ಬೆಂಗಳೂರು:ರಾಜ್ಯದಲ್ಲಿ ಕಾಡುತ್ತಿರುವ ಕರೊನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆಯೂ ಮಾಡಿದೆ.
ಸೋಂಕು ಹರಡದಂತೆ ನಿಯಂತ್ರಿಸಲು ಸೋಂಕಿತರ ಪತ್ತೆಯಲ್ಲೂ ಹೆಚ್ಚಳವಾಗುವುದು ಅನಿವಾರ್ಯ. ಸೋಂಕಿತರನ್ನು ಬೇಗ ಪತ್ತೆ ಮಾಡಿದಷ್ಟೂ ಸೋಂಕು ಹರಡುವ ತೀವ್ರತೆಯನ್ನು ತಗ್ಗಿಸಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ಟೆಸ್​ ಬೆಲೆ ತಗ್ಗಿಸಿರುವುದು ಉತ್ತಮ ನಡೆ ಎನಿಸಿಕೊಂಡಿದೆ. ಕೋವಿಡ್​-19 ಟೆಸ್ಟ್​ಗಳಲ್ಲಿ ಒಂದಾದ ಆರ್​ಟಿ-ಪಿಸಿಆರ್​ ಟೆಸ್ಟ್​ ಅತ್ಯಂತ ಸಮರ್ಪಕ ವಿಧಾನವಾಗಿದ್ದು, ಇದಕ್ಕೆ ಬಳಸುವ ರಿ-ಏಜೆಂಟ್​ಗಳ ಬೆಲೆ ತಗ್ಗಿರುವುದರಿಂದ ಟೆಸ್ಟ್​ ಶುಲ್ಕವೂ ತಗ್ಗಿದೆ.
ಜುಲೈನಲ್ಲಿ ಕೋವಿಡ್​ ಪರೀಕ್ಷೆಗೆ ಸಂಗ್ರಹಿಸಲಾದ ಸ್ವ್ಯಾಬ್​ ಮಾದರಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಲು 2 ಸಾವಿರ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು 3 ಸಾವಿರ ರೂ. ನಿಗದಿ ಪಡಿಸಲಾಗಿತ್ತು. ಬಳಿಕ ಆಗಸ್ಟ್​ನಲ್ಲಿ ಇದನ್ನು ಕ್ರಮವಾಗಿ 1,500 ಹಾಗೂ 2,500 ಎಂದು ನಿಗದಿಪಡಿಸಲಾಯಿತು. ಇದೀಗ ಈ ಶುಲ್ಕವನ್ನು ಇನ್ನಷ್ಟು ತಗ್ಗಿಸಲಾಗಿದ್ದು, ಗಂಟಲ ದ್ರವದ ಮಾದರಿಯನ್ನು ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು 1200 ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲು 1600 ರೂ. ನಿಗದಿ ಪಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 17 =
Remember me
