯುತ್ತಿದೆ. ಈ ವರ್ಷದ ಮೇ ನಿಂದ ಜು.17ರವರೆಗೆ 4,457 ಶವಸಂಸ್ಕಾರ ನಡೆದಿದೆ. ಕರೊನಾದಿಂದ ಮೃತಪಟ್ಟ 350-400 ಮಂದಿ ಹೊರತುಪಡಿಸಿ ಇತರರಲ್ಲಿ ಎಷ್ಟು ಜನರಿಗೆ ಕರೊನಾ ಇತ್ತು ಎಂಬುದು ತಿಳಿದಿಲ್ಲ. ಇನ್ನು ಮುಂದೆ ಸ್ಮಶಾನದಲ್ಲಿ ಶವದ ರ್ಯಾಪಿಡ್ ಟೆಸ್ಟ್ ನಡೆಸಿ 30 ನಿಮಿಷದಲ್ಲಿ ಫಲಿತಾಂಶ ತಿಳಿಸಲಾಗುತ್ತದೆ. ಪಾಸಿಟಿವ್ ಬಂದರೆ ಕುಟುಂಬದವರನ್ನೂ ಪರೀಕ್ಷಿಸಲಾಗುತ್ತದೆ. ಅವರಿಗೂ ಪಾಸಿಟಿವ್ ಬಂದರೆ ಚಿಕಿತ್ಸೆ ಒದಗಿಸಲು ಹಾಗೂ ಸಮುದಾಯಕ್ಕೆ ವ್ಯಾಪಿಸುವುದನ್ನು ತಡೆಯಲು ಸಹಕಾರಿ. ಈ ಕುರಿತು ಸದ್ಯದಲ್ಲೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ
ಗುಂಪಿಗೆ ಹರಡುವುದನ್ನು ತಡೆಯಬಹುದು:ಹೆಚ್ಚು ಕರೊನಾ ಪ್ರಕರಣಗಳಿರುವ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಯಾವುದೇ ಸಾವು ಸಂಭವಿಸಿದರೂ ಮೃತದೇಹವನ್ನು ಕಡ್ಡಾಯವಾಗಿ ಕರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರದಿಂದ ಸೂಚನೆಯಿದೆ. ಹೀಗಾದಾಗ ಮಾತ್ರ ಸೋಂಕು ಒಂದು ದೊಡ್ಡ ಗುಂಪಿಗೆ ಹರಡುವುದನ್ನು ತಡೆಯಬಹುದು. ಗದಗ ಜಿಲ್ಲೆಯಲ್ಲಿ ಉಸಿರಾಟ ತೊಂದರೆಯಿಂದ ಸಾವನ್ನಪ್ಪುತ್ತಿದ್ದ ಯುವಕನನ್ನು ಬದುಕಿಸಲು ಹೋಗಿ 10 ಜನರು ಸೋಂಕಿಗೆ ತುತ್ತಾಗಿರುವುದು ಅಚಾತುರ್ಯಕ್ಕೆ ಉದಾಹರಣೆ.
VIDEO: ‘ಚೀನಾದವ್ರು ಯೋಚ್ನೆ ಮಾಡದೇ ಏನೂ ಮಾಡಲ್ಲಾರಿ’- ರಾಹುಲ್ ಗಾಂಧಿ ವಿವರಿಸ್ತಿದ್ದಾರೆ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
