ನವದೆಹಲಿ: ನಮ್ಮ ದೇಶದಲ್ಲಿ ಕೋವಿಡ್‍-19 ಕೇಸ್‍ಗಳ ರಿಪೋರ್ಟಿಂಗ್‍ನಲ್ಲಿ ಕರ್ನಾಟಕದ ಸಾಧನೆ ಅತ್ಯುತ್ತಮ. ಬಿಹಾರ ಮತ್ತು ಉತ್ತರ ಪ್ರದೇಶಗಳ ಸ್ಥಿತಿ ಅತ್ಯಂತ ಕಳಪೆ ಎಂದು ಸ್ಟ್ಯಾನ್ ಫೋರ್ಡ್‍ ಯೂನಿವರ್ಸಿಟಿಯ ಕೋವಿಡ್‍ 19 ಡೇಟಾ ರಿಪೋರ್ಟಿಂಗ್ ಇಂಡೆಕ್ಸ್‍ ವರದಿ ಬೊಟ್ಟುಮಾಡಿದೆ.
ಅಧಿಕೃತ ವೆಬ್‍ಸೈಟ್‍ಗಳಲ್ಲಿ ಕೋವಿಡ್ 19 ಕೇಸ್‍ಗಳ ವರದಿ ಅಪ್ಡೇಟ್ ಮಾಡುವಲ್ಲಿ ವಿವಿಧ ರಾಜ್ಯಗಳ ಕಾರ್ಯಕ್ಷಮತೆ ಮತ್ತು ವರದಿ ಮಾಡುವ ಕ್ರಮದಲ್ಲೂ ಬಹಳ ವ್ಯತ್ಯಾಸವಿದೆ. ಹಿಮಾಚಲ ಪ್ರದೇಶ, ಮೇಘಾಲಯ ಮುಂತಾದ ರಾಜ್ಯಗಳು ಒಟ್ಟು ಲೆಕ್ಕವನ್ನು ಅಪ್ಡೇಟ್ ಮಾಡುತ್ತಿವೆ. ಆದರೆ, ಇದು ನಿತ್ಯದ ಟ್ರೆಂಡ್‍ ಅನ್ನು ಸೂಚಿಸುವುದಿಲ್ಲ. ಈ ಅಧ್ಯಯನ ವರದಿ ಜುಲೈ 21ರಂದು medRxiv ನಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ:ಕೋವಿಡ್‍-19ಗೆ ಪ್ರಾಣತೆತ್ತ ಸರ್ಕಾರಿ ನೌಕರರ ಕುಟುಂಬಕ್ಕೆ ವಿಶೇಷ ಕುಟುಂಬ ಪಿಂಚಣಿ- ಬಿಹಾರ ಕ್ಯಾಬಿನೆಟ್ ಒಪ್ಪಿಗೆ
29 ರಾಜ್ಯಗಳ ಕೋವಿಡ್ 19 ಡೇಟಾ ರಿಪೋರ್ಟಿಂಗ್ ಸ್ಕೋರ್‍ ಅನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಮೇ 19ರಿಂದ ಜೂನ್ 1ರ ತನಕ ಡೇಟಾವನ್ನು ತೆಗೆದುಕೊಳ್ಳಲಾಗಿದೆ. ಸ್ಕೋರ್ ಅನ್ನು ಸೊನ್ನೆ(ಕನಿಷ್ಠ) ಯಿಂದ 1(ಗರಿಷ್ಠ) ಎಂದು ವರ್ಗೀಕರಿಸಲಾಗಿದೆ. ಇದರಂತೆ, ಕರ್ನಾಟಕದ ಸ್ಕೋರ್‍ 0.61 ಇದ್ದು, ಉತ್ತಮ ಸ್ಕೋರ್ ಹೊಂದಿದೆ. ಬಿಹಾರ ಮತ್ತು ಉತ್ತರ ಪ್ರದೇಶಗಳ ಸ್ಕೋರ್ ಶೂನ್ಯ. ಇಡೀ ದೇಶದ ಕೋವಿಡ್‍-19 ಸ್ಕೋರ್‍ ಕ್ವಾಲಿಟಿ 0.26 ಮಾತ್ರ. ಇದು ಇಡೀ ದೇಶದ ರಿಪೋರ್ಟಿಂಗ್ ಕಳಪೆ ಎಂಬುದನ್ನು ಸೂಚಿಸುತ್ತದೆ. (ಏಜೆನ್ಸೀಸ್)
ಆನ್‌ಲೈನ್‌ಕ್ಲಾಸ್‌ನಿಂದ ದಶಕದ ನಂತರ ಕುಟುಂಬ ಸೇರಿದ ಬಾಲಕನ ರೋಚಕ ಕಥನ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
