ಬೆಂಗಳೂರು:ರಾಜ್ಯದಲ್ಲಿ ಸೋಮವಾರ 1,963 ಹೊಸ ಕರೊನಾ ಪ್ರಕರಣ ಪತ್ತೆಯಾಗಿದ್ದು, 4 ತಿಂಗಳ ಬಳಿಕ ಹೊಸ ಪ್ರಕರಣ ದೃಢವಾಗುವ ಪ್ರಮಾಣ 2 ಸಾವಿರಕ್ಕಿಂತ ಕಡಿಮೆಯಾಗಿದೆ. ಜು.7ರಂದು 1,498 ಸೋಂಕಿತರು ಪತ್ತೆಯಾಗಿದ್ದು, 2 ಸಾವಿರಕ್ಕಿಂತ ಕಡಿಮೆ ಪ್ರಕರಣ ವರದಿಯಾದ ದಿನವಾಗಿತ್ತು. ಅದರ ನಂತರ, ಸತತ 4 ತಿಂಗಳು ಸೋಂಕಿತರ ಸಂಖ್ಯೆ 2 ಸಾವಿರದಿಂದ 11 ಸಾವಿರ ಗಡಿವರೆಗೂ ಏರಿಕೆಯಾಗಿ ಈಗ ಇಳಿಮುಖವಾಗಿದೆ.
ಸೋಮವಾರ 2,686 ಮಂದಿ ಸೋಂಕಿನಿಂದ ಗುಣರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 8,04,485ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಸಂಖ್ಯೆ 8,48,850 ಆಗಿದ್ದು, ಇದರಲ್ಲಿ 32,936 ಸಕ್ರಿಯ ಪ್ರಕರಣಗಳಿವೆ. 19 ಮಂದಿ ಬಲಿಯಾಗುವ ಮೂಲಕ ಒಟ್ಟು ಕರೊನಾ ಮೃತರ ಸಂಖ್ಯೆ 11,410ಕ್ಕೆ ತಲುಪಿದೆ. 876 ಸೋಂಕಿತರು ಐಸಿಯುನಲ್ಲಿದ್ದಾರೆ.
ಲಕ್ಷಕ್ಕಿಂತ ಕಡಿಮೆ ಪರೀಕ್ಷೆ:ಕಳೆದ ಒಂದು ತಿಂಗಳಿಂದ 1 ಲಕ್ಷಕ್ಕಿಂತ ಅಧಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಸೋಮವಾರ 15,457 ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮತ್ತು 69,508 ಆರ್‌ಟಿ-ಪಿಸಿಆರ್ ಟೆಸ್ಟ್ ಸೇಸರಿ ಒಟ್ಟು 84,945 ಕೋವಿಡ್ ಪರೀಕ್ಷೆ ಮಾಡಲಾಗಿದೆ.
2 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಯ್ತು ಹೂಡಿಕೆದಾರರ ಸಂಪತ್ತು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 2 =
Remember me
