
ಕರೊನಾ 2ನೇ ಅಲೆಗೆ ತತ್ತರಿಸಿರುವ ರಾಜ್ಯದಲ್ಲಿ ಈಗಾಗಲೆ ಶೇ.60 ರಕ್ತದ ಕೊರತೆ ಉಂಟಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಕೊಡುವುದರಿಂದ 28 ದಿನ ರಕ್ತ ಕೊಡಲಾಗುವುದಿಲ್ಲ. ಹೀಗಾಗಿ ರಕ್ತದ ಅಭಾವ ಮತ್ತಷ್ಟು ಹೆಚ್ಚಾಗುವ ಆತಂಕ ಶುರುವಾಗಿದೆ.
ಪ್ರಸ್ತುತ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರಾಜ್ಯ ಶಾಖೆಯ ಬೆಂಗಳೂರು ರಕ್ತ ನಿಧಿಯಲ್ಲಿ ಸದ್ಯ 100 ರಕ್ತದ ಯೂನಿಟ್​ಗಳು ಬಾಕಿ ಉಳಿದಿವೆ. ಈ ರಕ್ತವೂ ರೋಗಿಗಳಿಗೆ ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ ರಕ್ತ ಕೊರತೆಯಿಂದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಪ್ರಾಣ ಕಳೆದುಕೊಳ್ಳುವ ಆತಂಕವಿದೆ.
ಪ್ರತಿ ತಿಂಗಳು ರಕ್ತ ನಿಧಿಯಿಂದ ಅಂದಾಜು 3 ಸಾವಿರ ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ವರ್ಷಕ್ಕೆ 26 ಸಾವಿರ ರಕ್ತ ಯೂನಿಟ್ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ಈಗ ಪ್ರತಿ ತಿಂಗಳು 600 ಯೂನಿಟ್ ಸಂಗ್ರಹಿಸಲಾಗುತ್ತಿದೆ. ಕರೊನಾದಿಂದ ರಕ್ತದಾನ ಮಾಡಲು ದಾನಿಗಳು ಹಿಂದೇಟು ಹಾಕುತ್ತಿದ್ದಾರೆ. ಶಾಲಾ- ಕಾಲೇಜು, ಐಟಿ -ಬಿಟಿ ಕಂಪನಿಗಳು ಸೇರಿ ಇನ್ನಿತರ ಕಡೆಗಳಲ್ಲಿ ರಕ್ತದಾನ ಶಿಬಿರ ನಡೆಯುತ್ತಿಲ್ಲ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.1 ಜನರಿಗೆ ರಕ್ತ ಅಗತ್ಯವಿದೆ. ಬೆಂಗಳೂರಿನಲ್ಲೇ ಪ್ರತಿ ನಿತ್ಯ 700 ಯೂನಿಟ್ ರಕ್ತ ಬೇಡಿಕೆಯಿದೆ. ಆದರೆ, ಅಭಾವ ಹಿನ್ನೆಲೆಯಲ್ಲಿ ಪೂರೈಕೆಗೆ ಸಾಧ್ಯವಾಗುತ್ತಿಲ್ಲ.
ದಾನಿಗಳು ಸಂರ್ಪಸಿ:ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿ, ನಂ 26, ರೆಡ್ ಕ್ರಾಸ್ ಭವನ, 1ನೇ ಮಹಡಿ ಇಲ್ಲಿನ ವಿಳಾಸಕ್ಕೆ ತೆರಳಿ ರಕ್ತದಾನ ಮಾಡಬಹುದು ಅಥವಾ ದೂ: 080-22268435, 9902859859, 9035068435ಕ್ಕೆ ಸಂರ್ಪಸಿ.
ಲಸಿಕೆಗೆ ಮುನ್ನ ರಕ್ತದಾನ ಮಾಡಿ
ನ್ಯಾಷನಲ್ ಬ್ಲಡ್ ಟ್ರಾನ್ಸ್ ಪ್ಯೂಷನ್ ಕೌನ್ಸಿಲ್ (ಎನ್​ಬಿಟಿಸಿ), ಕರೊನಾ ಲಸಿಕೆ ಪಡೆದವರು 28 ದಿನದ ನಂತರ ರಕ್ತದಾನ ಮಾಡಬಹುದು ಎಂದಿದೆ. ಲಸಿಕೆ ಹಾಕುವ ಮುನ್ನ ದಾನಿಗಳು ಹಾಗೂ ಆರೋಗ್ಯವಂತ ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವಂತೆ ರೆಡ್ ಕ್ರಾಸ್ ಮನವಿ ಮಾಡಿದೆ.
ಕೋಟ್ಸ್​
ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಕರೊನಾ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಪಕ್ಷದ ಕಾರ್ಯಕರ್ತರು ನೆರವಾಗಬೇಕು.
| ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ಮುಂದಿನ 2 ತಿಂಗಳಲ್ಲಿ ಮತ್ತಷ್ಟು ರಕ್ತ ಅಭಾವ ಉಂಟಾಗುವ ಆತಂಕವಿದೆ. ಸಾಂಕ್ರಾ ಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕೈಗೊಂಡು ಆರೋಗ್ಯವಂತ ದಾನಿಗಳಿಂದ ರಕ್ತ ಸಂಗ್ರಹಿಸಲಾಗುವುದು. 20ಕ್ಕಿಂತ ಹೆಚ್ಚು ಮಂದಿ ರಕ್ತದಾನ ಶಿಬಿರ ಆಯೋಜಿಸಲು ಇಚ್ಛಿಸಿದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ.
| ಎಸ್. ನಾಗಣ್ಣ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆ ಅಧ್ಯಕ್ಷ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × four =
Remember me
